ಕನ್ನಡ ರಾಜ್ಯೋತ್ಸವದ ಬಗ್ಗೆ ಪ್ರಬಂಧ | Essay On Kannada Rajyotsava in Kannada

ಕನ್ನಡ ರಾಜ್ಯೋತ್ಸವದ ಬಗ್ಗೆ ಪ್ರಬಂಧ, Essay On Kannada Rajyotsava in Kannada, kannada rajyotsava prabandha in kannada, kannada rajyotsava essay in kannada

ಕನ್ನಡ ರಾಜ್ಯೋತ್ಸವದ ಬಗ್ಗೆ ಪ್ರಬಂಧ

ಕನ್ನಡ ರಾಜ್ಯೋತ್ಸವದ ಬಗ್ಗೆ ಪ್ರಬಂಧ Essay On Kannada Rajyotsava in Kannada

ಈ ಲೇಖನಿಯಲ್ಲಿ ಕನ್ನಡ ರಾಜ್ಯೋತ್ಸವದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಪೀಠಿಕೆ

ಕನ್ನಡ ರಾಜ್ಯೊತ್ಸವ ಇದು ಕನ್ನಡಿಗರ ಹೆಮ್ಮೆ ಅಂತ ಹೇಳಬಹುದು. ಕರುನಾಡಿನ ಸ್ವಾಭಿಮಾನದ ಸಂಕೇತ. ಎಲ್ಲಾದರು ಇರು ಎಂತಾದರು ಇರು ಎಂದಿಗೂ ನೀ ಕನ್ನಡವಾಗಿರು. ಇದು ಕನ್ನಡಿಗರಿಗೆಲ್ಲರಿಗು ಇದು ದೊಡ್ಡ ಹಬ್ಬವಾಗದೆ. ಈ ದಿನ ಪೂರ್ತಿ ವಿವಿಧ ಸಾಂಸೃತಿಕ ಕಾರ್ಯಕ್ರಮಗಳನ್ನು ನಡೆಸಿ ಕನ್ನಡದ ಉತ್ಸವವನ್ನು ಆಚರಿಸುವುದು. ಈ ದಿನ ಕನ್ನಡ ನಾಡಿನ ಉದಯದ ಸಂಭ್ರಮದ ಕ್ಷಣ, ಇದು ಕನ್ನಡಮ್ಮನ ಹುಟ್ಟು ದಿನದ ಸಂಭ್ರಮವಾಗಿದೆ. ನಮ್ಮ ಹೆಮ್ಮೆಯ ಕರುನಾಡು ರೂಪುಗೊಂಡ ದಿನ. ಈ ದಿನದಂದು ಕನ್ನಡಾಂಬೆಯ ಭಾವಚಿತ್ರದ ಮೆರವಣಿಗೆ.

ವಿಷಯ ವಿವರಣೆ

ಇತಿಹಾಸ

ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ ದಿನವನ್ನು ಸತತವಾಗಿ ಆಚರಿಸಲಾಗಿದೆ ಕರ್ನಾಟಕವನ್ನು ಹಿಂದೆ ಮೈಸೂರುರಾಜ್ಯವೆಂದು ಕರೆಯುತ್ತಿದ್ದರು. ೧೯೭೩ ನವೆಂಬರ್‌ ೦೧ ರಂದು ಮೈಸೂರು ಎನ್ನುವ ಹೆಸರು ಕರ್ನಾಟಕ ಎಂದು ಬದಲಾಯಿಸಲಾಯಿತು. ಕರ್ನಾಟಕವನ್ನು ಈ ದಿನದಂದು ರೂಪಿಸಲಾಗಿದೆ, ಆದ್ದರಿಂದ ಈ ದಿನವನ್ನು ಕನ್ನಡ ದಿನ, ಕರ್ನಾಟಕ ರಚನೆ ದಿನ ಅಥವಾ ಕರ್ನಾಟಕ ದಿನ ಎಂದು ಕರೆಯಲಾಗುತ್ತದೆ. 

ಕರ್ನಾಟಕದ ಹೆಸರು ಕರುನಾಡಿನಿಂದ ರೂಪುಗೊಂಡಿದ್ದು “ಭವ್ಯವಾದ ಭೂಮಿ” ಎಂದು ಸೂಚಿಸುತ್ತದೆ. ಕನ್ನಡ ಮತ್ತು ಕರ್ನಾಟಕ ಎಂಬ ಹೆಸರೇ ಕರ್ನಾಟಕದ ಜನ ಸಮೂಹಗಳ ನಡುವೆ ಒಗ್ಗಟ್ಟನ್ನು ಮೂಡಿಸಿತು. ಆಗ ಸುತ್ತ ಮುತ್ತ ಪ್ರಧಾನರಾಗಿ ದೇವರಾಜ್ ಅರಸುರವರು ಹಾಗು ಅನೇಕ ವ್ಯಕ್ತಿಗಳು ಕರ್ನಾಟಕವನ್ನು ಒಟ್ಟುಗೂಡಿಸಲು ಪ್ರಯತ್ನಿಸಿದರು. ಅವರಲ್ಲಿ ಕೆಲವರು ಬಿ .ಎಂ ಶ್ರೀಕಂಠಯ್ಯ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಎ .ಎನ್ ಕೃಷ್ಣರಾವ್, ಕುವೆಂಪು ಮತ್ತು ಕೆ.ಶಿವರಾಮ ಕಾರಂತರವರು ಇನ್ನು ಮುಂತಾದವರು.

ರಾಜ್ಯೋತ್ಸವವು ರಾಜ್ಯದ ಪರಿಚಯವನ್ನು ಸೂಚಿಸುತ್ತದೆ. 1956 ರಲ್ಲಿ, ಭಾರತದಲ್ಲಿ ಕನ್ನಡ ಮಾತನಾಡುವ ಪ್ರತಿಯೊಂದು ಪ್ರದೇಶವನ್ನು ಬೆರೆಸಿ ರಾಜ್ಯವನ್ನು ರಚಿಸಲಾಯಿತು, ಅದಕ್ಕೆ ಕರ್ನಾಟಕ ಎಂದು ಹೆಸರಿಸಲಾಯಿತು. ಭಾಷೆಯಲ್ಲಿ ಸಂವಹನವು ಕನ್ನಡವಾಗಿತ್ತು. ಕರ್ನಾಟಕದ ವ್ಯಕ್ತಿಗಳು ಕನ್ನಡ ರಾಜ್ಯೋತ್ಸವ ದಿನವನ್ನು ಅಸಾಧಾರಣ ವೈಭವದಿಂದ ಆಚರಿಸುತ್ತಾ ಬಂದಿದೆ.

ಆಚರಣೆ

ಕರ್ನಾಟಕದಲ್ಲಿ ಹಬ್ಬವಾಗಿ ಆಚರಿಸಲಾಗುತ್ತದೆ. ರಾಜ್ಯಾದ್ಯಂತ ಯಾವುದೇ ಜಾತಿ, ಧರ್ಮದ ಬೇಧವಿಲ್ಲದೆ ಕನ್ನಡಿಗರು ಆಚರಿಸುತ್ತಾರೆ.

ಕನ್ನಡ ನಾಡಿನ ಮರುಹುಟ್ಟಿನ ದಿನವಾದ ನವೆಂಬರ್ 1ರಂದು ನಾಡಿನ ಸಮಸ್ತ ಜನತೆ ಯಾವುದೇ ಜಾತಿ, ಧರ್ಮ, ಪಂಥಗಳ ಬೇಧವಿಲ್ಲದೆ ಒಗ್ಗಟ್ಟಿನಿಂದ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸುತ್ತಾರೆ. ಅರಿಶಿನ ಹಾಗೂ ಕುಂಕುಮದ ಸಂಕೇತ ಕರ್ನಾಟಕ ಹಳದಿ ಕೆಂಪು ಮಿಶ್ರಿತ ಧ್ವಜವನ್ನು ಸರ್ಕಾರಿ ಕಚೇರಿ, ಕಂಪನಿಗಳು, ಶಾಲಾ-ಕಾಲೇಜುಗಳಲ್ಲಿ ಹಾರಿಸುತ್ತಾ, ನಾಡಗೀತೆ ಸೇರಿದಂತೆ ನಾಡಿನ ಹಿರಿಮೆಯನ್ನು ಬಿಂಬಿಸುವ ಗೀತೆಗಳ ಮೂಲಕ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ.

ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಒಂದು ರಾಜ್ಯ ಎಂದು ಘೋಷಣೆ ಮಾಡಿದ ಈ ದಿನವನ್ನು ಕನ್ನಡಿಗರು ನಾಡಹಬ್ಬವನ್ನಾಗಿ ಆಚರಿಸುತ್ತಾರೆ. ರಾಜ್ಯೋತ್ಸವದಂದು ಕರ್ನಾಟಕ ಧ್ವಜವನ್ನು ಹಾರಿಸಿ ನಂತರ ಕನ್ನಡ ಗೀತೆಯನ್ನುಹೇಳುವುದರೊಂದಿಗೆ ಆಚರಿಸುತ್ತಾರೆ.

ಈ ದಿನದಂದು, ಕರ್ನಾಟಕದ ವ್ಯಕ್ತಿಗಳು ತಮ್ಮ ಸಾಂಪ್ರದಾಯಿಕ ಉಡುಪುಗಳನ್ನು ಧರಿಸುತ್ತಾರೆ ಮತ್ತು ತಮ್ಮ ರಾಜ್ಯ ಬ್ಯಾನರ್ ಅನ್ನು ಮೇಲಕ್ಕೆ ಎತ್ತುತ್ತಾರೆ. ಈ ರಾಜ್ಯೋತ್ಸವವನ್ನು ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ನರು ಎಲ್ಲಾ ಧರ್ಮದವರೂ ಸೇರಿ ಆಚರಿಸುತ್ತಾರೆ. ಸಾಮಾನ್ಯ ವ್ಯಕ್ತಿಗಳು ಕೂಡ ತಮ್ಮ ವಾಹನಗಳಿಗೆ ಕನ್ನಡ ಬಾವುಟವನ್ನು ಅಲಂಕರಿಸುವ ಮೂಲಕ ಆಚರಿಸುತ್ತಾರೆ.

ಮಹತ್ವ

ಕನ್ನಡದ ಇತಿಹಾಸ, ಮಹತ್ವ, ಹೋರಾಟಗಳ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ಹಾಗೂ ಕರ್ನಾಟಕದ ಏಕೀಕರಣಕ್ಕೆ ಹೋರಾಡಿದ ಮಹನೀಯರನ್ನು ಸ್ಮರಿಸುವ ಉದ್ದೇಶದಿಂದ ಕನ್ನಡ ರಾಜ್ಯೋತ್ಸವು ಅತ್ಯಂತ ಮಹತ್ವವನ್ನು ಪಡೆದುಕೊಂಡಿದೆ.

ಅಲ್ಲದೇ ನಾಡಿಗಾಗಿ, ಕನ್ನಡಕ್ಕಾಗಿ ದುಡಿದ ಮಹನೀಯರಿಗೆ ಈ ಮಾಸದಲ್ಲಿ ರಾಜ್ಯ ಸರ್ಕಾರ ಸೇರಿದಂತೆ ಹಲವು ಕನ್ನಡ ಪರ ಸಂಘಟನೆಗಳು ಗೌರವಿಸುವ ಮೂಲಕ, ನಾಡಿನ ಸೇವೆಯನ್ನು ಮುಂದುವರೆಸಲು ಇನ್ನಷ್ಟು ಪ್ರೇರಣೆ ನೀಡಿದಂತಾಗುತ್ತದೆ. ಕನ್ನಡ ನಾಡಿನ ಮಹತ್ವವನ್ನು ಕನ್ನಡಿಗರು ಅರಿತಾಗ ಮಾತ್ರ ಕನ್ನಡ ರಾಜ್ಯೋತ್ಸವದ ಆಚರಣೆ ಸಾರ್ಥಕವಾಗುತ್ತದೆ.

ಉಪಸಂಹಾರ

ನಮ್ಮ ಕನ್ನಡ ರಾಜೋತ್ಸವನ್ನು ಕೇವಲ ನವೆಂಬರ್‌ ತಿಂಗಳಿಗೆ ಮಾತ್ರ ಸೀಮಿತವಾಗದೇ ನಮ್ಮ ಮನದಲ್ಲಿ ಯಾವಾಗಲು ಹಚ್ಚೆಯಂತಿರಿಸಿಕೊಳ್ಳಬೇಕು. ನಮ್ಮ ಕನ್ನಡ ಭಾಷೆಯನ್ನ ಉಳಿಸಿ ಬೆಳೆಸಿ ಹಾಗೆ ಇತರೆ ಜನರು ನಮ್ಮ ಕನ್ನಡವನ್ನ ಗೌರವಿಸುವಂತಾಗಬೇಕು. ಕನ್ನಡ ಭಾಷೆಯ ಹಿರಿಮೆಯ ಹೆಚ್ಚಿಸೋಣ . ಎಲ್ಲಾದರು ಇರು ಎಂತಾದರು ಇರು ಎಂದಿಗೂ ನೀ ಕನ್ನಡವಾಗಿರು. ಕನ್ನವೇ ಸತ್ಯ, ಕನ್ನಡವೇ ನಿತ್ಯ.

FAQ

ಕನ್ನಡ ರಾಜೋತ್ಸವನ್ನು ಯಾವ ದಿನಾಂಕದಂದು ಆಚರಿಸುತ್ತಾರೆ ?

ನವೆಂಬರ್‌ ೧ ರಂದು ಆಚರಿಸಲಾಗುತ್ತದೆ.

ಕರ್ನಾಟಕ ಎಂದು ಮರುನಾಮಕರಣ ಮಾಡಿದ್ದು ಯಾವಾಗ?

೧೯೭೩ ರಂದು ಮರುನಾಮಕರಣ ಮಾಡಿದರು .

ಕರ್ನಾಟಕ ಶಬ್ದವು ಯಾವ ಪದದಿಂದ ನಿಷ್ಪತ್ತಿಗೊಂಡಿದೆ.

ಕರುನಾಡು ಎಂಬ ಪದದಿಂದ ನಿಷ್ಪತ್ತಿಗೊಂಡಿದೆ .

Leave a Comment