ಅತಿ ಆಸೆ ಗತಿಗೇಡು ಗಾದೆಯ ಪ್ರಬಂಧ, Athi Ase Gathi Kedu Essay in Kannada, Athi Ase Gathi Kedu prabandha in kannada, Athi Ase Gathi Kedu in kannada
ಅತಿ ಆಸೆ ಗತಿಗೇಡು ಗಾದೆಯ ಪ್ರಬಂಧ

ಪಿಠೀಕೆ
ಗಾದೆಗಳು ಹಿರಿಯರ ಅನುಭವದ ನುಡಿಮುತ್ತುಗಳಾಗಿವೆ. ಗಾದೆಗಳು ವೇದಗಳಿಗಳಿಗೆ ಸಮವಾಗಿವೆ. ಒಂದು ವೇಳೆ ವೇದ ಸುಳ್ಳಾದರು ಗಾದೆ ಸುಳ್ಳಾಗದು ಎಂಬ ಮಾತಿದೆ. ಗಾದೆ ಮಾತುಗಳು ಗ್ರಾಮೀಣ ಬದುಕಿನ ಪ್ರತಿಬಿಂಬಗಳಾಗಿವೆ. ಸುಪ್ರಸಿದ್ದ ಗಾದೆಗಳಲ್ಲಿ ʼಅತಿ ಆಸೆ ಗತಿಗೇಡುʼ ಎಂಬ ಈ ಅರ್ಥಪೂರ್ಣವಾದ ಗಾದೆಯು ಹೆಚ್ಚು ಎಲ್ಲರಿಗು ಪರಿಚಿತವಾದ ಹಾಗು ಅನ್ವಯಿಕ ಗಾದೆಯಾಗಿದೆ. ಆಸೆ ಯೆಂಬುದು ಮನುಷ್ಯನ ಸಹಜ ಗುಣವಾಗದೆ. ಈ ಆಸೆಯೆಂಬುದು ಇಲ್ಲದ್ದಿದ್ದರೆ ಮನುಷ್ಯ ಕಾಡುಪ್ರಾಣಿಯಂತೆ ಜೀವಿಸುತ್ತಿದ್ದ. ಆದರೆ ಈ ಆಸೆಗಳು ಹಿತವಾಗಿ, ಮಿತವಾಗಿರುವುದು ಒಳಿತು.
ವಿಷಯ ವಿವರಣೆ
ಮನುಷ್ಯನ ಆಸೆಗೆ ಮಿತಿ ಇರಬೇಕು ಎಂಬುದು ಈ ಗಾದೆಯ ಮುಖ್ಯ ಉದ್ದೇಶವಾಗಿದೆ. ಆಸೆ ಅಗಾಧವಾದುದ್ದು ಆದರೆ ಆಸೆ ಪಡುವುದಕ್ಕು ಮಿತಿ ಇದೆ. ಯಾವುದಾದರು ʼಅತೀ ಆದರೂ ಅಮೃತವು ಕೂಡ ವಿಷವಾದಿತುʼ ಎಂಬ ಅನುಭವದ ಮಾತು ಕೂಡ ಇದೆ. ಕೆಲವೊಮ್ಮೆ ಅತಿಯಾದ ಆಸೆಯಿಂದ ಇರುವುದನ್ನು ಕಳೆದುಕೊಳ್ಳುವ ಪರಿಸ್ಥಿತಿಯು ಬರುವಂತ ಸಾಧ್ಯತೆಯು ಇರುತ್ತದೆ. ಈ ಅತಿ ಆಸೆಯಿಂದ ಮನುಷ್ಯನ ನೆಮ್ಮದಿಯು ಹಾಳಾದಂತೆ. ಹಾಗೆ ʼಆಸೆಯೆಂಬುದು ದುಃಖಕ್ಕೆ ಮೂಲʼ ಎಂದು ಬುಧ್ಧ ಹೇಳಿರುವುದು ಇದೆ. ಈ ಆಸೆ ಎಂಬುದು ಮನಷ್ಯನ್ನ ಪ್ರವೇಶಿಸುವುದು ಯಾವಗ ಅಂದರೆ ́ಜೀವನದಲ್ಲಿ ನಮ್ಮ ಸುತ್ತಮುತ್ತಲಿನ ಜನರು ನಮಗಿಂತ ಉತ್ತಮ ಜೀವನವನ್ನು ನೆಡೆಸುತ್ತಿರವರನ್ನು ನೋಡಿ ʼನಾವು ಅವರ ಮಟ್ಟಕ್ಕೆ ಜೀವನ ನಡೆಸಬೇಕು ಎಂದು ಕೊಳ್ಳುವುದು ತಪ್ಪಲ್ಲ. ಈ ತುಡಿತವು ನಮ್ಮನ್ನು ಒಳ್ಳೆಯ ಕೆಲಸಕ್ಕೆ ಪ್ರೆರೇಪಿಸಿದರೆ ಒಳ್ಳೆಯದು. ಆದರೆ ಆ ಮಟ್ಟವನ್ನ ತೀರ ವೇಗವಾಗಿ ತಲುಪಬೇಕೆಂಬ ಹುಚ್ಚು ಆಸೆಯೆ ಅತಿ ಆಸೆಯಾಗಿ ಅಪಾಯಕ್ಕೆ ಸಿಲುಕಿಕೊಳ್ಳುವ ಸಾಧ್ಯತೆಯು ಇರುತ್ತದೆ. ಆದರೆ ಅತಿ ಆಸೆಯಿಂದ ನಮ್ಮ ಮನಸ್ಸು ಕೆಟ್ಟ ಕೆಲಸವನ್ನ ಮಾಡಲು ನಾಚುವುದಿಲ್ಲ. ಆಸೆಯು ಮಿತಿ ಮೀರಿ ಹೋದರೆ ಮನುಷ್ಯನ ವರ್ತನೆ ಬದಲಾಗುತ್ತದೆ. ಅವನು ಕಳ್ಳತನ, ಕೊಲೆ, ದರೋಡೆ ಮಾಡಬೇಕಾಗುತ್ತದೆ. ಕೊನೆಯಲ್ಲಿ ಅವನಿಗೆ ಒಳ್ಳೆಯ ಪ್ರತಿಫಲ ಸಿಗದೆ, ಅವನು ಕಷ್ಟಕ್ಕೆ ಒಳಗಾಗುತ್ತಾನೆ. ನಾವು ನಮ್ಮ ಆಸೆಗಳನ್ನೂ ನಮ್ಮ ನಿಯಂತ್ರಣದಲ್ಲಿ ಇಟ್ಟುಕೊಂಡು ಒಳ್ಳೆಯ ಮಾರ್ಗದಲ್ಲಿ ನಡೆಯಬೇಕು.
ಉಪಸಂಹಾರ
ಈ ಗಾದೆಯಿಂದ ನಾವೆಲ್ಲರು ಅರ್ಥ ಮಾಡಿಕೊಳ್ಳಬೇಕಾದ್ದದ್ದು ಆಸೆಗೆ ಮಿತಿ ಇರಲಿ ಆಸೆಯೇ ಜೀವನದ ಸಾರ್ಥಕತೆಯಲ್ಲವೆಂಬುದನ್ನು ನಾವೆಲ್ಲರು ಮೊದಲು ಅರ್ಥ ಮಾಡಿಕೊಳ್ಳಬೇಕು. ಮಾನವ ತನ್ನ ಜೀವನ ನಡೆಸಲು ಬೇಕಾದ ಸೌಲಭ್ಯಗಳನ್ನು ಮಾತ್ರ ಹೊಂದುವುದು ಉತ್ತಮ. ಸಂತೋಷ, ನೆಮ್ಮದಿ ಜೀವನ ಮುಖ್ಯ ಅದಕ್ಕೆ ಅಗತ್ಯವಿರುವಷ್ಟು ಪ್ರಾಮಾಣದ ಅಗತ್ಯಗಳೊಂದಿಗೆ ಜೀವನವನ್ನ ನಡೆಸಿ.
ಇತರೆ ವಿಷಯಗಳು: