ಸ್ವಚ್ಚ ಭಾರತ ಅಭಿಯಾನ | Swachh Bharat Abhiyan Essay in Kannada

ಸ್ವಚ್ಚ ಭಾರತ ಅಭಿಯಾನ, Swachh Bharat Abhiyan clean india Essay prabandha in kannada

ಸ್ವಚ್ಚ ಭಾರತ ಅಭಿಯಾನ

Swachh Bharat Abhiyan Essay in Kannada
Swachh Bharat Abhiyan Essay in Kannada

ಈ ಲೇಖನಿಯಲ್ಲಿ ಸ್ವಚ್ಚ ಭಾರತ ಅಭಿಯಾನದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಪಿಠೀಕೆ

ಈ ಸ್ವಚ್ಚ ಭಾರತ ಅಭಿಯಾನವನ್ನು ಮೊದಲು ಗಾಂದೀಜಿಯವರು ಸೂಚಿಸಿದ್ದರು. ಇದು ಗಾಂಧೀಜಿಯವರು ಕಂಡ ಕನಸಾಗಿತ್ತು. ನಂತರ ಇದಕ್ಕೆ ಮೋದಿಯವರು ಚಾಲನೆಯನ್ನು ನೀಡಿದರು. ಇಡೀ ನಮ್ಮದೇಶಕ್ಕೆ ಸ್ವಚ್ಚತೆಯ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಸ್ವಚ್ಚಂದವಾದ ಪರಿಸರವು ದೇಶಕ್ಕೆ ಹಿತವಾಗಿರುತ್ತದೆ. ಎಲ್ಲಿ ಸ್ವಚ್ಚತೆ ಇರುವುದೋ ಅಲ್ಲಿ ದೇವರು ನೆಲೆಸಿರುತ್ತಾನಂತೆ ಎಂಬ ಮಾತು ಕೂಡ ಇದೆ. ನಮ್ಮ ಆರೋಗ್ಯದ ದೃಷ್ಠಿಯಿಂದಲೂ ಕೂಡ ಸ್ವಚ್ಚತೆಯು ಅತೀ ಮುಖ್ಯವಾಗಿರುವುದು. ದೇಶದ ಪ್ರಗತಿಗೆ ಇದು ಕೂಡ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ.

ವಿಷಯ ವಿವರಣೆ

ಗಾಂಧೀಜಿ ಯವರು ಕಂಡ ಕನಸನ್ನು ಭಾರತದ ಪ್ರಧಾನಮಂತ್ರಿಗಳಾಗಿರುವ ನರೇಂದ್ರ ಮೋದಿ ಯವರು ನೆರವೇರಿಸಿದ್ದಾರೆ. ಅದಕ್ಕಾಗಿ ಮಹಾತ್ಮ ಗಾಂದೀಜಿಯವರ ಜನ್ಮ ದಿನದಂದು ಸ್ವಚ್ಚ ಭಾರತ ಅಭಿಯಾನಕ್ಕೆ ಚಾಲನೆಯನ್ನು ನೀಡಿದರು. ದೇಶದ ಎಲ್ಲೇಡೆಯೂ ಇದಕ್ಕೆ ಉತ್ತಮವಾದ ಪ್ರತಿಕ್ರಿಯೆಯು ಸಿಕ್ಕಿದೆ. ಅತ್ಯಂತ ಮಹತ್ವಕಾಂಕ್ಷೆಯ ಯೋಜನೆಯಾಗದೆ. ಈ ಅಭಿಯಾನವು ರಾಷ್ಟ್ರೀಯ ಮಟ್ಟದ ಸ್ವಚ್ಚತೆಯನ್ನು ಕೇಂದ್ರೀಕರಿಸುವ ಅಭಿಯಾನವಾಗಿದೆ. ಮೋದಿ ಸರ್ಕಾರವು ತಂದಿರುವ ಈ ಯೋಜನೆಯಿಂದ ಸ್ವಚ್ಚತೆಯ ಬಗ್ಗೆ ಜನರಲ್ಲಿ ಹೆಚ್ಚಿನ ಜಾಗೃತಿಯನ್ನು ಮೂಡಿಸುವುದು. ಇದರ ಮುಖ್ಯ ಉದ್ದೇಶವಾಗಿದೆ. ಇದು ಆರೋಗ್ಯವನ್ನು ಕುರಿತು ಯೋಚಿಸಿದರೆ ಈ ಅಭಿಯಾನದಿಂದ ಜನರ ಆರೋಗ್ಯವನ್ನು ಕಾಪಾಡಬಹುದು ಮತ್ತು ಸುಂದರವಾದ ಪರಿಸರವನ್ನು ಕಾಪಾಡಿಕೊಳ್ಳಬಹುದು. ಸ್ವಚ್ಚತೆಯಿಲ್ಲದೆ ದೇಶವಿಲ್ಲ.

ಸ್ವಚ್ಚಭಾರತ ಅಭಿಯಾನ

ಪ್ರಧಾನಿ ಮೋದಿ ಯವರು ಅಧಿಕಾರಕ್ಕೆ ಬಂದ ನಂತರ ಗಾಂಧೀಜಿಯವರು ಕಂಡಂತ ಕನಸನ್ನ ನೇರವೇರಿಸುವುದರ ಮೂಖಾಂತರ ರಾಷ್ಟ್ರೀಯ ಮಟ್ಟದಲ್ಲಿಈ ಅಭಿಯಾನವನ್ನು ತಂದರು. ಅವರು ಈ ಯೋಜನೆಯನ್ನು ಅಧಿಕೃತವಾಗಿ ಅಕ್ಟೋಬರ್‌ ೦೨ \ ೨೦೧೪ ರಂದು ಮಹಾತ್ಮ ಗಾಂಧೀಜಿಯವರ ಜನ್ಮ ದಿನಾಚರಣೆಯ ಸಮಯದಲ್ಲಿ ʼಸ್ವಚ್ಚ ಭಾರತ ಅಭಿಯಾನʼ ಯೋಜನೆಯನ್ನು ಘೋಷಿಸಿದರು. ಈ ಯೋಜನೆಯು ಭಾರತದ ಎಲ್ಲ ನಗರಗಳು ಮತ್ತು ಹಳ್ಳಿಗಳಲ್ಲಿ ಶೌಚಾಲಯಗಳನ್ನು ನಿರ್ಮಿಸುವುದು ಮತ್ತು ಇಡೀ ದೇಶದ ರಸ್ತೆಗಳು ಮತ್ತು ಮೂಲಸೌಕರ್ಯಗಳನ್ನು ಸ್ವಚ್ಚಗೊಳಿಸುವುದು ಇದರ ದೊಡ್ಡ ಗುರಿಯಾಗಿದೆ. ಈ ಅಭಿಯಾನವು ದೇಶದ ಎಲ್ಲ ಗ್ರಾಮಗಳು ಮತ್ತು ನಗರಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲು ದೇಶದಲ್ಲಿ ಸ್ವಚ್ಚತಾ ಅಭಿಯಾನವನ್ನು ಅರಂಭಿಸಿದ್ದಾರೆ. ಬಯಲಿನಲ್ಲಿ ಮಲವಿಸರ್ಜನೆ ಮಾಡುವುದು ಎಷ್ಟು ಅಪಾಯಕಾರಿ ಮತ್ತು ಹಾನಿಕಾರಕ ಎಂಬುದನ್ನ ಎಲ್ಲರಿಗೂ ಮನವರಿಕೆ ಮಾಡಿಸುವುದು. ಇದರಿಂದ ಅನೇಕ ರೋಗಗಳು ಹರಡುತ್ತವೆ. ಅದಕ್ಕೆ ಸ್ವಚ್ಚಂದವಾದ ವಾತವರಂವನ್ನು ನಿರ್ಮಿಸುವುವದು. ಸಾರ್ವಜನಿಕ ಜಾಗೃತಿ ಮೂಡಿಸಲು ಸ್ವಚ್ಚತೆ ಮತ್ತು ಸಾರ್ವಜನಿಕ ಆರೋಗ್ಯ ಕಾರ್ಯಕ್ರಮಗಳೊಂದಿಗೆ ಜನರನ್ನು ಸಂಪರ್ಕಿಸುವುದು. ಎಲ್ಲಾ ನೈರ್ಮಲ್ಯ ಸಂಬಂಧಿತ ವ್ಯವಸ್ಥೆಗಳನ್ನು ವಿನ್ಯಾಸಗೊಳಿಸಲು,ಕಾರ್ಯಗತಗೊಳಿಸಲು ಮತ್ತು ಕಾರ್ಯನಿರ್ವಹಿಸಲು ನಗರ ಸ್ಥಳೀಯ ಸಂಸ್ಥೆಗಳನ್ನು ಬಲಪಡಿಸುವುದು.ಹಲವಾರು ಯೋಜನೆಗಳನ್ನು ತರುವುದರ ಮೂಲಕ ಸ್ವಚ್ಚಭಾರತ ಅಭಿಯಾನಕ್ಕೆ ಪೋತ್ಸಾಹ ನೀಡಲಾಯಿತು.

ಸ್ವಚ್ಚ ಭಾರತ ಅಭಿಯಾನದ ಉದ್ದೇಶಗಳು

  • ಸ್ವಚ್ಚಂದವಾದ ಪರಿಸರವನ್ನು ಅಥವಾ ವಾತವರಣವನ್ನು ಕಲ್ಪಿಸುವವುದು.
  • ದೇಶದ ಜನತೆಯನ್ನು ಆರೋಗ್ಯವಾಗಿಡುವುದು.
  • ಬಯಲು ಶೌಚಾಲಯವನ್ನು ನಿರ್ಮೂಲನೆ ಮಾಡುವುದು.
  • ತ್ಯಾಜ್ಯವಸ್ತುವನ್ನು ಬೇರ್ಪಡಿಸುವುದು.
  • ದೇಶವು ಸ್ವಚ್ಚತೆಯ ರಾಷ್ಟ್ರವಾಗಬೇಕೆಂಬುದು ಇದರ ಮುಖ್ಯ ಉದ್ದೇಶವಾಗಿದೆ.

ಉಪಸಂಹಾರ

ಸ್ವಚ್ಚತೆ ಇಲ್ಲದೆ ದೇಶವಿಲ್ಲ. ಸಚ್ಚತೆಯೆಂಬುದು ದೇಶದ ಪ್ರಗತಿಯಾಗಿದೆ. ಈ ಯೋಜನೆಯು ಜನರ ಹಾಗು ದೇಶದ ಹಿತವನ್ನು ಬಯಸುತ್ತದೆ. ಸ್ವಚ್ಚಂದವಾದ ಪರಿಸರವನ್ನು ಅಥವಾ ವಾತವರಣವನ್ನು ನೋಡಬಹುದು. ಈ ಸ್ವಚ್ಚ ಭಾರತ ಅಭಿಯಾನವನ್ನು ಗಾಂಧೀಜಿಯವರು ಕಂಡ ಕನಸಾಗಿತ್ತು. ಇಂದು ಈ ಯೋಜನೆಯ ಮೂಖಾಂತರ ನನಸಾಗುತ್ನತಿದೆ. ನಮ್ಮದೇಶಕ್ಕೆ ಸ್ವಚ್ಚತೆಯ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ನಮ್ಮ ಆರೋಗ್ಯದ ದೃಷ್ಠಿಯಿಂದಲೂ ಕೂಡ ಸ್ವಚ್ಚತೆಯು ಅತೀ ಮುಖ್ಯವಾಗಿರುವುದು. ದೇಶದ ಪ್ರಗತಿಗೆ ಇದು ಕೂಡ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ.

FAQ

ಸ್ವಚ್ಚ ಭಾರತ ಅಭಿಯಾನ ಯೋಜನೆಯನ್ನು ಯಾವಾಗ ಜಾರಿಗೆ ತಂದರು ?

ಅಕ್ಟೋಬರ್‌ 2- 2004 ರಂದು ಜಾರಿಗೆ ತಂದರು.

ಸ್ವಚ್ಚ ಭಾರತ ಅಭಿಯಾನ ಯಾರು ಕಂಡ ಕನಸಾಗಿತ್ತು ?

ಗಾಂಧೀಜಿ ಯವರು ಕಂಡ ಕನಸಾಗಿತ್ತು.

ಇತರೆ ಪ್ರಬಂಧಗಳು:

ಪರಿಸರ ಸಂರಕ್ಷಣೆ ಪ್ರಬಂಧ

ಗಾಂಧಿ ಜಯಂತಿಯ ಬಗ್ಗೆ ಪ್ರಬಂಧ


Leave your vote

Leave a Comment

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ