ಮೂಢನಂಬಿಕೆಯ ಬಗ್ಗೆ ಪ್ರಬಂಧ | Mudanambike Essay in Kannada

ಮೂಢನಂಬಿಕೆಯ ಬಗ್ಗೆ ಪ್ರಬಂಧ, Mudanambike Essay prabandha superstitions in kannada

ಮೂಢನಂಬಿಕೆಯ ಬಗ್ಗೆ ಪ್ರಬಂಧ

Mudanambike Essay in Kannada
ಮೂಢನಂಬಿಕೆಯ ಬಗ್ಗೆ ಪ್ರಬಂಧ | Mudanambike Essay in Kannada

ಈ ಲೇಖನಿಯಲ್ಲಿ ಮೂಢನಂಬಿಕೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ತಿಳಿಸಲಾಗಿದೆ.

ಪಿಠೀಕೆ

ಮಾನವನು ಸಂಘ ಜೀವಿ ಹಾಗಾಗಿ ಸಮಾಜದಲ್ಲಿ ವಾಸಿಸುವಾಗ ಕೆಲವು ನಂಬಿಕೆ ಗಳನ್ನು ಇಟ್ಟುಕೊಂಡಿರುತ್ತಾನೆ. ಅದೇ ರೀತಿ ಕೆಲವು ಮೂಢನಂಬಿಕೆಗಳನ್ನು ಕೆಲವೊಂದು ಸಾರಿ ತನಗೆ ಗೊತ್ತಿಲ್ಲದೆ ಅನುಸರಿಸುತ್ತಿರುತ್ತಾನೆ. ‘ಮೂಢನಂಬಿಕೆ’ ಎನ್ನುವುದು ಒಂದು ಕುರುಡು ನಂಬಿಕೆಯಾಗಿದ್ದು, ಪ್ರಕೃತಿಯ ನಿಯಮಗಳಿಗೆ ಅಥವಾ ಬ್ರಹ್ಮಾಂಡದ ವೈಜ್ಞಾನಿಕ ತಿಳುವಳಿಕೆಗೆ ಅನುಗುಣವಾಗಿಲ್ಲದ ಶಕ್ತಿಗಳು ಅಥವಾ ಘಟಕಗಳ ಅಸ್ತಿತ್ವದ ನಂಬಿಕೆ. ಇದು ಮಾನವನ ಅಜ್ಞಾನ ಮತ್ತು ವೈಜ್ಞಾನಿಕ ಜ್ಞಾನದ ಕೊರತೆಯಿಂದ ಮೂಢನಂಬಿಕೆಗಳನ್ನು ಹೆಚ್ಚಾಗಿ ನಂಬುತ್ತಿರುವುದು. ಚಾಲ್ತಿಯಲ್ಲಿರುವ ಧರ್ಮವು ಆಪಾದಿತ ಮೂಢನಂಬಿಕೆಗಳನ್ನು ಹೊಂದಿದೆಯೇ ಎಂಬುದನ್ನು ಲೆಕ್ಕಿಸದೆ ಸಮಾಜದ ಬಹುಪಾಲು ಜನರು ಆಚರಿಸದ ಧರ್ಮವನ್ನು ಉಲ್ಲೇಖಿಸಲು ‘ಮೂಢನಂಬಿಕೆ’ ಪದವನ್ನು ಹೆಚ್ಚಾಗಿ ಬಳಸಲಾಗುತ್ತದೆ. ಯಾವುದನ್ನಾದರೂ ಮೂಢನಂಬಿಕೆ ಎಂದು ಗುರುತಿಸುವುದು ಸಾಮಾನ್ಯವಾಗಿ ಕ್ಷುಲ್ಲಕವಾಗಿದೆ. ಸಾಮಾನ್ಯ ಭಾಷೆಯಲ್ಲಿ ಉಲ್ಲೇಖಿಸಲಾದ ಐಟಂಗಳನ್ನು ಸಾಮಾನ್ಯವಾಗಿ ಜಾನಪದದಲ್ಲಿ ಜಾನಪದ ನಂಬಿಕೆ ಎಂದು ಕರೆಯಲಾಗುತ್ತದೆ.

ವಿಷಯ ವಿವರಣೆ

ವೈಜ್ಞಾನಿಕವಲ್ಲದ ಕೇವಲ ನಂಬಿಕೆ ಮಾತ್ರದಿಂದಲೇ ಅನುಸರಿಸುವ ಕೆಲವು ಆಚರಣೆಗಳನ್ನು ಮೂಢನಂಬಿಕೆಗಳೆಂದು ಕರೆಯಬಹುದು. ನಮ್ಮ ಭಾರತ ದೇಶವು 21 ನೇ ಶತಮಾನದ ನಂತರವೂ ಮೂಢನಂಬಿಕೆಯನ್ನು ನಂಬುತ್ತದೆ. ಈ ಮೂಢನಂಬಿಕೆಯನ್ನು ಎಲ್ಲಾ ದೇಶದಲ್ಲೂ, ಎಲ್ಲಾ ಜನಾಂಗದಲ್ಲೂಕಾಣಬಹುದು. ಇಂದಿಗೂ ನಮ್ಮ ಸಮಾಜದಲ್ಲಿ ಅನೇಕ ಜನರು ಮೂಢನಂಬಿಕೆಯನ್ನು ನಂಬುತ್ತಾರೆ. ಬೆಕ್ಕು ಅಡ್ಡ ಬಂದಾಗ ನಿಲ್ಲಿಸುವುದು, ಮನೆಯ ಮಾಳಿಗೆಯ ಮೇಲೆ ಗೂಬೆ ಕೂರುವುದು ಅಶುಭವೆಂದು ಪರಿಗಣಿಸುವುದು, ಎಡಗಣ್ಣು ಬಡಿದರೆ ಅಶುಭವೆಂದು ಪರಿಗಣಿಸುವುದು ಹೀಗೆ ಹಲವಾರು ಘಟನೆಗಳು ಇಂದಿಗೂ ನಮ್ಮ ನಡುವೆ ಇವೆ. ಹೆಚ್ಚಿನ ಮಹಿಳೆಯರು ಪುತ್ರರು ಮತ್ತು ಮಕ್ಕಳನ್ನು ಪಡೆಯಲು ಬಾಬಾನನ್ನು ಪ್ರದಕ್ಷಿಣೆ ಮಾಡುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಬಾಬಾ ಸಾಧು ಅಮಾಯಕ ಮಹಿಳೆಯರಿಂದ ದೊಡ್ಡ ಮೊತ್ತವನ್ನು ಸಂಗ್ರಹಿಸುತ್ತಾರೆ.

ಮೂಢನಂಬಿಕೆಗಳಿಗೆ ಉದಾಹರಣೆಗಳು

  • ಬೆಕ್ಕು ಅಡ್ಡ ಬಂದಾಗ ಅಪಶಕುನ ಎಂದು ಭಾವಿಸುವುದು.
  • ಒಳ್ಳೆ ಕೆಲಸಕ್ಕೆ ಅಥವಾ ಹೊರಗೆ ಹೋಗುವಾಗ ಖಾಲಿ ಕೊಡವನ್ನು ತರುವುದು ಅಪಶಕುನವೆಂದು ಹೇಳುವುದು.
  • ಮನೆ ಮೇಲೆ ಗೂಬೆ ಕೂರುವುದು ಅಪಶಕುನವೆನ್ನುವುದು.
  • ಎಡಗಣ್ಣು ಬಡಿದರೆ ಕೆಡಕಾಗುವುದು ಎಂಬ ಮೂಡನಂಬಿಕೆ.
  • ಭವಿಷ್ಯ ವಾಣಿ ಯನ್ನು ದಿನನಿತ್ಯ ತಿಳಿದುಕೊಂಡು ಅದರಂತೆ ನಡೆಯುವುದು.
  • ಮಾಟಿ – ಮಂತ್ರಗಳನ್ನು ಮಾಡುವುದು.

ಮೂಢನಂಬಿಕೆಗಳಿಂದ ಆಗುತ್ತಿರುವ ದುಷ್ಪರಿಣಾಮಗಳು

  • ವ್ಯಕ್ತಿಯು ಎಷ್ಟು ಮೂಢನಂಬಿಕೆಗಳನ್ನು ಅವಲಂಬಿಸಿದ್ದಾನೆಂದರೆ ಬಾಬಾನ ಸೂಚನೆಗಳ ಪ್ರಕಾರ, ದಿನ ಭವಿಷ್ಯವಾಣಿ ಪ್ರಕಾರಗಳ ಮೂಲಕ ಜೀವನವನ್ನು ನಡೆಸುತ್ತಿರುತ್ತಾರೆ.
  • ಈ ಮೂಢನಂಬಿಕೆಗಳಿಂದ ಮಾಟ -ಮಂತ್ರಗಳು ಹೆಚ್ಚು ಅವಲಂಬಿತರಾಗಿದ್ದಾರೆ.
  • ಕೆಲವೊಂದು ಸಾರಿ ಈ ಮೂಢನಂಬಿಕೆಗಳಿಂದ ಮಕ್ಕಳನ್ನ, ಪ್ರಾಣೆಗಳನ್ನ ಬಲಿ ಕೊಡುತ್ತಾರೆ.
  • ಹಾಗೆ ಇದರಿಂದ ಸ್ತ್ರೀಯರು ಹೆಚ್ಚು ಶೋಷಣೆಗೆ ಒಳಗಾಗುತ್ತಿದ್ದಾರೆ.

ಉಪಸಂಹಾರ

ಇದು ಅಜ್ಞಾನ ಮತ್ತು ಭಯದ ವಾತವರಣವನ್ನು ಸೃಷ್ಠಿಸುತ್ತದೆ. ಹಾಗೆ ಇದು ಕತ್ತಲೆಯ ಜಗತ್ತಾಗಿದೆ. ವಿಜ್ಞಾನ ಮತ್ತುಅದರ ಪರಿಶೋಧನೆಯಿಂದ ಮೂಢನಂಬಿಕೆಗಳ ಬಗ್ಗೆ ಸಮಾಜಕ್ಕೆ ಸಾಕಷ್ಟು ಅರಿವನ್ನು ಮೂಡಿಸುವುದರ ಮೂಲಕ ಈ ಮೂಢನಂಬಿಕೆಯನ್ನು ಹೋಗಲಾಡಿಸುವುದು ಅಗತ್ಯವಾಗಿದೆ. ಈ ಮೂಢನಂಬಿಕೆಯಿಂದ ಆಗುವಂತ ಅನೇಕ ಶೋಷಣೆಗಳನ್ನುತಪ್ಪಿಸಬೇಕು.

FAQ

ಮೂಢನಂಬಿಕೆಗಳಿಗೆ ಒಂದು ಉದಾಹರಣೆಯನ್ನು ನೀಡಿ ?

ಬೆಕ್ಕು ಅಡ್ಡ ಬಂದಾಗ ಅಪಶಕುನ ಎಂದು ಭಾವಿಸುವುದು.

ಮೂಢನಂಬಿಕೆಗಳಿಂದ ಆಗುತ್ತಿರುವ ಒಂದು ದುಷ್ಪರಿಣಾಮವನ್ನು ತಿಳಿಸಿ ?

ಮೂಢನಂಬಿಕೆಗಳಿಂದ ಮಕ್ಕಳನ್ನ, ಪ್ರಾಣೆಗಳನ್ನ ಬಲಿ ಕೊಡುತ್ತಾರೆ.

ಇತರೆ ಪ್ರಬಂಧಗಳು:

ಅತಿ ಆಸೆ ಗತಿಗೇಡು ಗಾದೆಯ ಪ್ರಬಂಧ

ದೂರದರ್ಶನದ ಬಗ್ಗೆ ಪ್ರಬಂಧ

Leave your vote

Leave a Comment

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ