ಗ್ರಂಥಾಲಯದ ಮಹತ್ವ ಪ್ರಬಂಧ | Importance of Library Essay in Kannada

ಗ್ರಂಥಾಲಯದ ಮಹತ್ವ ಪ್ರಬಂಧ Importance of Library Essay prabandha granthalaya mahatva in Kannada

ಗ್ರಂಥಾಲಯದ ಮಹತ್ವ ಪ್ರಬಂಧ

Importance of Library Essay in Kannada

ಈ ಲೇಖನಿಯಲ್ಲಿ ಗ್ರಂಥಾಲಯದ ಮಹತ್ವದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಪೀಠಿಕೆ

ವ್ಯಕ್ತಿಯ ಜ್ಞಾನವನ್ನು ವಿಸ್ತರಿಸಲು ಗ್ರಂಥಾಲಯ ಬಹಳ ಉಪಯುಕ್ತ ಮಾಧ್ಯಮವಾಗಿದೆ. ಹೆಚ್ಚಿನ ವರ್ಗದ ವ್ಯಕ್ತಿಗಳಿಗೆ ಆಸಕ್ತಿ ಅಥವಾ ಅಗತ್ಯವಿರುವ ಎಲ್ಲಾ ಪುಸ್ತಕಗಳನ್ನು ಖರೀದಿಸಲು ಸಾಧ್ಯವಾಗುವುದಿಲ್ಲ ಮತ್ತು ಹಣದ ಅನುಪಸ್ಥಿತಿಯಲ್ಲಿ ಅವನು ಜ್ಞಾನ ಮತ್ತು ಶಿಕ್ಷಣದಿಂದ ವಂಚಿತನಾಗಿರುತ್ತಾನೆ. ಆದರೆ ಗ್ರಂಥಾಲಯದ ಮೂಲಕ ಎಲ್ಲಾ ರೀತಿಯ ಪುಸ್ತಕಗಳು ಮತ್ತು ಅವುಗಳ ಜ್ಞಾನವನ್ನು ಸುಲಭವಾಗಿ ಬಳಸಿಕೊಳ್ಳಬಹುದು. ಪುಸ್ತಕಗಳು ಮಾನವರ ಉತ್ತಮ ಸ್ನೇಹಿತರು ಎಂದು ಹೇಳಲಾಗುತ್ತದೆ. ಒಬ್ಬ ವ್ಯಕ್ತಿಯು ತನ್ನ ಸ್ನೇಹಿತನೊಂದಿಗೆ ಪ್ರತಿ ಕ್ಷಣದಲ್ಲಿ, ಪ್ರತಿ ಸಮಸ್ಯೆಯಲ್ಲಿ,ಸಹಕಾರಿಯಾಗುತ್ತಾನೆ. ಅದೇ ರೀತಿಯಲ್ಲಿ ಪುಸ್ತಕಗಳು ಮನುಷ್ಯನಿಗೆ ಪ್ರತಿಯೊಂದು ಕಷ್ಟಕರ ಪ್ರಶ್ನೆ, ಪರಿಸ್ಥಿತಿಯ ಪರಿಹಾರವನ್ನು ಪುಸ್ತಕಗಳಲ್ಲಿ ತೆರೆ ಮಾಡಲಾಗಿದೆ.

ವಿಷಯ ವಿವರಣೆ

ಲೈಬ್ರರಿಯನ್ನು ಕನ್ನಡದಲ್ಲಿ ಗ್ರಂಥಾಲಯ ಎಂದು ಕರೆಯಲಾಗುತ್ತದೆ. “ಪುಸ್ತಕ” + “ಆಲಯ” , ಆಲಯ ಎಂದರೆ “ಸ್ಥಳ”. ಅಂತೆಯೇ, ಗ್ರಂಥಾಲಯದ ಅರ್ಥ “ಪುಸ್ತಕಗಳ ಸ್ಥಳ”. ಗ್ರಂಥಾಲಯದಲ್ಲಿ ವಿವಿಧ ರೀತಿಯ ಪುಸ್ತಕಗಳ ಸಂಗ್ರಹವಿದೆ. ಇಲ್ಲಿ ಪ್ರತಿಯೊಬ್ಬ ವಯಸ್ಸಿನ ವ್ಯಕ್ತಿಗೂ ಅವರ ಆಸಕ್ತಿಗೆ ಅನುಗುಣವಾಗಿ ಪುಸ್ತಕಗಳು ಲಭ್ಯವಿವೆ.

ಗ್ರಂಥಾಲಯದ ಮಹತ್ವ

ಮಾನವನ ಜೀವನದಲ್ಲಿ ಪುಸ್ತಕಗಳು ಪ್ರಮುಖ ಪಾತ್ರ ವಹಿಸುತ್ತದೆ. ಜ್ಞಾನಾಭಿವೃದ್ದಿಗೆ ಮತ್ತು ಅಮೂಲ್ಯವಾದ ಸಮಯ ಸದುಪಯೋಗಕ್ಕೆ ಗ್ರಂಥಾಲಯಗಳು ಬಹಳ ಮುಖ್ಯ ಎನಿಸುತ್ತದೆ. ಗ್ರಂಥಾಲಯವು ಪೀಳಿಗೆಯಿಂದ ಪೀಳಿಗೆಗೆ ಜ್ಞಾನವನ್ನು ಹಂಚುವ ಉನ್ನತ ಕಾರ್ಯವನ್ನು ಮಾಡುತ್ತಿದೆ. ಪುಸ್ತಕಗಳು ಒಳ್ಳೆಯ ಗೆಳೆಯರಿದ್ದಂತೆ ಹಾಗೂ ಗುರು ವಿದ್ದಂತೆ, ಮಾನವನ ಮನಸ್ಸಿನ ವಿಕಾಸಕ್ಕೆ ಪುಸ್ತಕಗಳು ಅವಶ್ಯಕವಾಗಿದೆ. ಪ್ರತಿಯೊಂದು ವಿಷಯಗಳಿಗೆ ಸಂಬಂಧಪಟ್ಟಂತಹ ಪುಸ್ತಕಗಳು ಗ್ರಂಥಾಲಯ ದಲ್ಲಿ ದೊರೆಯುತ್ತದೆ. ಮಾಸಪತ್ರಿಕೆಗಳು, ವಾರಪತ್ರಿಕೆಗಳು, ದಿನಪತ್ರಿಕೆಗಳು ಸಿಗುತ್ತದೆ.ಪುಸ್ತಕ ಮನುಷ್ಯನ ಮಿತ್ರ, ಜ್ಞಾನವನ್ನು ನೀಡುವ ಕಾಮಧೇನು, ಮಾರ್ಗದರ್ಶಕ ಮಾಹಿತಿ ಪಡೆಯಲು ಪುಸ್ತಕ ಭಂಡಾರಗಳು ಬಹಳ ಮುಖ್ಯವಾಗಿದೆ. ಗ್ರಂಥಾಲಯಗಳಲ್ಲಿ ಬೇರೆ ಬೇರೆ ಭಾಷೆಯ ಪುಸ್ತಕಗಳು ದೊರೆಯುತ್ತದೆ. ಸಂಶೋಧಕರಿಗೆ, ಲೇಖಕರಿಗೆ, ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಹೀಗೆ ಎಲ್ಲಾ ವರ್ಗದ ಜನರಿಗೂ ಗ್ರಂಥಾಲಯಗಳು ಬೇಕು. ಗ್ರಂಥಾಲಯದಲ್ಲಿ ಬಡವ-ಶ್ರೀಮಂತ, ಚಿಕ್ಕವ-ದೊಡ್ಡವ , ಎಂಬ ಭೇದಭಾವ ಇಲ್ಲ. ಓದು ನಮ್ಮ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಿದೆ. ಎಲ್ಲಾ ಪುಸ್ತಕವನ್ನು ಹಣಕೊಟ್ಟು ಕೊಂಡುಕೊಳ್ಳುವುದು ಅಸಾಧ್ಯ. ಅದರೆ ಗ್ರಂಥಾಲಯ ಈ ಕೊರತೆಯನ್ನು ನೀಗಿಸುತ್ತದೆ.

ಗ್ರಂಥಾಲಯದಲ್ಲಿ ಪಾಲಿಸಬೇಕಾದ ಕೆಲವು ನಿಯಮಗಳು

ಗ್ರಂಥಾಲಯದಲ್ಲಿ ನಾವು ಪುಸ್ತಕವನ್ನು ಗಂಭೀರವಾಗಿ ಅಧ್ಯಯನ ಮಾಡಬೇಕು. ಮಾತನಾಡದೇ ನಿಶ್ಯಬ್ಧವಾಗಿರಬೇಕು. ಬೇರೆಯವರಿಗೆ ತೊಂದರೆಯಾಗದಂತೆ ವರ್ತಿಸಬೇಕು. ಇಷ್ಟಪಟ್ಟು ಓದಲು ಬರುವವರಿಗೆ ಜ್ಞಾನದ ಹೊಸ ಹೊಳಪನ್ನು ನೀಡುವ ಅಕ್ಷಯ ಭಂಡಾರಗಳಾಗಿವೆ. ಗ್ರಂಥಾಲಯ ಪುಸ್ತಕಗಳನ್ನು ಓದುವಾಗ ಹಾಳು ಮಾಡಬಾರದು, ಹಾಳೆ ಹಾರಿಯುವುದು, ಕೊಳಕುಮಾಡುವುದು ಇತ್ಯಾದಿ ಮಾಡಬಾರದು. ನಿಗದಿತ ಸಮಯಕ್ಕೆ ಸರಿಯಾಗಿ ಪುಸ್ತಕವನ್ನು ಹಿಂತಿರುಗಿಸಬೇಕು. ಇದರಿಂದ ಬೇರೆಯವರಗೆ ಅಗತ್ಯವನ್ನು ಪೂರೈಸಿದಂತಾಗುತ್ತದೆ.

ಉಪಸಂಹಾರ

ಜ್ಞಾನಿಗಳು ಪ್ರತಿಯೊಂದು ಮಾಹಿತಿಯನ್ನು ಪಡೆಯಲು ಗ್ರಂಥಾಲಯಕ್ಕೆ ಮೊರೆ ಹೋಗುವ ಸಂಪ್ರದಾಯವಿತ್ತು, ಈಗಲೂ ಇದೆ ಆದರೆ ಸ್ವರೂಪ ಬದಲಾಗಿದೆ. ಡಿಜಿಟಲ್ ಲೈಬ್ರರಿ, ಗೂಗಲ್ ಸಂಚರಿಸುವ ಗ್ರಂಥಾಲಯಗಳಾಗಿ ಮಾರ್ಪಟ್ಟಿವೆ. ಗ್ರಂಥಾಲಯ ಮತ್ತು ಅಕ್ಷರ ಸಂಸ್ಕಾರ ನಮ್ಮ ಬದುಕಿನ ದೊಡ್ಡ ಸಂಗಾತಿ. ಈ ಗ್ರಂಥಾಲಯದಿಂದ ನಾವು ಎಷ್ಟು ಸಾಧ್ಯವೋ ಅಷ್ಟು ಉಪಯೋಗವನ್ನು ನಾವು ಪಡೆದುಕೊಳ್ಳಬೇಕು.

FAQ

ಗ್ರಂಥಾಲಯದ ದಿನಾಚರಣೆಯನ್ನು ಯಾವಾಗ ಆಚರಿಸುತ್ತಾರೆ ?

ಅಗಸ್ಟ್‌ 12 ಗ್ರಂಥಾಲಯ ದಿನಾಚರಣೆ

ಗ್ರಂಥಾಲಯದ ಪಿತಾಮಹ ಯಾರು ?

S.R ರಂಗನಾಥ್‌ ಗ್ರಂಥಾಲಯ ಪಿತಾಮಹ.

ಗ್ರಂಥಾಲಯದ ನಿಯಮಗಳನ್ನು ತಿಳಿಸಿ ?

ಮಾತನಾಡದೇ ನಿಶ್ಯಬ್ಧವಾಗಿರಬೇಕು. ಬೇರೆಯವರಿಗೆ ತೊಂದರೆಯಾಗದಂತೆ ವರ್ತಿಸಬೇಕು. ಇಷ್ಟಪಟ್ಟು ಓದಲು ಬರುವವರಿಗೆ ಜ್ಞಾನದ ಹೊಸ ಹೊಳಪನ್ನು ನೀಡುವ ಅಕ್ಷಯ ಭಂಡಾರಗಳಾಗಿವೆ. ಗ್ರಂಥಾಲಯ ಪುಸ್ತಕಗಳನ್ನು ಓದುವಾಗ ಹಾಳು ಮಾಡಬಾರದು, ಹಾಳೆ ಹಾರಿಯುವುದು, ಕೊಳಕುಮಾಡುವುದು ಇತ್ಯಾದಿ ಮಾಡಬಾರದು.

ಇತರೆ ಪ್ರಬಂಧಗಳು:

ರಾಷ್ಟ್ರೀಯ ಮಕ್ಕಳ ದಿನಾಚರಣೆ ಬಗ್ಗೆ ಭಾಷಣ

ರಾಷ್ಟ್ರೀಯ ಏಕತಾ ದಿನಾಚರಣೆ ಬಗ್ಗೆ ಭಾಷಣ

Leave your vote

Leave a Comment

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ