ಶೌಚಾಲಯದ ಬಗ್ಗೆ ಪ್ರಬಂಧ| Essay On Toilet in Kannada

ಶೌಚಾಲಯದ ಬಗ್ಗೆ ಪ್ರಬಂಧ Essay On Toilet sauchalaya prabandha in kannada

ಶೌಚಾಲಯದ ಬಗ್ಗೆ ಪ್ರಬಂಧ

Essay On Toilet in Kannada
ಶೌಚಾಲಯದ ಬಗ್ಗೆ ಪ್ರಬಂಧ| Essay on toilet

ಈ ಲೇಖನಿಯಲ್ಲಿ ಶೌಚಾಲಯದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಪೀಠಿಕೆ

ಶೌಚಾಲಯಗಳು ಇದು ಒಂದು ಸಣ್ಣ ವಿಷಯವಲ್ಲ. ಇದರಿಂದಾಗಿಯೇ ಜಾಗತಿಕ ಮಟ್ಟದಲ್ಲಿ ಇವುಗಳಿಗೆ ಹೆಚ್ಚಿನ ಮನ್ನಣೆ ಹಾಗೂ ಮಹತ್ವ ನೀಡಲಾಗುತ್ತಿದೆ. ನೈರ್ಮಲ್ಯಕ್ಕೂ, ಆರೋಗ್ಯಕ್ಕೂ ಅವಿನಾಭಾವ ಸಂಬಂಧವಿದೆ. ಉತ್ತಮ ನೈರ್ಮಲ್ಯ ವ್ಯವಸ್ಥೆ ಇದ್ದಲ್ಲಿ ಉತ್ತಮ ಆರೋಗ್ಯವೂ ಇರುತ್ತದೆ. ಆರೋಗ್ಯದ ಮೇಲೆ ಮಾಡುವ ವೆಚ್ಚ ತಂತಾನೆ ಕಡಿಮೆಯಾಗುತ್ತದೆ. ಆದ್ದರಿಂದಲೇ ಶೌಚಾಲಯ ಹಾಗೂ ಸ್ವಚ್ಛ ಪರಿಸರಗಳು ಜನರ ಜೀವನ ಗುಣಮಟ್ಟದ ಮಾಪಕವೂ ಹೌದು. ರಾಷ್ಟ್ರವೊಂದರ ಅಭಿವೃದ್ಧಿಯ ದ್ಯೋತಕವೂ ಹೌದು.

ವಿಷಯ ವಿವರಣೆ

ಶೌಚಾಲಯ ಅತೀ ಮುಖ್ಯವಾದುದು. ಏಕೆಂದರೆ ಮನುಷ್ಯ ವಿಸರ್ಜಿಸುವ ಮಲ, ಸಾವು ತರಬಹುದಾದ ಕಾಯಿಲೆಗಳನ್ನು ಹರಡುತ್ತದೆ. ಹಾಗಾಗಿ ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳು ನೈರ್ಮಲ್ಯಕ್ಕೆ ಹೆಚ್ಚು ಆದ್ಯತೆ ನೀಡುತ್ತಿವೆ. ವಿಶ್ವ ಸಂಸ್ಥೆಯೂ ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಪ್ರತಿವರ್ಷ ನವೆಂಬರ್ ೧೯ನೇ ತಾರೀಕನ್ನು ವಿಶ್ವ ಶೌಚಾಲಯ ದಿನ ಎಂದು ಘೋಷಿಸಿದೆ. ಬಯಲುಶೌಚಕ್ಕೆ ಭಾರತ ವಿಶ್ವದಲ್ಲೇ ಅತಿ ಹೆಚ್ಚು ಕುಖ್ಯಾತಿ ಪಡೆದಿತ್ತು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಶೌಚಾಲಯದ ಮಹತ್ವ, ಜಾಗೃತಿ, ಅರಿವು ಮೂಡಿಸುವ ನಿಟ್ಟಿನಲ್ಲಿ ಭಾರತದ ಸಾಧನೆ 2014 ರ ಬಳಿಕ ಪ್ರಶಂಸನೀಯವಾಗಿದೆ. ‘ಸ್ವಚ್ಛ ಭಾರತ ಅಭಿಯಾನ’ದಡಿ ಶೌಚಾಲಯದ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವುದಲ್ಲದೆ, ಶೌಚಾಲಯ ನಿರ್ಮಿಸಿಕೊಳ್ಳಲು ಕೇಂದ್ರ ಸರ್ಕಾರ ಧನಸಹಾಯವನ್ನೂ ನೀಡುತ್ತಿದೆ. ಇದಕ್ಕಾಗಿ ಅಭಿಯಾನದ ಮೂಲಕ ಐದು ವರ್ಷಗಳಲ್ಲಿ 11.1 ಕೋಟಿ ಶೌಚಾಲಯ ನಿರ್ಮಿಸುವ ಗುರಿ ಹೊಂದಲಾಗಿದೆ.

ಶೌಚಾಲಯದ ಮಹತ್ವ

ಇಡೀ ವಿಶ್ವದಲ್ಲಿ ಕಾಡುವ ಅತಿದೊಡ್ಡ ಸಮಸ್ಯೆಯೆಂದರೆ ಶೌಚಾಲಯವನ್ನು ಬಳಸದೆ ಇರುವುದು. ದಿನಕ್ಕೊಂದು ಆರೋಗ್ಯ ಸಮಸ್ಯೆಗಳು ಹುಟ್ಟುವುದು ಇದರ ನಿರ್ಲಕ್ಷತನದಿಂದಲೇ. ಬಯಲು ಶೌಚ ಮುಕ್ತಗೊಳಿಸಲು ಆಯಾ ಸರ್ಕಾರಗಳು, ಅಂತಾರಾಕ್ಷ್ಟ್ರೀಯ ಸಂಘಸಂಸ್ಥೆಗಳು ಕೈಗೊಂಡಿರುವ ಯೋಜನೆಗಳು ಹಲವಾರು. ಆದರೆ ಇದನ್ನು ಸರಿಯಾಗಿ ಬಳಸದೆ ಸಮಸ್ಯೆಗಳ ಹುಟ್ಟಿಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ, ವಿಶ್ವ ಸಂಸ್ಥೆ ಜಾಗತಿಕ ನೈರ್ಮಲ್ಯ ಬಿಕ್ಕಟ್ಟನ್ನು ನಿಭಾಯಿಸಲು ಮತ್ತು ಸುಸ್ಥಿರ ಅಭಿವೃದ್ಧಿಯ ಗುರಿಯಿಂದ 2013ರಲ್ಲಿ ನವೆಂಬರ್ 19ರಂದು ‘ವಿಶ್ವ ಶೌಚಾಲಯ ದಿನ’ ಎಂದು ಘೋಷಿಸಿತು. ಜನ ಸಮುದಾಯಕ್ಕೆ ಶೌಚಾಲಯದ ಮಹತ್ವದ ಅರಿವನ್ನು ಮೂಡಿಸುವುದಾಗಿದೆ. ಆಧುನಿಕತೆ, ವಿಜ್ಞಾನ, ಮಾಹಿತಿ ತಂತ್ರಜ್ಞಾನ, ಮೊಬೈಲ್‌ ಕ್ರಾಂತಿ ದೇಶದ ಹಳ್ಳಿಗಳೂ ಸೇರಿದಂತೆ ಮೂಲೆ ಮೂಲೆಯನ್ನು ತಲುಪಿರುವುದು ನಿಜ. ಆದರೆ ಶೌಚಾಲಯಗಳ ಬಳಕೆ ಮತ್ತು ಸ್ವಚ್ಛತೆಯ ಅಭ್ಯಾಸಗಳಲ್ಲಿ ಮಾತ್ರ ನಿರೀಕ್ಷಿತ ಬದಲಾವಣೆ ಹಾಗೂ ಸುಧಾರಣೆ ಕಂಡುಬರುತ್ತಿಲ್ಲ. ಹಣವಿಲ್ಲದ್ದಕ್ಕೆ ಅವರಿಗೆ ಶೌಚಾಲಯವಿಲ್ಲವೋ ಅಥವಾ ಶೌಚಾಲಯ ಅವರಿಗೆ ಬೇಕು ಅಂತ ಅನ್ನಿಸಿದೆಯೋ ಇಲ್ಲವೋ? ಎಂಬ ಪ್ರಶ್ನೆಗಳು ಏಳುವುದು ಸಹಜ. ಅವರಿಗೆ ಮೊಬೈಲ್‌ ಬೇಕು. ಟಿವಿ-ರೇಡಿಯೋಗಳು ಬೇಕು. ಹಾಗಾಗಿ ಅವುಗಳನ್ನು ಅವರು ಕೊಂಡುಕೊಂಡಿದ್ದಾರೆ. ಆದರೆ ಅವರಿಗೆ ಶೌಚಾಲಯಗಳಿಲ್ಲ. ಅಂದರೆ, ಅವರಿಗೆ ಬೇಕು ಅನ್ನಿಸಿಲ್ಲದಿರಬಹುದು ಅಥವಾ ಶೌಚಾಲಯ ಎಂಬುದು ಅವರ ಆದ್ಯತೆಯಾಗಿಲ್ಲದಿರಬಹುದು. ಅಥವಾ ಅವರಿಗೆ ಶೌಚಾಲಯದ ಮಹತ್ವದ ಬಗ್ಗೆ ಹೆಚ್ಚಿನ ಅರಿವು ಇಲ್ಲದಿರಬಹುದು. ಒಟ್ಟಾರೆ ಜನರಲ್ಲಿ ಈ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವುದಾಗಿದೆ.

ಶೌಚಾಲಯದ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸುವುದು

ಮನೆಗಳಲ್ಲಿ ಶೌಚಾಲಯಗಳಿಲ್ಲದ ಜನರಿಗೆ ಊರ ಹೊರಗಿನ ಪೊದೆಗಳೇ ನಿತ್ಯ ಬಳಕೆಯ ಬಯಲು ಶೌಚಾಲಯಗಳು. ಮಲ-ಮೂತ್ರ ವಿಸರ್ಜನೆಗಳಿಗೆ ನೂರಾರು ವರ್ಷಗಳಿಂದ ಬಳಸಿದ ಜಾಗವನ್ನೇ ಬಳಸುತ್ತಿರುವ ಆ ಜನರಿಗೂ ಹಾಗೂ ಮತ್ತೆ ಮತ್ತೆ ಬರುವ ರೋಗಗಳಿಗೂ ಅಂಟಿದ ನಂಟು ಕಡಿಮೆಯಾಗಿಲ್ಲ. ಈಗೀಗ ಊರುಗಳು ಬೆಳೆಯುತ್ತಿವೆ. ಊರು ಬೆಳೆದಂತೆ ಊರ ಸುತ್ತಲ ಪೊದೆಗಳೂ ಮರೆಯಾಗಿವೆ. ಹಗಲು ಹೊತ್ತಿನಲ್ಲಿ ಮಲ-ಮೂತ್ರಗಳ ವಿಸರ್ಜನೆಗೆ ಹೋಗಬೇಕೆಂದರೆ ಅಲ್ಲಿನ ಹೆಣ್ಣುಮಕ್ಕಳ ಪಾಡು ಹೇಳತೀರದು. ಅವರಿಗೆ ಮರೆ ಬೇಕು. ಗೌಪ್ಯತೆ ಬೇಕು. ಅದಕ್ಕಾಗಿ ಅವರು ಕತ್ತಲಿಗಾಗಿ ಕಾಯಲೇಬೇಕು. ಆದ್ದರಿಂದಲೇ ಬೆಳಕು ಹರಿಯುವ ಮುನ್ನ, ಸಂಜೆಯಾದ ನಂತರ ಹಳ್ಳಿಗಳ ರಸ್ತೆ ಬದಿಗಳಲ್ಲಿ ಮಲ ವಿಸರ್ಜನೆಗೆ ಕುಳಿತ ಮಹಿಳೆಯರ ಸಾಲು ಸಾಲು ದೃಶ್ಯಗಳು ಗ್ರಾಮೀಣ ಭಾರತದಲ್ಲಿ ಸರ್ವೇ ಸಾಮಾನ್ಯವಾಗಿದೆ. ಪೋಲಿ-ಪೋಕರಿಗಳ ಕಾಟ, ಕಳ್ಳ-ಕಾಕರ ಕಾಟ, ಕತ್ತಲಿನ ಭಯ, ಹುಳ-ಹುಪ್ಪಟಗಳ ಭಯ ಅವರಿಗೆ ತಪ್ಪಿದ್ದಲ್ಲ. ಇಷ್ಟಾದರೂ ಅವರು ಶೌಚಾಲಯ ನಿರ್ಮಿಸಿಕೊಂಡು ಬಳಕೆ ಮಾಡುವ ಬಗ್ಗೆ ಮನಸ್ಸು ಮಾಡುತ್ತಿಲ್ಲ. ಶೌಚಾಲಯವಿಲ್ಲದೆ ಬಯಲು ಶೌಚಾಲಯಕ್ಕೆ ಹೋಗುವುದರಿಂದ ಎನೇಲ್ಲ ದುಷ್ಪರಿಣಾಮಗಳು ಉಂಟಾಗುತ್ತವೆ. ಎಂದು ಜನರಲ್ಲಿ ಜಾಗೃತಿಯನ್ನು ಮೂಡಿಸುವುದು. ಶೌಚಾಲಯ ಬಳಕೆ ಹಾಗೂ ಸ್ವಚ್ಛತೆಯ ಅಭ್ಯಾಸಗಳ ಕುರಿತು ಜಾಗತಿಕ ಮಟ್ಟದಲ್ಲಿ ಉತ್ತೇಜನ ನೀಡುವ ಮಹತ್ವದ ಉದ್ದೇಶದೊಂದಿಗೆ ಈ ದಿನವನ್ನು ಆಚರಿಸಲಾಗುತ್ತಿದೆ. 2013ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ನ.19 ಅನ್ನು ವಿಶ್ವ ಶೌಚಾಲಯ ದಿನ ಎಂದು ಅಧಿಕೃತವಾಗಿ ಘೋಷಿಸಿದೆ. ಶೌಚಾಲಯ ನಿರ್ಮಾಣ, ಬಳಕೆ ಹಾಗೂ ಸ್ವಚ್ಛತೆಯ ಅಭ್ಯಾಸಗಳನ್ನು ಉತ್ತೇಜಿಸುವ ಇಂಥ ಕಾರ್ಯಕ್ರಮಗಳು ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವುದು ಅತ್ಯಂತ ಅವಶ್ಯಕವೂ ಹಾಗೂ ಔಚಿತ್ಯಪೂರ್ಣವೂ ಅಗಿದೆ.

ಉಪಸಂಹಾರ

ಶೌಚಾಲಯಗಳನ್ನು ನಿರ್ಮಿಸುವುದನ್ನೇ ಸ್ವಚ್ಚತೆ ಎಂದು ಕರೆಯಲಾಗುತ್ತದೆ. ಶುಚಿತ್ವವಿದ್ದಲ್ಲಿ ದೈವತ್ವವಿದೆ ಎಂಬುದಾಗಿ ಶತಮಾನದ ಹಿಂದಯೇ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಹೇಳಿದ್ದಾರೆ. ಹಾಗಾಗಿ ನಮ್ಮ ಪರಿಸರದಲ್ಲಿ ಸ್ವಚ್ಛತೆಯನ್ನು ಶೌಚಾಲಯಗಳನ್ನು ಪ್ರತಿ ಮನೆಗೂ ನಿರ್ಮಿಸುವುದರ ಮೂಲಕ ಸ್ವಚ್ಚತೆಯನ್ನು ಕಾಪಾಡೋಣ. ಹಾಗೆ ಬಯಲು ಶೌಚಾಲಯ ಮುಕ್ತವನ್ನಾಗಿಸೋಣ.

FAQ

ವಿಶ್ವ ಶೌಚಾಲಯ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?

ನವೆಂಬರ್ 19 ರಂದು ಆಚರಿಸುತ್ತಾರೆ.

ಯಾವ ಅಭಿಯಾನದಡಿ ಶೌಚಾಲಯದ ಬಗ್ಗೆ ಅರಿವನ್ನು ಮೂಡಿಸುತ್ತದೆ ?

ಸ್ವಚ್ಚ ಭಾರತ್‌ ಅಭಿಯಾನ

ಇತರೆ ಪ್ರಬಂಧಗಳು:

ಕ್ಯಾನ್ಸರ್ ದಿನಾಚರಣೆ ಬಗ್ಗೆ ಪ್ರಬಂಧ

ಸ್ವಚ್ಚ ಭಾರತ ಅಭಿಯಾನ

Leave a Comment