ದೂರದರ್ಶನದ ಬಗ್ಗೆ ಪ್ರಬಂಧ | Essay on Television in Kannada

ದೂರದರ್ಶನದ ಬಗ್ಗೆ ಪ್ರಬಂಧ, Essay on Television in Kannada, doordarshan essay in kannada, doordarshan prabandha in kannada

ದೂರದರ್ಶನದ ಬಗ್ಗೆ ಪ್ರಬಂಧ

Essay on Television in Kannada
ದೂರದರ್ಶನದ ಪ್ರಬಂಧ Essay on Television in Kannada

ಈ ಲೇಖನಿಯಲ್ಲಿ ದೂರದರ್ಶನದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಪಿಠೀಕೆ

ದೂರದರ್ಶನ ಅಂದರೆ ಹೆಸರೇ ಸೂಚಿಸುವಂತೆ ದೂರದಲ್ಲಿರುವ ದೃಶ್ಯಗಳನ್ನು ಹತ್ತಿರದಲ್ಲಿಯೇ ನೋಡುವಂತೆ ಮಾಡುವ ಸಾಧನವಾಗಿದೆ. ಸಂಪರ್ಕ ಸಾಧನದಲ್ಲಿ ದೂರದರ್ಶನವು ಒಂದು. ದೇಶ ವಿದೇಶಗಳಲ್ಲಿನ ಸಮಾಚಾರಗಳನ್ನು, ದೃಶ್ಯಗಳನ್ನು ಮಾಧ್ಯಮದ ಮೂಲಕ ತಿಳಿಸುವ ಉಪಯುಕ್ತ ಸಾಧನವಾಗಿದೆ.

ದೂರದರ್ಶನವು ಪ್ರಪಂಚದಾದ್ಯಂತ ಮನರಂಜನೆಗಾಗಿ ಬಳಸಲಾಗುವ ಅತ್ಯಂತ ಜನಪ್ರಿಯ ಸಾಧನಗಳಲ್ಲಿ ಒಂದಾಗಿದೆ. ಇತ್ತೀಚಿನ ದಿನಗಳಲ್ಲಿ ಇದು ತುಂಬಾ ಸಾಮಾನ್ಯವಾಗಿದೆ ಮತ್ತು ಬಹುತೇಕ ಪ್ರತಿಯೊಂದು ಮನೆಯವರು ತಮ್ಮ ಸ್ಥಳದಲ್ಲಿ ಒಂದು ದೂರದರ್ಶನವನ್ನು ಹೊಂದಿದ್ದಾರೆ. ಇದು ಹೆಚ್ಚಾಗಿ ಹೀಗಿತ್ತು ಏಕೆಂದರೆ ಆ ದಿನಗಳಲ್ಲಿ ಇದು ಮನರಂಜನೆಯ ವಿಷಯವಾಗಿತ್ತು. ಈಗಿನಷ್ಟು ಮಾಹಿತಿ ನೀಡುವ ಚಾನೆಲ್‌ಗಳು ಅದರಲ್ಲಿ ಇರಲಿಲ್ಲ.

ವಿಷಯ ವಿವರಣೆ

ಭಾರತದಲ್ಲಿ ೧೯೫೯ರ ಸೆಪ್ಟೆಂಬರ್‌ ೧೫ ರಂದು ದೂರದರ್ಶನದ ಪ್ರಸಾರ ಆರಂಭವಾಯಿತು. ಈ ದೊರದರ್ಶನವನ್ನು ಕಂಡುಹಿಡಿದವರು ಅಮೇರಿಕಾದ ವಿಜ್ಞಾನಿ ಜೆ. ಎಲ್‌ ಬೈರ್ಡ್‌ ರವರು. ಇಂದು ದೂರದರ್ಶನವು ಪ್ರತಿಯೊಂದು ಮನೆಯೂ ತಮ್ಮ ಮನೆಗಳಲ್ಲಿ ಕನಿಷ್ಟ ಒಂದು ದೂರದರ್ಶನವನ್ನಾದರು ಹೊಂದಿದೆ. ಇದು ಎಲ್ಲಾ ವಯಸ್ಸಿನವರಿಗೂ ಮನೋರಂಜನೆಯಾಗಿ ಕಾರ್ಯವನ್ನು ನಿರ್ವಹಿಸುತ್ತಿದೆ ಅಥವಾ ಸಾಧನವಾಗಿದೆ ಎಂದು ಹೇಳಬಹುದು. ಹಾಗೆ ಈ ದೂರದರ್ಶನವು ಶ್ರೀಮಂತರ ಸ್ವತ್ತಾಗಿತ್ತು. ಈಗ ಬಡವರ ಪಾಲಾಗಿ ಅವರಿಗೆ ವರದಾನವಾಗಿದೆ. ಇದು ನಮ್ಮ ಕಣ್ಣಿಗೆ ಕಾಣದಂತೆ ಪ್ರಪಂಚದೊಂದಿಗೆ ನಮ್ಮನ್ನು ಸಂಪರ್ಕಿಸುವಂತಾ ಕೊಂಡಿಯಾಗಿದೆ. ಹಾಗೆ ಇದು ಮಹಿಳೆಯರಿಗೆ,ಮಕ್ಕಳಿಗೆ, ವಿದ್ಯಾರ್ಥಿಗಳಿಗೆ, ಯುವಕರಿಗೆ, ವೃದ್ದರಿಗೆ, ವೀಕ್ಷಕರಿಗೆ ಹೀಗೆ ಹಲವಾರು ರೀತಿಯ ಕಾರ್ಯಕ್ರಮಗಳು ದೂರದರ್ಶನದಲ್ಲಿ ಪ್ರಸಾರವಾಗುತ್ತವೆ. ಇದರ ಉದ್ಧೇಶ ಜನರಿಗೆ ಪ್ರಮುಖವಾಗಿ ಸುದ್ದಿ ಪ್ರಸಾರವನ್ನು ನೀಡುವ ಜೊತೆಗೆ ಮನರಂಜನೆಯನ್ನು ನೀಡುವುದಾಗಿದೆ. ಆಧುನಿಕ ಯುಗದಲ್ಲಿ ವೈಜ್ಞಾನಿಕ ಸಂಪರ್ಕ ಮಾಧ್ಯಮವೆಂದು ದೂರದರ್ಶನವನ್ನು ಗುರುತಿಸಬಹುದು. ಇದೊಂದು ದೃಶ್ಯ -ಶ್ರವ್ಯ ರೂಪದಲ್ಲಿ ನೋಡಬಹುದು. ಜಗತ್ತಿನ ಯಾವುದೇ ಭಾಗದಲ್ಲಿ ನಡೆಯುವ ಘಟನೆಗಳನ್ನು ನೋಡಬಹುದು.

ದೂರದರ್ಶನದಿಂದಾಗುವ ಅನುಕೂಲಗಳು

ದೂರದರ್ಶನದಿಂದ ನಾವೆಲ್ಲರು ಹಲವಾರು ಅನುಕೂಲಗಳನ್ನು ಪಡೆದುಕೊಳ್ಳುತ್ತಿದ್ದೇವೆ. ಅವುಗಳನ್ನು ಈ ಕೆಳಕಂಡಂತೆ ತಿಳಿಸಲಾಗಿದೆ.

  • ಪ್ರಪಂಚದಾದ್ಯಂತ ದೈನಂದಿನ ಘಟನೆಗಳ ಬಗ್ಗೆ ತಿಳಿಯಬಹುದು.
  • ಕೆಲವು ವಿಷಯಗಳ ಬಗ್ಗೆ ನವೀಕರಿಸಲು ದೂರದರ್ಶನವು ನಮಗೆ ಸಹಾಯ ಮಾಡುತ್ತದೆ.
  • ಸಾಂಸೃತಿಕ – ಶೈಕ್ಷಣಿಕ ಕ್ರೀಡೆ ಇತ್ಯಾದಿ ಎಲ್ಲಾ ಬಗೆಯ ಚಟುವಟಿಕೆಗಳನ್ನು ಕಾರ್ಯಕ್ರಮಗಳನ್ನು ನಮ್ಮ ಮನೆಯಲ್ಲೆ ಕುಳಿತು ನೋಡಬಹುದು.
    • ಈಗ ಕೆಲವೊಂದು ಧಾರವಾಹಿಗಳ ಮೂಲಕವು ಕೂಡ ಪುರಾಣ ಇತಿಹಾಸವನ್ನು ತಿಳಿದುಕೊಳ್ಳಬಹುದು ಅಂದರೆ ರಾಮಾಯಣ, ಮಹಾಭಾರತಗಳಂತವುಗಳಲ್ಲಿ.
  • ದೂರದರ್ಶನವು ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ವ್ಯಕ್ತಿಗಳನ್ನು ಪ್ರೇರೇಪಿಸುತ್ತದೆ.
  • ಪ್ರೇರಕ ಭಾಷಣಕಾರರ ಭಾಷಣಗಳನ್ನು ತೋರಿಸುವ ವಿವಿಧ ಕಾರ್ಯಕ್ರಮಗಳನ್ನು ಸಹ ಹೊಂದಿದ್ದಾರೆ. ಇದು ಜನರನ್ನು ಉತ್ತಮವಾಗಿ ಮಾಡಲು ತಳ್ಳುತ್ತದೆ. ದೂರದರ್ಶನವು ಹಲವಾರು ಕ್ರೀಡೆಗಳು, ರಾಷ್ಟ್ರೀಯ ಘಟನೆಗಳು ಮತ್ತು ಹೆಚ್ಚಿನವುಗಳ ಬಗ್ಗೆ ನಮ್ಮ ಜ್ಞಾನವನ್ನು ಹೆಚ್ಚಿಸುತ್ತದೆ.
  • ಇದು ಪ್ರಪಂಚದ ಇತ್ತೀಚೆಗಿನ ಘಟನೆಗಳ ಬಗ್ಗೆ ನಮಗೆ ಅಪ್‌ಡೇಟ್ ಆಗಿರುತ್ತದೆ.
  • ದೂರದರ್ಶನವು ಬಹಳಷ್ಟು ಪ್ರಯೋಜನಗಳನ್ನು ಹೊಂದಿದೆ. ಇದು ಸಕರಾತ್ಮಕ ಭಾಗವನ್ನು ಹೊಂದಿದೆ. ಟೆಲಿವಿಷನ್ ಯುವಜನರ ಮನಸ್ಸನ್ನು ಪ್ರೇರೆಪಿಸುತ್ತಿದೆ.
  • ಪ್ರಪಂಚದ ಇತರ ಮೂಲೆಗಳಿಂದ ಸುದ್ದಿಗಳನ್ನು ಪಡೆಯಲು ಈಗ ಸಾಧ್ಯವಿದೆ. ಇದು ವಿಜ್ಞಾನ ಮತ್ತು ವನ್ಯಜೀವಿ ಮತ್ತು ಹೆಚ್ಚಿನವುಗಳ ಬಗ್ಗೆ ನಮ್ಮ ಜ್ಞಾನವನ್ನು ಹೆಚ್ಚಿಸುವ ಶೈಕ್ಷಣಿಕ ಕಾರ್ಯಕ್ರಮಗಳನ್ನು ಸಹ ನೀಡುತ್ತದೆ.

ದೂರದರ್ಶನದಿಂದಾಗುವ ಅನಾನುಕೂಲಗಳು

  • ದೂರದರ್ಶನದಿಂದ ಎಷ್ಟು ಅನುಕೂಲಗಳಿದಾವೊ ಅಷ್ಟೆ ಅನಾನುಕೂಲಗಳು ಕೂಡ ಇವೆ. ಅವುಗಳನ್ನು ಈ ಕೆಳಕಂಡಂತೆ ತಿಳಿಯೋಣ.
  • ಮೊದಲನೆಯದಾಗಿ, ಹಿಂಸೆ ಹಾಗು ಸಾಮಾಜಿಕ ಅನಿಷ್ಟಗಳನ್ನು ಉತ್ತೇಜಿಸುವ ಅನುಚಿತ ವಿಷಯವನ್ನು ದೂರದರ್ಶನದಲ್ಲಿ ಪ್ರಸಾರವಾಗುವುದುದರಿಂದ ಎಂಬುದನ್ನು ಅದೇ ರೀತಿ ಕೆಟ್ಟ ಪದ್ದತಿಗಳು ಕೂಡ ಇಂದಿಗೂ ಜಾರಿಯಲ್ಲಿವೆ.
  • ಇದು ನಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ದೂರದರ್ಶನದ ಮುಂದೆ ಗಂಟೆಗಟ್ಟಲೆ ಕಾಲಕಳೆದರೆ ದೃಷ್ಟಿ ದುರ್ಬಲವಾಗುತ್ತದೆ. ನಿಮ್ಮ ಭಂಗಿಯು ನಿಮ್ಮ ಕುತ್ತಿಗೆ ಮತ್ತು ಬೆನ್ನಿನಲ್ಲಿ ನೋವನ್ನು ಉಂಟುಮಾಡುತ್ತದೆ.
  • ಮಕ್ಕಳು ಇದನ್ನ ನೋಡುವದರಿಂದ ಶೈಕ್ಷಣಿಕವಾಗಿ ಹಿಂದುಳಿಯುತ್ತಿದ್ದಾರೆ. ಸಮಯ ವ್ಯರ್ಥ ವಾಗುವುದು.
  • ಪುಸ್ತಕಗಳನ್ನು ಓದುವ ಅಭ್ಯಾಸವನ್ನು ಮರೆತಿದ್ದಾರೆ. ತಮ್ಮ ಕ್ರಿಯಾಶೀಲತೆ ಯನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ.
  • ಎಲ್ಲಕ್ಕಿಂತ ಅಪಾಯಕಾರಿ ಸುದ್ದಿ ವಾಹಿನಿಗಳು ಮತ್ತು ಹೆಚ್ಚಿನವುಗಳಲ್ಲಿ ಪ್ರಸಾರವಾಗುವ ನಕಲಿ ಮಾಹಿತಿ.
  • ಅನೇಕ ಮಾಧ್ಯಮ ಚಾನೆಲ್‌ಗಳು ಈಗ ಸರ್ಕಾರಗಳ ಪ್ರಚಾರ ಮತ್ತು ನಾಗರಿಕರಿಗೆ ತಪ್ಪು ಮಾಹಿತಿ ನೀಡುತ್ತಿವೆ. ಇದು ನಮ್ಮ ದೇಶದ ಶಾಂತಿಯುತ ಸಮುದಾಯದಲ್ಲಿ ಬಹಳಷ್ಟು ವಿಭಜನೆಯನ್ನು ಉಂಟುಮಾಡುತ್ತದೆ.

ಉಪಸಂಹಾರ

ದೂರದರ್ಶನದಿಂದ ಒಳಿತುಗಳನ್ನು ಹಾಗೆ ಕೆಡಕುಗಳನ್ನು ಕಾಣಬಹುದು. ವೀಕ್ಷಕರಲ್ಲಿ ಆಯ್ಕೆಯ ಸ್ವತಂತ್ರವಿರುವುದರಿಂದ ಉತ್ತಮವಾಗಿರುವಂತ ಕಾರ್ಯಕ್ರಮಗಳನ್ನು ಆಯ್ದುಕೊಳ್ಳುವಂತದ್ದು. ಯಾವುದೇ ಮಾಧ್ಯಮವನ್ನಾಗಲಿ ಹೇಗೆ ನಮಗೆ ನಾವು ಅಳವಡಿಸಿಕೊಳ್ಳಬೇಕು ಎಂಬುದು ಮುಖ್ಯ ವಾಗಿರತ್ತೆ. ನಾವು ದೂರದರ್ಶನದಲ್ಲಿ ಅರ್ಥಗರ್ಭಿತ ವಾಗಿರುವ ಕೆಲವು ಕಾರ್ಯಕ್ರಮಗಳನ್ನ, ಹಾಗೆ ಮನರಂಜನೆ ಕಾರ್ಯಕ್ರಮಗಳನ್ನು ನೋಡುವಂತದ್ದು ಬಹುಮುಖ್ಯವಾಗದೆ. ಇದರಿಂದ ಜ್ಞಾನಭಂಡಾರವನ್ನು ತಮ್ಮದಾಗಿಸಿಕೊಳ್ಳುವಂತ ಸಾಧ್ಯತೆಯು ಕೂಡ ಇದೆ.

FAQ

ಭಾರತದಲ್ಲಿ ದೂರದರ್ಶನ ಪ್ರಸಾರವು ಎಷ್ಟರಲ್ಲಿ ಆರಂಭವಾಯಿತು ?

೧೯೫೯ / ಸೆಪ್ಟೆಂಬರ್‌ ೧೫ ರಂದು ಆರಂಭವಾಯಿತು.

ದೂರದರ್ಶನವನ್ನು ಯಾವ ದೇಶದ ವಿಜ್ಞಾನಿ ಕಂಡುಹಿಡಿದರು ?

ಅಮೇರಿಕದ ವಿಜ್ಞಾನಿ ಕಂಡುಹಿಡಿದರು .

ದೂರದರ್ಶನವನ್ನು ಕಂಡುಹಿಡಿದವರು ಯಾರು ?

ಜೆ . ಎಲ್‌ ಬೈರ್ಡ್‌ ರವರು ದೂರದರ್ಶನವನ್ನು ಕಂಡುಹಿಡಿದವರು .

ಇತರೆ ಪ್ರಬಂಧಗಳು:

ಕನ್ನಡ ರಾಜ್ಯೋತ್ಸವದ ಬಗ್ಗೆ ಪ್ರಬಂಧ

ರಾಷ್ಟ್ರೀಯ ಏಕತಾ ದಿನಾಚರಣೆ ಬಗ್ಗೆ ಭಾಷಣ

ದೀಪಾವಳಿ ಬಗ್ಗೆ ಪ್ರಬಂಧ

ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಬಂಧ

Leave a Comment