ಗಾಂಧಿ ಜಯಂತಿಯ ಬಗ್ಗೆ ಪ್ರಬಂಧ | Gandhi Jayanti Essay in Kannada

ಗಾಂಧಿ ಜಯಂತಿಯ ಬಗ್ಗೆ ಪ್ರಬಂಧ, Gandhi Jayanti Essay in Kannada, gandhi jayanti prabandha in kannada, essay on gandhi jayanti in kannada

ಗಾಂಧಿ ಜಯಂತಿಯ ಬಗ್ಗೆ ಪ್ರಬಂಧ

Gandhi Jayanti Essay in Kannada
ಗಾಂಧಿ ಜಯಂತಿಯ ಬಗ್ಗೆ ಪ್ರಬಂಧ | Gandhi Jayanti Essay in Kannada

ಈ ಲೇಖನಿಯಲ್ಲಿ ಗಾಂಧಿ ಜಯಂತಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಮ್ಮ Post ನಲ್ಲಿ ತಿಳಿಸಲಾಗಿದೆ.

ಪಿಠೀಕೆ

ಗಾಂಧಿ ಜಯಂತಿಯನ್ನು ನಮ್ಮ ರಾಷ್ಟ್ರಿಯ ಹಬ್ಬವಾಗಿ ಸಂಭ್ರಮದಿಂದ ಆಚರಿಸುತ್ತೇವೆ. ಭಾರತದ ಜನರಿಗೆ ಈ ದಿನವು ವರದಾನದ ದಿನವಾಗಿದೆ. ಮಹಾತ್ಮ ಗಾಂಧಿಯವರ ಜನ್ಮದಿನವನ್ನು ಅಕ್ಟೋಬರ್ 2 ರಂದು ಆಚರಿಸಲಾಗುತ್ತದೆ. ಇದನ್ನು ಶಾಲಾ ಕಾಲೇಜುಗಳಲ್ಲಿ ಗಾಂಧಿ ಜಯಂತಿಯನ್ನು ಅತ್ಯಂತ ಸಂಭ್ರಮದಿಂದ ಹಾಗೂ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಆಚರಿಸಲಾಗುತ್ತದೆ. ನಮ್ಮ ರಾಷ್ಟ್ರಕ್ಕೆ ಗಾಂಧೀಜಿ ಯವರು ಅತೀ ಮುಖ್ಯವಾದ ವ್ಯಕ್ತಿ ಇವರಾಗಿದ್ದ.

ವಿಷಯ ವಿವರಣೆ

ಗಾಂಧೀಜಿಯವರ ಜೀವನ ಚರಿತ್ರೆ

ಮೋಹನ್‌ದಾಸ್ ಕರಮ್‌ಚಂದ್ ಗಾಂಧಿ ಇವರ ಪೂರ್ಣ ಹೆಸರಾಗಿದೆ. ಜನನ ಅಕ್ಟೋಬರ್ 2, 1869 ರಲ್ಲಿ ಪೋರ್‌ಬಂದರಿನಲ್ಲಿಜನಿಸಿದರು. ಇವರ ತಂದೆ – ಕರಮಚಂದ ಗಾಂಧಿ, ತಾಯಿ – ಪುತಲಿಭಾಯಿ. ದೆಹಲಿಯಲ್ಲಿ ವಕೀಲರಾಗಿ ಸೇವೆ ಸಲ್ಲಿಸಿದರು. ಹಾಗು ಸಾಮಾಜಿಕ ಕಾರ್ಯಕರ್ತ ಮತ್ತು ಲೇಖಕರು ಭಾರತದ ಬ್ರಿಟಿಷ್ ಆಳ್ವಿಕೆಯ ವಿರುದ್ಧ ರಾಷ್ಟ್ರೀಯವಾದಿ, ಚಳವಳಿಯ ನಾಯಕರಾದರು . ಅದರಂತೆ ಅವರು ತಮ್ಮ ದೇಶದ ಪಿತಾಮಹ ಎಂದು ಪರಿಗಣಿಸಲ್ಪಟ್ಟರು. ಗಾಂಧಿಯವರು ತಮ್ಮ ಸಿದ್ಧಾಂತಕ್ಕಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗೌರವಿಸಲ್ಪಟ್ಟಿದ್ದಾರೆ ರಾಜಕೀಯ ಮತ್ತು ಸಾಮಾಜಿಕ ಪ್ರಗತಿಯನ್ನು ಸಾಧಿಸಲು ಅಹಿಂಸಾತ್ಮಕ ಪ್ರತಿಭಟನೆಗಳನ್ನು ಕೈಗೊಂಡರು. ಇವರನ್ನು ಬಾಪು ಮತ್ತು ರಾಷ್ಟ್ರಪಿತ ಎಂದು ಕರೆಯಲಾಗಿತ್ತು. ಇವರು 30 ಜನವರಿ 1948 ರಂದು ನಿಧನರಾದರು.

ಗಾಂಧೀಜಿಯವರು ಪಡೆದುಕೊಂಡ ಶಿಕ್ಷಣ

ಗಾಂಧಿಯವರು 9 ವರ್ಷ ವಯಸ್ಸಿನವರಾಗಿದ್ದಾಗ ಅವರು ರಾಜ್‌ಕೋಟ್‌ನ ಸ್ಥಳೀಯ ಶಾಲೆಗೆ ಹೋದರು ಮತ್ತು ಅಂಕಗಣಿತ, ಇತಿಹಾಸ, ಭೌಗೋಳಿಕತೆ ಮತ್ತು ಭಾಷೆಗಳ ಮೂಲಭೂತ ಅಂಶಗಳನ್ನು ಅಧ್ಯಯನ ಮಾಡಿದರು. 11 ನೇ ವಯಸ್ಸಿನಲ್ಲಿ ಅವರು ರಾಜ್‌ಕೋಟ್‌ನ ಪ್ರೌಢಶಾಲೆಗೆ ಹೋದರು. ಅವರ ಮದುವೆಯ ಕಾರಣ, ಕನಿಷ್ಠ ಒಂದು ವರ್ಷ, ಅವರ ಅಧ್ಯಯನಕ್ಕೆ ತೊಂದರೆಯಾಯಿತು ಆದರೂ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ಅವರು 1888 ರಲ್ಲಿ ಗುಜರಾತ್‌ನಲ್ಲಿ ಭಾವನಗರದ ಸಮದಾಸ್ ಕಾಲೇಜಿಗೆ ಸೇರಿದರು. ಗಾಂಧೀಜಿಯವರು ಸಮಲ್ದಾಸ್ ಕಾಲೇಜಿನಲ್ಲಿ ತಮ್ಮ ಅಧ್ಯಯನದಿಂದ ತೃಪ್ತರಾಗಲಿಲ್ಲ ಮತ್ತು ಲಂಡನ್ ಪ್ರಸ್ತಾಪದಿಂದ ಉತ್ಸುಕರಾದರು ಮತ್ತು ಅವರು ಮಾಂಸಾಹಾರಿ, ವೈನ್ ಅಥವಾ ಮಹಿಳೆಯರನ್ನು ಮುಟ್ಟುವುದಿಲ್ಲ ಎಂದು ತಮ್ಮ ತಾಯಿ ಮತ್ತು ಹೆಂಡತಿಗೆ ಮನವರಿಕೆ ಮಾಡಿದರು. ಈ ಸಮಯದಲ್ಲಿ ಬ್ರಿಟಿಷರು ಭಾರತವನ್ನು ಆಳುತ್ತಿದ್ದರು ದೇಶದ ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸಿದರು.

ಸ್ವಾತಂತ್ರ ಹೋರಾಟದಲ್ಲಿ ಇವರ ಪಾತ್ರ

  • ಬ್ರಿಟಿಷರ ವಿರುದ್ದ ಅಸಹಕಾರ ಚಳುವಳಿ , ದಂಡಿ ಮೆರವಣಿಗೆ ಕ್ವಿಟ್‌ ಇಂಡಿಯ ಚಳುವಳಿಗಳನ್ನು ನಡೆಸಿ ದೇಶಕ್ಕೆ ಸ್ವಾತಂತ್ರ್ಯ ವನ್ನು ದೊರಕಿಸಿಕೊಟ್ಟರು.
  • ದೇಶದ ಸ್ವಾತಂತ್ರಕ್ಕಾಗಿ ಸತ್ಯ ಮತ್ತು ಅಹಿಂಸೆಯ ಮಾರ್ಗವನ್ನು ಅಳವಡಿಸಿಕೊಂಡರು . ಶಾಂತಿ ಅಹಿಂಸೆಯ ಬಗ್ಗೆ ಹೆಚ್ಚು ಒತ್ತನ್ನು ನೀಡಿದ್ದರು.
  • ಉಪವಾಸವನ್ನು ಕೈಗೊಂಡಿದ್ದರು.
  • ಸತ್ಯಾಗ್ರಹ , ಶಾಂತಿ , ಅಹಿಂಸೆಯ ಮೂಲಕವೇ ಸಾಗಿ ಬ್ರಿಟಿಷರನ್ನು ಭಾರತ ಬಿಟ್ಟು ತೊಲಗುವಂತೆ ಮಾಡಿದರು.
  • ಸ್ವದೇಶಿ ವಸ್ತುಗಳ ಬಳಕೆಗೆ ಒತ್ತಾಯಿಸಿದರು ಮತ್ತು ಖಾದಿ ಬಟ್ಟೆಗಳನ್ನು ಧರಿಸಿದ್ದರು.
  • ಮಾನವೀಯತೆಯ ಸಂದೇಶವನ್ನು ಜನರಗೆ ನೀಡಿದರು.
  • ಗಾಂಧಿಯವರು ತಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹಗಲಿರುಳು ಶ್ರಮಿಸಿದರು.
  • ಉದಾತ್ತ ಪ್ರಯತ್ನಗಳ ಫಲ ನೀಡಿತು ಮತ್ತು ಆಗಸ್ಟ್ 15, 1947 ರಂದು ಭಾರತವು ಸ್ವತಂತ್ರವಾಯಿತು.
  • ಗಾಂಧಿಯವರು ಪ್ರಬಲ ಬ್ರಿಟಿಷ್ ಸಾಮ್ರಾಜ್ಯವನ್ನು ಕತ್ತಿ ಅಥವಾ ಬಂದೂಕುಗಳಿಂದ ಸೋಲಿಸಲಿಲ್ಲ, ಆದರೆ ಸತ್ಯ ಮತ್ತು ಅಹಿಂಸೆಯ ಅಸ್ತ್ರಗಳ ಮೂಲಕ. ಅವರು ತಮ್ಮ ಜೀವನದುದ್ದಕ್ಕೂ ಹಿಂದೂ-ಮುಸ್ಲಿಂ ಏಕತೆ ಮತ್ತು ಅಸ್ಪೃಶ್ಯತೆ ನಿವಾರಣೆಗಾಗಿ ಶ್ರಮಿಸಿದರು.
  • ಗಾಂಧಿಯವರು ಹರಿಜನರ ಉನ್ನತಿಗಾಗಿ ಶ್ರಮಿಸಿದರು, ಅಸ್ಪೃಶ್ಯತೆಯು ದೇವರು ಮತ್ತು ಮನುಷ್ಯನ ವಿರುದ್ಧದ ಪಾಪವೆಂದು ಗಾಂಧಿ ಘೋಷಿಸಿದರು.

ಉಪಸಂಹಾರ

ಭಾರತ ದೇಶದ ಮಹಾನ್‌ ಸ್ವಾತಂತ್ರ ಹೋರಾಟಗಾರಾಗಿದ್ದರು. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಇಡೀ ಜೀವನ ಅನುಕರಣೆಯುಹಾಗು ಇಂದಿಗೂ ಅವರ ಆದರ್ಶ ವಿಚಾರಗಳನ್ನುಅಳವಡಿಸಿಕೊಂಡು ಸಮಾಜದಲ್ಲಿ ಮಹತ್ವದ ಬದಲಾವಣೆಗಳನ್ನು ತರಬಹುದು.

FAQ

ಮಹಾತ್ಮ ಗಾಂಧೀಜಿ ಯವರು ಎಷ್ಟರಲ್ಲಿ ಜನಿಸಿದರು?

ಅಕ್ಟೋಬರ್ 2 \1869 ರಂದು ಜನಿಸಿದರು.

ಮಹಾತ್ಮ ಗಾಂಧೀಜಿ ಯವರು ಎಷ್ಟರಲ್ಲಿ ನಿಧನರಾದರು?

30 ಜನವರಿ, 1948 ರಂದು ನಿಧನರಾದರು.

ಇತರೆ ಪ್ರಬಂಧಗಳು:

ರಾಷ್ಟ್ರೀಯ ಏಕತಾ ದಿನಾಚರಣೆ ಬಗ್ಗೆ ಭಾಷಣ

ಕನ್ನಡ ರಾಜ್ಯೋತ್ಸವದ ಬಗ್ಗೆ ಪ್ರಬಂಧ

Leave a Comment