ಸಾಮಾಜಿಕ ಪಿಡುಗುಗಳು ಪ್ರಬಂಧ | Samajika Pidugugalu Essay in Kannada

ಸಾಮಾಜಿಕ ಪಿಡುಗುಗಳು ಪ್ರಬಂಧ, Samajika Pidugugalu Essay prabandha social problems essay in kannada

ಸಾಮಾಜಿಕ ಪಿಡುಗುಗಳು ಪ್ರಬಂಧ

Samajika Pidugugalu Essay in Kannada
ಸಾಮಾಜಿಕ ಪಿಡುಗುಗಳು ಪ್ರಬಂಧ | Samajika Pidugugalu Essay in Kannada

ಈ ಲೇಖನಿಯಲ್ಲಿ ಸಾಮಾಜಿಕ ಪಿಡುಗುಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಪೀಠಿಕೆ

ಸಮಾಜದ ಅಭಿವೃದ್ಧಿಗೆ ಧಕ್ಕೆಯನ್ನು ಉಂಟು ಮಾಡುವ ಕೆಲವು ಪದ್ಧತಿಗಳು, ಸಂಪ್ರದಾಯಗಳು, ಸಾಮಾಜಿಕ ಪಿಡಗುಗಳಾಗಿವೆ. ತಲೆ ತಲಾಂತರದಿಂದ ಸಮಾಜಕ್ಕೆ ಅಂಟಿಕೊಂಡು ಬಂದ ಸಾಮಜಿಕ ಪಿಡುಗುಗಳಾಗಿವೆ. ಇವುಗಳಿಂದ ಸಮಾಜದ ಸ್ಥಾನಮಾನವು ಕೆಳ ಮಟ್ಟಕ್ಕೆ ತಲುಪಿದೆ. ಇಂತಹ ಪದ್ಧತಿಗಳು ನಮ್ಮ ದೇಶವನ್ನು ಅಭಿವೃದ್ಧಿಯತ್ತ ಸಾಗುವುದಕ್ಕೆ ತಡೆಯನ್ನು ಉಂಟು ಮಾಡುತ್ತಿದೆ. ಈ ಸಾಮಾಜಿಕ ಪಿಡುಗುಗಳನ್ನು ನಿವಾರಿಸಿಕೊಂಡಾಗ ಮಾತ್ರ ದೇಶವು ಪ್ರಗತಿಯನ್ನು ಸಾಧಿಸಲು ಸಾಧ್ಯವಾಗುತ್ತದೆ.

ವಿಷಯ ವಿವರಣೆ

ಸಾಮಾಜಿಕ ಪಿಡುಗುಗಳಾದ ಬಡತನ, ನಿರುದ್ಯೋಗ, ಅನಕ್ಷರತೆ, ಜಾತೀಯತೆ, ಬಾಲಕಾರ್ಮಿಕ ಪದ್ದತಿ, ವರದಕ್ಷಿಣೆ, ಜೀತ ಪದ್ದತಿ, ಸ್ತ್ರೀ ಶೋಷಣೆ, ಮೂಢನಂಬಿಕೆಗಳು, ಅಸ್ಪೃಶ್ಯತೆ, ಮಾದಕ ವಸ್ತುಗಳ ಸೇವನೆ ಇನ್ನೂ ಮುಂತಾದ ಸಾಮಾಜಿಕ ಸಮಸ್ಯಗಳಿವೆ. ಇದರಿಂದ ದೇಶದ ಪ್ರಗತಿಯು ಕುಗ್ಗುತ್ತಿದೆ. ಇದರಿಂದ ಇಡೀ ಸಮಾಜವೇ ಸಮಸ್ಯಗಳಿಗೆ ಸಿಲುಕಿದೆ ಎನ್ನಬಹುದು. ಸಾಮಾಜಿಕ ಪಡುಗುಗಳು ಮನುಷ್ಯನ್ನ ಬಲಿ ತೆಗೆದುಕೊಳ್ಳುತ್ತಿವೆ. ಮನುಷ್ಯನು ಮಾನವೀಯ ಗುಣಗಳನ್ನು ಮರೆತು ರಾಕ್ಷಸನಾಗಿ ವರ್ತಿಸುತ್ತಿರುವುದು.

ಪ್ರಮುಖವಾದ ಸಾಮಾಜಿಕ ಪಿಡುಗುಗಳು

  • ಜಾತೀಯತೆ :

ಜಾತೀಯತೆಯಿಂದ ಮೇಲು ಕೀಳು ಎಂಬ ಬಾವನೆಯು ಬೆಳೆಯುತ್ತಿದೆ. ಇದರಿಂದ ಜನರಲ್ಲಿ ಅಸೂಹೆ, ದ್ವೇಷದ ಮನೋಬಾವನೆಯು ಉಂಟಾಗುತ್ತಿದೆ. ಅಶಾಂತಿಯು ದೇಶದೆಡೆ ಹೊರಹೊಮ್ಮುತ್ತಿದೆ. ಇದರಿಂದ ದೇಶದ ಅಭಿವೃದ್ದಿಗೆ ಧಕ್ಕೆ ಉಂಟಾಗುತ್ತದೆ.

  • ಅಜ್ಞಾನ ಮತ್ತು ಅನಕ್ಷರತೆ :

ಅಜ್ಞಾನಕ್ಕೆ ಅನಕ್ಷರತೆಯೇ ಕಾರಣವಾಗಿದೆ. ಅಜ್ಞಾನ ಮತ್ತು ಅನಕ್ಷರತೆಯು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಅಜ್ಞಾನವು ಸಮಾಜವನ್ನ ಅವನತಿಯತ್ತ ಕೊಂಡೊಯ್ಯುತ್ತದೆ. ಪ್ರಮುಖವಾದ ಸಾಮಾಜಿಕ ಪಿಡುಗಾಗಿದೆ.

  • ಸ್ತ್ರೀ ಶೋಷಣೆ :

ನಮ್ಮ ದೇಶವು ಪುರುಷ ಪ್ರಧಾನವಾದುದ್ದಾಗಿದೆ. ಆದ್ದರಿಂದ ಸ್ತ್ರೀ ಶೋಷಣೆಯು ಹೆಚ್ಚಾಗುತ್ತಿದ್ದು ಕೆಲವೊಂದು ಅನಿಷ್ಟ ಪದ್ದತಿಗಳನ್ನು ತಂದರು ಅವುಗಳೆಂದರೆ ದೇವದಾಸಿ ಪದ್ದತಿ, ವೇಶ್ಯಾವಾಟಿಕೆ, ಸ್ತ್ರೀ ಭ್ರೂಣ ಹತ್ಯೆ ಇನ್ನು ಮುಂತಾದ ರೂಪಗಲ್ಲಿ ಸ್ತ್ರೀ ಶೋಷಣೆಗಳು ನಡೆಯುತ್ತಿವೆ.

  • ಅಸ್ಪೃಶ್ಯತೆ :

ಅಸ್ಪೃಶ್ಯತೆಯು ಒಂದು ನಮ್ಮ ಸಮಾಜಕ್ಕೆ ಅಂಟಿಕೊಂಡ ದೊಡ್ಡ ಸಾಮಾಜಿಕ ಪಿಡುಗಾಗಿದೆ. ಇದೊಂದು ಸಮಾಜಕ್ಕೆ ಮೊದಲಿಂದಲೂ ಸಮಾಜದ ಜೊತೆಯಲ್ಲೇ ಬೇರೂರಿ ಬಂದ ಪಿಡುಗಾಗಿದೆ ಎನ್ನಬಹುದು. ಇದೊಂದು ಸಮಾಜಕ್ಕೆ ಶಾಪವಾಗಿದೆ.

ಸಾಮಾಜಿಕ ಪಿಡುಗುಗಳನ್ನು ತಡೆಗಟ್ಟುವ ಕ್ರಮಗಳು

  • ಸಾಮಾಜಿಕ ಪಿಡುಗುಗಳ ನಿವಾರಣೆಗೆ ಅಜ್ಞಾನವನ್ನು ಹೊಡೆದು ಹಾಕಬೇಕು. ಅದಕ್ಕೆ ಪ್ರಮುಖ ಅಸ್ತ್ರವೆಂದರೆ ಶಿಕ್ಷಣವಾಗಿದೆ. ಇದರಿಂದ ಸಧೃಡವಾದ, ಮೌಲ್ಯಯುತವಾದ ವಿಚಾರಗಳನ್ನು ಶಿಕ್ಷಣದ ಮೂಲಕ ತಿಳಿಸುವುದು.
  • ಸ್ತ್ರೀಯರಿಗು ಕೂಡ ಪುರುಷರಂತೆ ಸರಿಯಾದ, ಸಮಾನವಾದ ಸ್ಥಾನಮಾನವನ್ನು ನೀಡುವುದು. ಇದರಿಂದ ಸಾಮಾಜಿಕ ಪಿಡುಗನ್ನ ತಡೆಯಲು ಸಹಕಾರಿಯಾಗುತ್ತದೆ.
  • ಸಂಘ ಸಂಸ್ಥೆಗಳು ಮಾನವೀಯತೆಯನ್ನು ಬೆಳೆಸುವುದರ ಮೂಲಕ ಧಾರ್ಮಿಕ ಅಸಹಿಷ್ಣುತೆಯನ್ನು ನಿವಾರಿಸಲು ಸಾಧ್ಯವಾಗುತ್ತದೆ.
  • ಜನಸಂಖ್ಯೆಯನ್ನು ತಡೆಯುವುದು ಇದರಿಂದ ಬಡತನ, ನಿರುದ್ಯೋಗ ಕಡಿಮೆಯಾಗುತ್ತದೆ.
  • ವರದಕ್ಷಿಣೆ ಪದ್ದತಿ ನಿಷೇಧ ಮಾಡುವುದು.

ಉಪಸಂಹಾರ

ದೇಶದ ಎಲ್ಲಾ ಜನತೆಯು ಒಗ್ಗಟ್ಟಾಗಿ ಸಾಮಾಜಿಕ ಪಿಡುಗುಗಳನ್ನ ಸಂಪೂರ್ಣವಾಗಿ ನಿವಾರಿಸುವಲ್ಲಿ ಕೈಗೊಳ್ಳಬೇಕು.ಸಮಾಜದ ಹಿತವೇ ತನ್ನ ಹಿತವೆಂದು ಬದುಕಬೇಕು ಆದರೆ ಅಂದೂ ಇಂದೂ ಸಾಮಾಜಿಕ ಪಿಡುಗುಗಳ ಜೊತೆಯಲ್ಲಿ ಬದುಕುತ್ತಿರುವುದನ್ನ ನಮ್ಮ ಸಮಾಜದಲ್ಲಿ ನೋಡಬಹುದು. ಇವುಗಳಿಂದ ದೇಶವು ಕುಗ್ಗುವಂತ ಸ್ಥಿತಿಯನ್ನ ತಲುಪುತ್ತಿದೆ. ಆದ್ದರಿಂದ ಈಗಲಾದರೂ ಎಚ್ಚೆತ್ತುಕೊಂಡು ಇವುಗಳಿಂದ ಹೊರ ಬರಬೇಕು. ಇವುಗಳನ್ನು ಹೋಗಲಾಡಿಸುವುದು ಸರ್ಕಾರ ಹಾಗು ಜನತೆಯ ಕೈಯಲ್ಲಿದೆ.

FAQ

ಸಾಮಾಜಿಕ ಪಿಡುಗುಗಳೆಂದರೆ ಯಾವು ?

ಜಾತೀಯತೆ, ವರದಕ್ಷಿಣೆ , ಅನಕ್ಷರತೆ, ಅಸ್ಪೃಶ್ಯತೆ ಇನ್ನು ಮುಂತಾದವುಗಳು

ಸಾಮಾಜಿಕ ಪಿಡುಗುಗಳನ್ನು ತಡೆಗಟ್ಟು ಒಂದು ಕ್ರಮವನ್ನು ತಿಳಿಸಿ ?

ಸ್ತ್ರೀಯರಿಗು ಕೂಡ ಪುರುಷರಂತೆ ಸರಿಯಾದ, ಸಮಾನವಾದ ಸ್ಥಾನಮಾನವನ್ನು ನೀಡುವುದು. ಇದರಿಂದ ಸಾಮಾಜಿಕ ಪಿಡುಗನ್ನ ತಡೆಯಲು ಸಹಕಾರಿಯಾಗುತ್ತದೆ.

ಇತರೆ ಪ್ರಬಂಧಗಳು:

ಅತಿ ಆಸೆ ಗತಿಗೇಡು ಗಾದೆಯ ಪ್ರಬಂಧ

ಪರಿಸರ ಸಂರಕ್ಷಣೆ ಪ್ರಬಂಧ

ಬಾಲ ಕಾರ್ಮಿಕರ ಬಗ್ಗೆ ಪ್ರಬಂಧ

Leave a Comment