ಕನ್ನಡ ಸಂಸ್ಕೃತಿ ಪ್ರಬಂಧ | Kannada Culture Essay in Kannada

ಕನ್ನಡ ಸಂಸ್ಕೃತಿ ಪ್ರಬಂಧ, Kannada Culture kannada samskruthi essay prabandha in kannada

ಕನ್ನಡ ಸಂಸ್ಕೃತಿ ಪ್ರಬಂಧ

Kannada Culture Essay in Kannada
ಕನ್ನಡ ಸಂಸ್ಕೃತಿ ಪ್ರಬಂಧ | Kannada Culture Essay in Kannada

ಈ ಲೇಖನಿಯಲ್ಲಿ ಕನ್ನಡ ಸಂಸ್ಕೃತಿಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಪೀಠಿಕೆ

ಒಂದು ಜನಾಂಗ ತನ್ನ ತನವನ್ನು ವಿಶಿಷ್ಟವಾಗಿ ಉಳಿಸುವುದು ಸಂಸೃತಿಯಿಂದ ಹಾಗೆ ಒಂದು ಜನಾಂಗ ಅಥವಾ ಜನವರ್ಗ, ಇನ್ನೊಂದು ಜನಾಂಗಕಿಂತ ಬೇರೆ ವಿಶಿಷ್ಟತೆಗಳನ್ನು ಗುರುತಿಸುವುದರ ಮೊತ್ತವೇ ಒಂದು ನಾಡಿನ ಸಂಸೃತಿಯಾಗಿದೆ. ನಮ್ಮ ಹೆಮ್ಮೆ ಕನ್ನಡ ಸಂಸೃತಿಯ ತವರೂರಾಗಿದೆ. ಕನ್ನಡ ಎಂದರೆ ಕೇವಲ ವರ್ಣಮಾಲೆಯಲ್ಲ, ಅದು ಕರುನಾಡ ನೆಲ, ಜಲ, ಜನ, ಬದುಕು, ಸಾಹಿತ್ಯ, ಸಂಸ್ಕೃತಿ, ಕಲೆ, ಸಂಗೀತ ಎಲ್ಲವನ್ನೂ ಒಳಗೊಂಡಿದೆ. ಕರುನಾಡು ಸ್ವರ್ಗದ ಸೀಮೆ-ಕಾವೇರಿ ನದಿ ಹುಟ್ಟಿದ ನಾಡು. ಕಲ್ಲಲ್ಲಿ ಕಲೆಯನು ಕಂಡ-ಬೇಲೂರ ಶಿಲ್ಪದ ಬೀಡು. ಬಸವೇಶ್ವರ, ರನ್ನ-ಪಂಪರ ಕವಿವಾಣಿಯ ನಾಡು ನಮ್ಮ ಕನ್ನಡ ನಾಡು. ಚಾಮುಂಡಿ ರಕ್ಷೆಯು ನಮಗೆ- ಗೊಮ್ಮಟೇಶ್ವರ ಕಾವಲು ಇಲ್ಲಿ. ಶೃಂಗೇರಿ ಶಾರದೆ ವೀಣೆ- ರಸತುಂಗೆ ಆಗಿದೆ ಇಲ್ಲಿ. ವಿಶ್ವಖ್ಯಾತಿಯ ವಿಶ್ವೇಶ್ವರಯ್ಯ ಜನಿಸಿದ ಈ ನಾಡು. ಇದೆ ನಾಡು- ಇದೆ ಭಾಷೆ ಎಂದೆಂದೂ ನಮ್ಮದಾಗಿರಲಿ, ಎಲ್ಲೇ ಇರಲಿ ಹೇಗೆ ಇರಲಿ ನಮ್ಮ ಉಸಿರಲ್ಲಿ ಕನ್ನಡ ಸದಾ ಅಚ್ಚ ಹಸಿರಾಗಿರಲಿ ಹಾಗೆ ಕನ್ನಡ ಸಂಸೃತಿಯನ್ನು ಉಳಿಸೋಣ, ಬೆಳೆಸೋಣ.

ವಿಷಯ ವಿವರಣೆ

ಸಂಸೃತಿಯೆಂಬುದು ಒಂದೇ ದಿನದಲ್ಲಿ ಸೃಷ್ಟಿಯಾಗಿದ್ದಲ್ಲ. ಹಲವು ಶತಮಾನಗಳಿಂದ ಒಂದು ನಾಡಿನಲ್ಲಿ ಜೀವನವು ನಡೆದು ಬಂದಿರುವ ಪರಿಣಾಮ ಅಥವಾ ಫಲವಾಗಿದೆ. ಸರ್ವ ಜನಾಂಗದ ಶಾಂತಿಯ ತೋಟ ನಮ್ಮ ಕನ್ನಡ ನಾಡು. ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂಬಂತೆ ನಾವು ದೇಶದ ಯಾವುದೇ ಮೂಲೆಯಲ್ಲಿದ್ದರು ಕನ್ನಡವನ್ನು ಉಳಿಸಿ, ಬೆಳೆಸಿ ಹಾಗು ನಮ್ಮ ಕನ್ನಡದ ಸಂಸ್ಕೃತಿಯನ್ನು ಎಂದಿಗೂ ಮರೆಯದೇ ಗೌರವಿಸಿ ಉಳಿಸಿ, ಬೆಳೆಸಿ. ಭಾರತವು ಅನೇಕ ಸಂಸ್ಕೃತಿಗಳನ್ನೋಳಗೊಂಡ ನಾಡಾಗಿದೆ. ಬಹು-ಸಂಸ್ಕೃತಿಯ ಸಮಾಜವಾಗಿ ನಿಂತಿದೆ. ಇಲ್ಲಿನ ಜನರು ವಿವಿಧ ಧರ್ಮ, ಸಂಪ್ರದಾಯ ಮತ್ತು ಪದ್ಧತಿಗಳನ್ನು ಅನುಸರಿಸಿದ್ದಾರೆ. ಜನರ ಆಹಾರ ಪದ್ದತಿ, ಉಡುಗೆ ತೊಡುಗೆ, ನಂಬಿಕೆ, ತತ್ವಜ್ಞಾನ ಇವು ಜನರ ಬದುಕಿನ ಕ್ರಮವಾಗಿವೆ. ಆದರೆ ಇವು ಸಂಸೃತಿಯಾಗಿ ಹೊರಹೊಮ್ಮಿವೆ. ಹಾಗೆ ʼಕಲಿಯೋಕೆ ಕೋಟಿ ಭಾಷೆ, ಆಡೋಕೆ ಒಂದೇ ಭಾಷೆ ಕನ್ನಡ… ಕನ್ನಡ… ಕಸ್ತೂರಿ… ಕನ್ನಡ… ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕುʼ. ಕನ್ನಡ ನಾಡು-ನುಡಿಯಲ್ಲಿ ಶ್ರೇಷ್ಠತೆ ಇದೆ. “ಕನ್ನಡ ಭಾಷೆ ನಮ್ಮ ಸಂಸ್ಕೃತಿ” ನಾವು ನಮ್ಮ ಕನ್ನಡದ ಸುಗ್ಗಿಯನ್ನು ಕೇವಲ ನವೆಂಬರ್ ಮಾಸದಲ್ಲಿ ಮಾತ್ರವಲ್ಲ ಪ್ರತಿ ದಿನ ಆಚರಿಸಬೇಕು. ಕಣ ಕಣದಲ್ಲೂ ಕನ್ನಡವಾಗಿರಬೇಕು. ಹಾಗೆ ಕನ್ನಡನಾಡು ಸಂಸೃತಿಗಳ ಬೀಡು.

ಕನ್ನಡನಾಡಿನ ಸಂಸೃತಿಗಳು

ಹಬ್ಬಗಳು :

ಹಬ್ಬ ಹರಿದಿನಗಳಲ್ಲಿ ಸರ್ಕಾರದಿಂದ ರಜೆ ಘೋಷಿಸಲಾಗುತ್ತದೆ. ಭಾರತವು ಅನೇಕ ಹಬ್ಬಗಳನ್ನು ಆಚರಿಸುತ್ತದೆ. ನಮ್ಮ ದೇಶದ ರಾಷ್ಟ್ರೀಯ ಹಬ್ಬಗಳೆಂದರೆ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ ಮತ್ತು ಗಾಂಧಿ ಜಯಂತಿ. ಭಾರತದ ಹೆಸರಾಂತ ಧಾರ್ಮಿಕ ಹಬ್ಬಗಳೆಂದರೆ ದೀಪಾವಳಿ, ಗಣೇಶ ಚತುರ್ಥಿ, ಹೋಳಿ, ಯುಗಾದಿ, ಸಂಕ್ರಾಂತಿ, ರಕ್ಷಾ ಬಂಧನ, ರಥ ಯಾತ್ರೆ, ಮಹಾ ಶಿವರಾತ್ರಿ, ಕ್ರಿಸ್‌ಮಸ್, ಓಣಂ, ಜನ್ಮಾಷ್ಟಮಿ, ಮತ್ತು ಅನೇಕ ಇತರ ಹಬ್ಬಗಳನ್ನು ದೇಶದಾದ್ಯಂತ ಬಹಳ ಹೆಮ್ಮೆ ಮತ್ತು ಏಕತೆಯಿಂದ ಆಚರಿಸಲಾಗುತ್ತದೆ. ಹಬ್ಬಗಳ ನಾಡಾಗಿದೆ.

ನೃತ್ಯಗಳು :

ಅತೀ ಪ್ರಾಮುಖ್ಯತೆಯನ್ನು ಹೊಂದಿರುವುದಾಗಿದೆ. ಯಕ್ಷಗಾನವು ಲಿಖಿತ ಲಿಪಿಯ ಕೊರತೆಯನ್ನು ಹೊಂದಿದೆ ಮತ್ತು ಕಲಾವಿದನ ಸ್ವಯಂಪ್ರೇರಿತ ಸಾಮರ್ಥ್ಯ, ಸುಧಾರಿಸಲು, ಉತ್ತಮ ವಾಗ್ಮಿ ಮತ್ತು ಕಥಾವಸ್ತು ಮತ್ತು ಪಾತ್ರದ ಬಗ್ಗೆ ಉತ್ತಮ ಜ್ಞಾನವನ್ನು ಹೊಂದಲು ಸಂಪೂರ್ಣವಾಗಿ ಅವಲಂಬಿತವಾಗಿದೆ. ಯಕ್ಷಗಾನದ ವಿಶಿಷ್ಟ ಕಲಾ ಪ್ರಕಾರವು ನೃತ್ಯ.

ಆಹಾರ ಪದ್ದತಿ :

ಪಾಕಪದ್ಧತಿಯಲ್ಲಿ ವ್ಯಾಪಕವಾದ ಆಹಾರ ಪ್ರಭೇದಗಳಿವೆ. ಪ್ರತಿಯೊಂದು ಪ್ರದೇಶವು ತನ್ನದೇ ಆದ ಅಡುಗೆ ವಿಧಾನವನ್ನು ಹೊಂದಿದೆ. ದೇಶದ ಪ್ರತಿಯೊಂದು ಭಾಗವು ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಉತ್ತರ, ಪೂರ್ವ, ಪಶ್ಚಿಮ, ದಕ್ಷಿಣ ಮತ್ತು ಈಶಾನ್ಯ ವರ್ಗೀಕರಣಗಳನ್ನು ಮಾಡಬಹುದು. ಭಾರತೀಯ ಅಡುಗೆಯ ಪದಾರ್ಥಗಳಲ್ಲಿ ಅನೇಕ ಅಧಿಕೃತ ಮಸಾಲೆಗಳು ಮತ್ತು ಗಿಡಮೂಲಿಕೆಗಳು ಕಂಡುಬರುತ್ತವೆ.

ಕಲೆ ಮತ್ತು ವಾಸ್ತು ಶಿಲ್ಪ :

ಒಂದು ಕಲ್ಲಿಗೆ ಕೆತ್ತನೆಯ ಮೂಲಕ ಜೀವವನ್ನು ತುಂಬುವುದಾಗಿದೆ. ಕಾಗದ, ಮರ, ಇತ್ಯಾದಿಗಳನ್ನು ಕಲಾವಿದರು ತಮ್ಮ ವರ್ಣಚಿತ್ರಗಳಿಗೆ ಆಧಾರವಾಗಿ ಬಳಸುತ್ತಿದ್ದರು. ಕುಂಚಗಳನ್ನು ಸಂಶ್ಲೇಷಿತ ವಸ್ತುಗಳಿಂದ ಮಾಡಲಾಗಿಲ್ಲ ಆದರೆ ಒಂಟೆಗಳು, ಮೇಕೆ ಮತ್ತು ಅಳಿಲುಗಳಂತಹ ಪ್ರಾಣಿಗಳ ಮೂಲ ಕೂದಲಿನಿಂದ ತಯಾರಿಸಲಾಗುತ್ತದೆ. ಮೈಸೂರು ಶೈಲಿಯ ವರ್ಣಚಿತ್ರಗಳು ಸಾಮಾನ್ಯವಾಗಿ ದಂತಕಥೆಗಳು, ಪೌರಾಣಿಕ ದೃಶ್ಯಗಳು ಮತ್ತು ರಾಜಮನೆತನದ ಚಿತ್ರಣಗಳಾಗಿವೆ.

ಉಪಸಂಹಾರ

ಕನ್ನಡನಾಡು ಸಂಸೃತಿಯ ತವರೂರಾಗಿದೆ. ಇದನ್ನ ಉಳಿಸುವವುದು, ಬೆಳೆಸುವುದು ನಮ್ಮ ಕರ್ತವ್ಯವಾಗಿದೆ. ಕನ್ನಡನಾಡಿನ ಮಕ್ಕಳು ನಾವು. ಕನ್ನಡದ ಸಂಸೃತಿಯನ್ನು ಕನ್ನಡದವರು ಮಾತ್ರವಲ್ಲದೆ ಬೇರೆ ದೇಶಗಳಲ್ಲೂ ಕನ್ನಡನಾಡಿನ ಸಂಸೃತಿಯು ಪರಿಚಿತವಿರುವಂತೆ ನಮ್ಮ ಸಂಸೃತಿಯನ್ನು ಬೆಳೆಸಬೇಕು.

FAQ

ಕನ್ನಡನಾಡಿನ ಸಂಸೃತಿಗಳ ಬಗೆಗಳು ಯಾವುವು ?

ಹಬ್ಬಗಳು, ನೃತ್ಯಗಳು, ಕಲೆ ಮತ್ತು ವಾಸ್ತು ಶಿಲ್ಪ, ಆಹಾರ ಪದ್ದತಿ ಇನ್ನು ಮುಂತಾದವುಗಳು.

ಇತರೆ ಪ್ರಬಂಧಗಳು:

ಕನ್ನಡ ರಾಜ್ಯೋತ್ಸವದ ಭಾಷಣ

ಕನ್ನಡ ರಾಜ್ಯೋತ್ಸವದ ಬಗ್ಗೆ ಪ್ರಬಂಧ

ಕನ್ನಡ ರಾಜ್ಯೋತ್ಸವದ ಬಗ್ಗೆ ಮಾಹಿತಿ

Leave a Comment