ದೀಪಾವಳಿ ಬಗ್ಗೆ ಪ್ರಬಂಧ | Essay on Diwali in Kannada

ದೀಪಾವಳಿ ಬಗ್ಗೆ ಪ್ರಬಂಧ, Essay on Diwali in Kannada, deepavali bagge prabandha in kannada, diwali festival essay in kannada

ದೀಪಾವಳಿ ಬಗ್ಗೆ ಪ್ರಬಂಧ

Essay on Diwali in Kannada
Essay on diwali in kannada

ಈ ಲೇಖನಿಯಲ್ಲಿ ದೀಪಾವಳಿ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ. ಹಾಗೂ ನಿಮಗೂ ನಿಮ್ಮ ಕುಟುಂಬದವರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.

ಪಿಠೀಕೆ

ದೀಪಗಳಿಂದ ದೀಪವನ್ನು ಹಚ್ಚುವ ಹಬ್ಬವಾಗಿದೆ. ಕತ್ತಲೆಯನ್ನು ಹೋಗಲಾಡಿಸಿ ಮನೆ ಹಾಗೂ ಮನದ ಕತ್ತಲೆಯನ್ನು ನಿವಾರಿಸಿ ಬೆಳಕನ್ನು ಉಂಟು ಮಾಡುವ ಹಬ್ಬವೇ ದೀಪಾವಳಿ. ದೀಪಾವಳಿ ಹಬ್ಬವು ಹಿಂದೂಗಳ ಅತ್ಯಂತ ಮಹತ್ವದ ಹಾಗು ಹಬ್ಬಗಳಲ್ಲೇ ದೊಡ್ಡ ಹಬ್ಬವಾಗಿದೆ. ವಿಜಯದ ಸಂಕೇತವಾಗಿ ಆಚರಿಸುವ ಹಬ್ಬವಾಗಿದೆ. ಭಾರತದಾದ್ಯಂತ ಜನರು ಬಹಳ ಸಂತೋಷ ಮತ್ತು ಉತ್ಸಾಹದಿಂದ ದೀಪಾವಳಿಯನ್ನು ಆಚರಿಸುತ್ತಾರೆ. ದೀಪಾವಳಿಯನ್ನು ಭಾರತ ಮತ್ತು ಪ್ರಪಂಚದಾದ್ಯಂತ ಆಚರಿಸುವ ಅತ್ಯಂತ ಮಂಗಳಕರವಾದ ಹಿಂದೂ ಹಬ್ಬಗಳಲ್ಲಿ ಇದು ಒಂದಾಗಿದೆ. ಇದು ಹಿಂದೂ ಹಬ್ಬವಾಗಿದ್ದರೂ ಸಹ ಸಮಾಜದ ಕೆಲವು ವರ್ಗದ ಜನರು ಒಂದೆಡೆ ಸೇರಿ ಪಟಾಕಿ ಹಚ್ಚುವುದರ ಮೂಲಕ ಸಂಭ್ರಮದಿಂದ ಈ ಹಬ್ಬವನ್ನು ಆಚರಿಸುತ್ತಾರೆ.

ವಿಷಯ ವಿವರಣೆ

ದೀಪಾವಳಿ ಎಂಬ ಪದವು ಹಿಂದಿ ಪದವಾಗಿದ್ದು ಇದರ ಅರ್ಥ ದೀಪಗಳ ಒಂದು ಶ್ರೇಣಿ ಎಂದರ್ಥವನ್ನು ನೀಡುತ್ತದೆ. ದೀಪಾವಳಿ ಅಕ್ಟೋಬರ್ ಅಥವಾ ನವೆಂಬರ್ ತಿಂಗಳೊಳಗೆ ಬರುತ್ತದೆ. ದಸರಾ ಹಬ್ಬದ ೨೦ ದಿನಗಳ ನಂತರ ಈ ಹಬ್ಬವನ್ನು ಆಚರಿಸುತ್ತಾರೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ದೀಪಾವಳಿಯು ಕಾರ್ತಿಕ ಮಾಸದ ಅಮವಾಸ್ಯೆಯಂದು ಬರುತ್ತದೆ. ದೀಪಾವಳಿ ಹಬ್ಬವನ್ನು ಅನೇಕ ದೇವತೆಗಳು, ಧರ್ಮಗಳು, ಸಂಸ್ಕೃತಿಗಳು ಮತ್ತು ಸಂಪ್ರದಾಯಗಳೊಂದಿಗೆ ಈ ಹಬ್ಬವನ್ನು ಆಚರಿಸುತೇವೆ . ದೀಪಾವಳಿಯಲ್ಲಿ ಕೆಟ್ಟದರ ಮೇಲೆ ಶುಭದ ವಿಜಯವನ್ನು ಸಾರುವದರ ಮೂಲಕ ಈ ಹಬ್ಬವನ್ನು ಆಚರಿಸಲಾಗುತ್ತದೆ. ಎಲ್ಲಾ ಜನರು ತಮ್ಮ ಮನೆಗಳನ್ನು ದೀಪಗಳಿಂದ ಹೂಗಳಿಂದ ಮೇಣದ ಬತ್ತಿ ಹಾಗು ರಂಗೋಲಿಯನ್ನು ಹಾಕುವುದು ಇನ್ನು ಮುಂತಾದವುಗಳಿಂದ ಮನೆಗಳನ್ನು ಅಲಂಕರಿಸುತ್ತಾರೆ.

ದೀಪಾವಳಿ ಹಬ್ಬದ ಇತಿಹಾಸ

ಈ ಹಬ್ಬವನ್ನು ಶ್ರೀ ರಾಮ ರಾವಣನ್ನು ಗೆದ್ದು ತನ್ನ ಪತ್ನಿಯಾದ ಸೀತೆ, ಸಹೋದರನಾ ಲಕ್ಷ್ಮಣ ಹಾಗು ಹನುಮಂತ ಇವರೊಂದಿಗೆ ಅಯೋಧ್ಯೆಗೆ ಮರಳಿದ ಸಮಯವೆಂದು ಕೆಲವರು ದೀಪಾವಳಿಯನ್ನು ಆಚರಿಸುತ್ತಾರೆ. ಆ ಸಮಯದಲ್ಲಿ, ಅಯೋಧ್ಯೆಯ ಜನರು ತಮ್ಮ ಪ್ರೀತಿಯ ರಾಜಕುಮಾರ ರಾಮನನ್ನು, ಅವನ ಹೆಂಡತಿ ಸೀತೆ, ಸಹೋದರ ಲಕ್ಷ್ಮಣ ಮತ್ತು ಹನುಮಂತನೊಂದಿಗೆ ಮಣ್ಣಿನ ದೀಪಗಳು ಅಥವಾ ದೀಪಗಳನ್ನು ಬೆಳಗಿಸಿ ಮತ್ತು ಪಟಾಕಿಗಳನ್ನು ಸಿಡಿಸುವ ಮೂಲಕ ಸ್ವಾಗತಿಸಿದರು. ಆ ದಿನ ಇಡೀ ಅಯೋಧ್ಯೆಯನ್ನು ಮಣ್ಣಿನ ದೀಪಗಳು ಮತ್ತು ಹೂವುಗಳಿಂದ ಅಲಂಕರಿಸಲಾಗಿತ್ತು ಮತ್ತುದೀಪಗಳಿಂದ ಬೆಳಗಿಸಲಾಗಿತ್ತು. ಆ ಬಳಿಕ ಆ ದಿನದ ನೆನಪಿಗಾಗಿ ದೀಪಾವಳಿ ಆಚರಿಸಲಾಗುತ್ತಿದೆ.

ದೀಪಾವಳಿ ಹಬ್ಬವು ಹಿಂದೂಗಳು ಆಚರಿಸುವ ಅತ್ಯಂತ ದೊಡ್ಡ ಹಬ್ಬವಾಗಿದೆ. ಆದರೆ ಹಿಂದೂಯೇತರ ಧರ್ಮದವರು ಕೂಡ ಈ ಹಬ್ಬವನ್ನು ಆಚರಿಸುತ್ತಾರೆ. ಮೊಘಲ್ ಚಕ್ರವರ್ತಿ ಜಹಾಂಗೀರ್‌ನ ಸೆರೆಮನೆಯಿಂದ ಗುರು ಗೋಬಿಂದ್ ಬಿಡುಗಡೆಯಾದ ನೆನಪಿಗಾಗಿ ಸಿಖ್ಖರು ದೀಪಾವಳಿಯನ್ನು ಆಚರಿಸುತ್ತಾರೆ.

ದೀಪಾವಳಿ ಹಬ್ಬದ ಬಗ್ಗೆ ಇನ್ನೊಂದು ದಂತಕಥೆಯು ಇದೆ. ಲಕ್ಷ್ಮಿ ದೇವಿಯ ಮತ್ತು ವಿಷ್ಣುವಿಗೆ ವಿವಾಹವಾಗಿದೆ. ಈ ದಿನ ಲಕ್ಷ್ಮಿ ದೇವಿಯು ಭಗವಾನ್ ವಿಷ್ಣುವನ್ನು ಆರಿಸಿ ಆತನನ್ನು ಮದುವೆಯಾದಳು. ಲಕ್ಷ್ಮೀ ದೇವಿಯು ಸಂಪತ್ತು ಮತ್ತು ಸಮೃದ್ಧಿಯನ್ನು ನೀಡಲು ಹೆಸರುವಾಸಿಯಾಗಿದ್ದಾಳೆ. ಇದಕ್ಕೆ ದೀಪಾವಳಿಯೆಂದು ಲಕ್ಷ್ಮೀ ದೇವಿಯ ಪೂಜೆಯನ್ನು ಮಾಡುತ್ತಾರೆ.

ಶ್ರೀಕೃಷ್ಣನು ನರಕಾಸುರನನ್ನು ಕೊಂದ ನೆನಪಿಗಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ನರಕಾಸುರನನ್ನು ಆಶ್ವಯುಜ ಕೃಷ್ಣ ಚತುರ್ದಶಿಯ ಕತ್ತಲೆಯಲ್ಲಿ ಕೃಷ್ಣ ಸಂಹಾರ ಮಾಡುತ್ತಾನೆ. ನರಕಾಸುರನ ಸೆರೆಯಲ್ಲಿದ್ದ 16000 ಹುಡುಗಿಯರನ್ನು ಬಿಡುಗಡೆ ಮಾಡಿದನು . ಇದರ ನೆನಪಿಗಾಗಿ ಈ ಹಬ್ಈಬವನ್ನು ಆಚರಿಸಲಾಗುತ್ತದೆ. ಹಬ್ಬದಂದು ಸಿಹಿ ತಿನಿಸುಗಳನ್ನು ಕುಟುಂಬದವರಿಗೆ, ಸ್ನೇಹಿತರಿಗೆ ಹಾಗೂ ಸಂಬಂಧಿಕರಿಗೆ ಹಂಚುತ್ತಾರೆ.

ದೀಪಾವಳಿಯ ಹಬ್ಬದಂದು ಗೋ ಪೂಜೆ ಮತ್ತು ಆಯುಧ ಪೂಜೆಯನ್ನು ಮಾಡುತ್ತಾರೆ. ಈ ದಿನದಂದು ಗೋವುಗಳನ್ನು ಅಲಂಕರಿಸಿ, ಹಾಲು ಹಿಡಿಯುವ ಪಾತ್ರೆ, ಕುಡಗೋಲುಗಳನ್ನು ಪೂಜಿಸಿ, ಗೋಶಾಲೆಯನ್ನು ದೀಪದಿಂದ ಬೆಳಗಿ, ಹಸುಗಳಿಗೆ ಅಕ್ಕಿ, ಬೆಲ್ಲ, ತಿಂಡಿ ತಿನಿಸುಗಳನ್ನು ನೀಡುತ್ತಾರೆ.

ದೀಪಾವಳಿ ಹಬ್ಬದ ಸಿದ್ದತೆಗಳು

ದೀಪಾವಳಿಯ ತಯಾರಿಯು ಹಬ್ಬಕ್ಕೆ ಹಲವು ದಿನಗಳ ಮುಂಚೆಯೇ ಪ್ರಾರಂಭವಾಗುತ್ತದೆ, ಮನೆಗಳು, ಅಂಗಡಿಗಳು ಮತ್ತು ಕೆಲಸದ ಸ್ಥಳಗಳನ್ನು ಸ್ವಚ್ಛಗೊಳಿಸುವ ಮೂಲಕ ಜನರು ತಮ್ಮ ಮನೆಗಳನ್ನು ರಂಗೋಲಿ ಮತ್ತು ಬಣ್ಣ ಬಣ್ಣದ ದೀಪಗಳಿಂದ ಹೂಗಳಿಂದ, ಮೇಣದ ಬತ್ತಿ , ತಳಿರು ತೋರಣ, ಹೂ ಮಾಲೆ ಗಳಿಂದ ಮನೆಗಳ ಅಲಂಕಾರ ಮಾಡುತ್ತಾರೆ.

ದೀಪಾವಳಿ ಹಬ್ಬದಂದು ಹೊಸ ಬಟ್ಟೆಗಳನ್ನು ತಂದು ನಂತರ ದೇವರಲ್ಲಿ ಇಟ್ಟು ಪೂಜೆ ಮಾಡಿ ನಂತರ ಧರಿಸುವುದು, ರುಚಿಕರವಾದ ಭಕ್ಷ್ಯ ಭೋಜನಗಳನ್ನು ತಯಾರಿಸುವುದು ಮತ್ತು ತಿನ್ನುವುದು, ಪಟಾಕಿಗಳನ್ನು ಹೊಡೆಯುವುದು ಮತ್ತು ಆದಾಗ್ಯೂ, ಕಳೆದ ಕೆಲವು ವರ್ಷಗಳಿಂದ, ಸಾಕಷ್ಟು ಶಬ್ದ ಮಾಲಿನ್ಯವನ್ನು ಉಂಟುಮಾಡುವ ಪಟಾಕಿಗಳನ್ನು ಹೊಡೆಯುವುದಕ್ಕೆ ಸರ್ಕಾರವು ಮಿತಿಗಳನ್ನು ವಿಧಿಸಿದೆ. ಆದ್ದರಿಂದ, ಇತ್ತೀಚಿನ ದಿನಗಳಲ್ಲಿ ಜನರು ಪರಿಸರ ಸ್ನೇಹಿ ದೀಪಾವಳಿಯನ್ನು ಆಚರಿಸುತ್ತಿದ್ದಾರೆ.

ದೀಪಾವಳಿ ಹಬ್ಬದಲ್ಲಿನ ಆಚರಣೆಗಳು

ಜನರು ಗಣೇಶ, ಲಕ್ಷ್ಮಿ ಮತ್ತು ಸರಸ್ವತಿ ದೇವಿಯನ್ನು ಪೂಜಿಸುವ ಮೂಲಕ ದೀಪಾವಳಿಯನ್ನು ಆಚರಿಸುತ್ತಾರೆ. ಈ ದಿನ ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ಸಮೃದ್ಧಿ ಮತ್ತು ಯಶಸ್ಸನ್ನು ತರುತ್ತದೆ ಎಂದು ನಂಬಲಾಗಿದೆ.

ಗೋ ಪೂಜೆಯನ್ನು ಮಾಡುತ್ತಾರೆ. ಈ ದಿನದಂದು ಗೋವುಗಳನ್ನು ಅಲಂಕರಿಸಿ , ಹಾಲು ಹಿಡಿಯುವ ಪಾತ್ರೆ, ಕುಡಗೋಲುಗಳನ್ನುಇಟ್ಟು ಪೂಜಿಸಿ, ಕೊಟ್ಟಿಗೆ ಯನ್ನು ದೀಪದಿಂದ ಬೆಳಗಿ, ಹಸುಗಳಿಗೆ ಅಕ್ಕಿ, ಬೆಲ್ಲ, ತಿಂಡಿ ತಿನಿಸುಗಳನ್ನು ನೀಡುವುದರ ಮೂಲಕ ಆಚರಿಸುತ್ತಾರೆ.

ಶ್ರೀಕೃಷ್ಣನು ನರಕಾಸುರನನ್ನು ಕೊಂದ ನೆನಪಿಗಾಗಿ ಈ ಹಬ್ಬವನ್ನು ಆಚರಿಸುವುದು, ನರಕಾಸುರನನ್ನು ಆಶ್ವಯುಜ ಕೃಷ್ಣ ಚತುರ್ದಶಿಯ ಕತ್ತಲೆಯಲ್ಲಿ ಕೃಷ್ಣ ಸಂಹಾರ ಮಾಡುತ್ತಾನೆ. ಈ ಹಬ್ಬದಂದು ಸಿಹಿ ತಿನುಸುಗಳನ್ನು ಖರೀದಿಸಿ ಕುಟುಂಬದವರಿಗೆ, ಸ್ನೇಹಿತರಿಗೆ ಹಾಗೂ ಸಂಬಂಧಿಕರಿಗೆ ಹಂಚುತ್ತಾರೆ. ಸಿಹಿ ತಯಾರಿಸುವವರು ನರಕ ಚತುರ್ದಶಿದಂದು ಹೆಚ್ಚು ಸಮಯ ಕೆಲಸ ಮಾಡುತ್ತಾರೆ.

ಉಪಸಂಹಾರ

ಕೆಟ್ಟದ್ದು ಎಷ್ಟೇ ದೊಡ್ಡದಾಗಿರಲಿ ಅಥವಾ ಬಲವಾಗಿದ್ದರೂ ಒಳ್ಳೆಯದು ಯಾವಾಗಲೂ ಗೆಲ್ಲುತ್ತದೆ. ವಿಜಯದ ಸಂಕೇತವಾಗಿದೆ. ಸತ್ಯ ಮತ್ತು ಜ್ಞಾನವು ಸಂತೋಷದ ಜೀವನಕ್ಕೆ ಆಧಾರವಾಗಿದೆ. ದೀಪಾವಳಿಯ ಮತ್ತೊಂದು ಪ್ರಮುಖ ಕಲಿಕೆಯೆಂದರೆ, ಸ್ವಚ್ಛತೆಯು ಸಮೃದ್ಧಿ ಮತ್ತು ಸಂಪತ್ತನ್ನು ತರುತ್ತದೆ, ಆದ್ದರಿಂದ ಜನರು ತಮ್ಮನ್ನು ಮತ್ತು ತಮ್ಮ ಮನೆಗಳನ್ನು ಹೊರಗಿನಿಂದ ಮಾತ್ರವಲ್ಲದೆ ಒಳಗಿನಿಂದ ಕೂಡ ಸ್ವಚ್ಛವಾಗಿರಿಸಿಕೊಳ್ಳಬೇಕು. ಕೆಡುಕಿನ ಮೇಲೆ ಒಳಿತಿನ ವಿಜಯವನ್ನು ಸಾಧಿಸುವುದು.

FAQ

ದೀಪಾವಳಿಯು ಯಾವುದರ ಸಂಕೇತವಾಗಿದೆ ?

ವಿಜಯದ ಸಂಕೇತವಾಗಿದೆ.

ದೀಪಾವಳಿಯು ಯಾವ ಮಾಸದಂದು ಬರುವ ಹಬ್ಬವಾಗಿದೆ ?

ಕಾರ್ತಿಕೆಯ ಮಾಸದಲ್ಲಿ ಬರುವ ಹಬ್ಬವಾಗಿದೆ.

ಇತರೆ ಪ್ರಬಂಧಗಳು:

ಕನ್ನಡ ರಾಜ್ಯೋತ್ಸವದ ಬಗ್ಗೆ ಪ್ರಬಂಧ

ಪರಿಸರ ಸಂರಕ್ಷಣೆ ಪ್ರಬಂಧ

Leave a Comment