ರಾಷ್ಟ್ರೀಯ ಶಿಕ್ಷಣ ದಿನಾಚರಣೆ ಬಗ್ಗೆ ಪ್ರಬಂಧ‌ | Essay on National Education Day in Kannada

ರಾಷ್ಟ್ರೀಯ ಶಿಕ್ಷಣ ದಿನಾಚರಣೆ ಬಗ್ಗೆ ಪ್ರಬಂಧ‌ Essay on National Education Day rashtriya shikshana dina prabandha in kannada

ರಾಷ್ಟ್ರೀಯ ಶಿಕ್ಷಣ ದಿನಾಚರಣೆ ಬಗ್ಗೆ ಪ್ರಬಂಧ‌

Essay on National Education Day in Kannada
ರಾಷ್ಟ್ರೀಯ ಶಿಕ್ಷಣ ದಿನಾಚರಣೆ ಬಗ್ಗೆ ಪ್ರಬಂಧ‌|Essay on National Education Day

ಈ ಲೇಖನಿಯಲ್ಲಿ ರಾಷ್ಟ್ರೀಯ ಶಿಕ್ಷಣ ದಿನಾಚರಣೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಪೀಠಿಕೆ

“ಖಡ್ಗಕ್ಕಿಂತ ಲೇಖನಿ ಹರಿತ” ಇದು ಶಿಕ್ಷಣಕ್ಕಿರುವ ತಾಕತ್ತು. ಹಣ ಇದ್ದವನು ಕೆಲವನ್ನು ಮಾತ್ರ ಗೆಲ್ಲಬಲ್ಲ, ಶಿಕ್ಷಣ ಇದ್ದವನು ಜಗತ್ತನ್ನೇ ಗೆಲ್ಲಬಲ್ಲ. ಇದಕ್ಕೆ ಸಾಕ್ಷಿಯಾಗಿ ದೇಶದ ಮಹಾನ್ ನಾಯಕರು ಮಾಡಿರುವ ಸಾಧನೆಗಳ ಪಟ್ಟಿ ತುಂಬಾ ಉದ್ದವಿದೆ. ಈ ಜಗತ್ತಿನಲ್ಲಿ ಶಿಕ್ಷಣ, ವಿದ್ಯೆಗೆ ಇರುವ ಮಾನ್ಯತೆ ಯಾವುದೇ ಭೌತಿಕ ವಿಷಯಗಳಿಗೆ ಶಾಶ್ವತವಾಗಿ ಸಿಗಲು ಸಾಧ್ಯವೇ ಇಲ್ಲ. ಶಿಕ್ಷಣದ ಪ್ರಾಮುಖ್ಯತೆ ಬಗ್ಗೆ ಇಷ್ಟೆಲ್ಲಾ ಪೀಠಿಕೆ ಏಕೆ ಅಂದುಕೊಂಡಿದ್ದೀರಾ, ಕಾರಣ ಇಂದು ಶಿಕ್ಷಣದ ಮಹತ್ವ ಸಾರುವ “ರಾಷ್ಟ್ರೀಯ ಶಿಕ್ಷಣ ದಿನ”. ಭಾರತದ ಮೊದಲ ಶಿಕ್ಷಣ ಸಚಿವ ಅಬ್ದುಲ್ ಕಲಾಂ ಆಜಾದ್ ಅವರ ಜನ್ಮದಿನದ ನೆನಪಿಗಾಗಿ ಪ್ರತಿ ವರ್ಷ ನವೆಂಬರ್ 11 ರಂದು ರಾಷ್ಟ್ರೀಯ ಶಿಕ್ಷಣ ದಿನ ಅಥವಾ ರಾಷ್ಟ್ರೀಯ ಶಿಕ್ಷಾ ದಿವಸ್ ಎಂದು ಆಚರಿಸಲಾಗುತ್ತದೆ.

ವಿಷಯ ವಿವರಣೆ

ರಾಷ್ಟ್ರೀಯ ಶಿಕ್ಷಣ ದಿನದ ಇತಿಹಾಸ

ಸೆಪ್ಟೆಂಬರ್ 11/ 2008 ರಂದು, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (HRD) ನವೆಂಬರ್ 11 ಅನ್ನು ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ ಆಚಸುವುದಾಗಿ ಘೋಷಿಸಿತು. ಈ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಮೌಲಾನಾ ಅಬ್ದುಲ್ ಕಲಾಂ ಆಜಾದ್ ಅವರ ಕೊಡುಗೆಯನ್ನು ಸ್ಮರಿಸುವ ಮತ್ತು ಮಹಾನ್ ವ್ಯಕ್ತಿಯ ಜನ್ಮದಿನವನ್ನು ಆಚರಿಸಲಾಗುತ್ತದೆ. 2008 ರಿಂದ ಭಾರತದಲ್ಲಿ ಪ್ರತಿ ವರ್ಷ ರಾಷ್ಟ್ರೀಯ ಶಿಕ್ಷಣ ದಿನವನ್ನು ರಜಾದಿನವೆಂದು ಘೋಷಿಸಿದೆ. ಮತ್ತು ಆಚರಿಸಲಾಗುತ್ತದೆ. ಶಾಲೆಗಳು ದೇಶದ ಭವಿಷ್ಯದ ಪ್ರಜೆಗಳನ್ನು ಉತ್ಪಾದಿಸುವ ಪ್ರಯೋಗಾಲಯಗಳು ಎಂದು ಮೌಲಾನಾ ಆಜಾದ್ ಒಮ್ಮೆ ಹೇಳಿದರು. ಸೆಂಟ್ರಲ್ ಅಡ್ವೈಸರಿ ಬೋರ್ಡ್ ಆಫ್ ಎಜುಕೇಶನ್ (ಸಿಎಬಿಇ) ಯ ಮೊದಲ ಸಭೆಯನ್ನುದ್ದೇಶಿಸಿ ಮೌಲಾನಾ ಆಜಾದ್ ಅವರು ತಮ್ಮ ಭಾಷಣದಲ್ಲಿ ಹೀಗೆ ಹೇಳಿದರು “ಯಾವುದೇ ವ್ಯವಸ್ಥೆಯ ಪ್ರಾಥಮಿಕ ಗುರಿಯು ತಪ್ಪುದಾರಿಗೆಳೆಯಲಾಗದ ಸಮತೋಲಿತ ಮನಸ್ಸನ್ನು ಸೃಷ್ಟಿಸುವುದು.” ಅಬುಲ್ ಕಲಾಂ ಆಜಾದ್ ಅವರ ಕೊಡುಗೆಗಾಗಿ ರಾಷ್ಟ್ರದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನವನ್ನು ಪಡೆದರು.

ಮೌಲಾನಾ ಅಬ್ದುಲ್ ಕಲಾಂ ಅಜಾದ್

ಆಜಾದ್ ಅವರ ಸಂಪೂರ್ಣ ಹೆಸರು – ಮೌಲಾನಾ ಸಯ್ಯಿದ್ ಅಬುಲ್ ಕಲಾಂ ಗುಲಾಮ್ ಮುಹಿಯುದ್ದೀನ್ ಅಹ್ಮದ್ ಬಿನ್ ಖೈರುದ್ದೀನ್ ಅಲ್ ಹುಸೇನಿ ಆಜಾದ್. 2. ಆರಂಭದಲ್ಲಿ ತಂದೆಯಿಂದಲೇ ಶಿಕ್ಷಣ ಪಡೆದ ಆಜಾದ್, ನಂತರ ಅಲ್ಲಿನ ಪ್ರಸಿದ್ಧ ಶಿಕ್ಷಕರಿಂದ ಶಿಕ್ಷಣವನ್ನು ಪಡೆದರು. 3. ಆಜಾದ್ ಅವರು ಅರೇಬಿಕ್ ಮತ್ತು ಪರ್ಷಿಯನ್ ಭಾಷೆಯನ್ನು ಸಹ ಕಲಿತಿದ್ದರು. 4. ತತ್ವಶಾಸ್ತ್ರ, ಗಣಿತ ಮತ್ತು ಬೀಜಗಣಿತವನ್ನು ಪ್ರಮುಖ ವಿಷಯವಾಗಿ ಅಧ್ಯಯನ ಮಾಡಿದರು. ನಂತರ ಸ್ವತಃ ಅಧ್ಯಯನ ಮಾಡುವ ಮೂಲಕ ಇಂಗ್ಲಿಷ್ ಭಾಷೆ, ವಿಶ್ವದ ಇತಿಹಾಸ ಮತ್ತು ರಾಜಕೀಯವನ್ನು ಅರಿತರು. 1912ರಲ್ಲಿ ಮುಸ್ಲಿಮರಲ್ಲಿ ದೇಶಭಕ್ತಿಯ ಭಾವನೆಯನ್ನು ಹೆಚ್ಚಿಸಲು ‘ಅಲ್-ಹಿಲಾಲ್’ ಎಂಬ ಉರ್ದು ವಾರಪತ್ರಿಕೆಯನ್ನು ಪ್ರಾರಂಭಿಸಿದರು. 8. ಮೌಲಾನಾ ಅಬುಲ್ ಕಲಾಂ ಆಜಾದ್ ಅವರು ಪಂಡಿತ್ ಜವಾಹರಲಾಲ್ ನೆಹರೂ ಅವರ ಸಂಪುಟದಲ್ಲಿ 1947ರಿಂದ 1958ರವರೆಗೆ ಪ್ರಥಮ ಶಿಕ್ಷಣ ಸಚಿವರಾಗಿ ದೇಶಕ್ಕೆ ಸೇವೆ ಸಲ್ಲಿಸಿದರು. 22ರ ಫೆಬ್ರವರಿ 1958ರಂದು ಹೃದಯಾಘಾತದಿಂದ

ರಾಷ್ಟ್ರೀಯ ಶಿಕ್ಷಣ ದಿನದ ಮಹತ್ವ

ಸ್ವತಂತ್ರ ಭಾರತದ ಮೊದಲ ಶಿಕ್ಷಣ ಸಚಿವ ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಜನ್ಮದಿನದ ಪ್ರಯುಕ್ತ ಇಂದು “ರಾಷ್ಟ್ರೀಯ ಶಿಕ್ಷಣ ದಿನವಾಗಿ” ಆಚರಣೆ ಮಾಡಲಾಗುತ್ತದೆ. ದೇಶದ ಶಿಕ್ಷಣ ಕ್ಷೇತ್ರಕ್ಕೆ ಆಜಾದ್ ಅವರು ನೀಡಿದ ಕೊಡುಗೆಯ ಸ್ಮರಣಾರ್ಥ 2008 ರಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ನವೆಂಬರ್ 11 ಅನ್ನು ರಾಷ್ಟ್ರೀಯ ಶಿಕ್ಷಣ ದಿನವೆಂದು ಆಚರಿಸಲು ಘೋಷಿಸಿತು. “ಮಹಿಳೆಯರ ಶಿಕ್ಷಣ”, “ಕಡ್ಡಾಯ ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣ”, “ವೃತ್ತಿಪರ ಶಿಕ್ಷಣದ ಪ್ರಾಮುಖ್ಯತೆ”, “14 ವರ್ಷದವರೆಗೆ ಎಲ್ಲಾ ಮಕ್ಕಳಿಗೆ ಉಚಿತ ಮತ್ತು ನ್ಯಾಯಯುತ ಶಿಕ್ಷಣ” ಮುಂತಾದವುಗಳನ್ನು ಈ ದಿನದಂದು ಪ್ರಮುಖವಾಗಿ ಒತ್ತಿಹೇಳಲಾಗುತ್ತದೆ. ತಾಂತ್ರಿಕ ಶಿಕ್ಷಣವನ್ನು ಜನಸಾಮಾನ್ಯರಿಗೆ ಕೈಗೆಟಕುವಂತೆ ಮಾಡುವುದು. ಪ್ರಸ್ತುತ ಸರ್ಕಾರಗಳು ದೇಶಕ್ಕೆ ಶಿಕ್ಷಣವನ್ನು ನೀಡುವಲ್ಲಿ ಆಧುನಿಕ ವಿಜ್ಞಾನ ಮತ್ತು ಸಮಕಾಲೀನ ಬೋಧನಾ ವಿಧಾನಗಳನ್ನು ಕಲಿಸುವ ಮೌಲಾನಾ ಆಜಾದ್ ಅವರ ದೂರದೃಷ್ಟಿಯ ಆಲೋಚನೆಗಳಾಗಿದ್ದವು.

ಉಪಸಂಹಾರ

ಒಂದು ಮಗುವಿನ ಸರ್ವತೋಮುಖ ಅಭಿವೃದ್ದಿಯೇ ಶಿಕ್ಷಣ. ಪ್ರತಿಯೊಬ್ಬರು ಕೂಡ ಶಿಕ್ಷಣವನ್ನು ಪಡೆದುಕೊಳ್ಳುವುದು ಸೂಕ್ತ. ಯಾರಿಂದಲೂ ಯಾರೂ ಕದಿಯಾಲಾಗದ್ದು ವಿಧ್ಯೆ. ಶಿಕ್ಷಣ ವಿಲ್ಲದೇ ದೇಶವಿಲ್ಲ.

FAQ

ರಾಷ್ಟ್ರೀಯ ಶಿಕ್ಷಣ ದಿನಾಚರಣೆಯನ್ನು ಯಾವಾಗ ಆಚರಿಸಲಾಗುತ್ತದೆ ?

ನವೆಂಬರ್‌ ೧೧

ರಾಷ್ಟ್ರೀಯ ಶಿಕ್ಷಣ ದಿನಾಚರಣೆಯನ್ನು ಯಾರ ಜನ್ಮ ದಿನಾಚರಣೆಯ ದಿನದಂದು ಆಚರಿಸಲಾಗುತ್ತದೆ ?

ಮೌಲಾನಾ ಅಬ್ದುಲ್ ಕಲಾಂ ಅಜಾದ್

ಇತರೆ ಪ್ರಬಂಧಗಳು:

ರಾಷ್ಟ್ರೀಯ ಸಂವಿಧಾನ ದಿನದ ಬಗ್ಗೆ ಪ್ರಬಂಧ 

ಗ್ರಂಥಾಲಯದ ಮಹತ್ವ ಪ್ರಬಂಧ

Leave a Comment