ಮಕ್ಕಳ ದಿನಾಚರಣೆ ಪ್ರಬಂಧ | Children day Essay in Kannada

ಮಕ್ಕಳ ದಿನಾಚರಣೆ ಪ್ರಬಂಧ, Children day essay Prabhandha in kannada

ಮಕ್ಕಳ ದಿನಾಚರಣೆ ಪ್ರಬಂಧ

Children day essay in Kannada

ಈ ಲೇಖನಿಯಲ್ಲಿ ಮಕ್ಕಳ ದಿನಾಚರಣೆಯ ಬಗ್ಗೆ ಸಂಪೂರ್ಣವಾದ ಮಾಹಿತಿ ನಮ್ಮ Post ನಲ್ಲಿ ತಿಳಿಸಲಾಗಿದೆ.

Children day Essay in Kannada

ಪೀಠಿಕೆ

ಪಂಡಿತ್‌ ಜವಾಹರ್‌ ಲಾಲ್‌ ನೆಹರೂರವರ ಜನ್ಮ ದಿನದ ಅಂಗವಾಗಿ ಅಥವಾ ನೆನಪಿಗಾಗಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತದೆ. ನೆಹರೂರವರಿಗೆ ಮಕ್ಕಳೆಂದರೆ ತುಂಬಾ ಇಷ್ಟ ಪಡುತ್ತಿದ್ದರು. ಅವರ ಅಭಿಮಾನಿಗಳು ನೆಹರೂರವರ ಜನ್ಮ ದಿನವನ್ನು ಆಚರಿಸಲು ಕೇಳಿದಾಗ ಅವರು ʼನಾನು ಬಿದ್ದು ಹೋಗುವ ಮರ, ಮಕ್ಕಳು ಅರಳುವ ಹೂಗಳುʼ ನಾಳಿನ ಭವಿಷ್ಯಕ್ಕಾದ ರೂವಾರಿಗಳು, ಇಂದಿನ ಮಕ್ಕಳೇ ನಾಳೆಯ ಪ್ರಜೆಗಳು, ಕೂಡ ನೀವು ʼನನ್ನ ಜನ್ಮ ದಿನವನ್ನ ಆಚರಿಸುವ ಬದಲು ಮಕ್ಕಳ ದಿನವನ್ನ ಆಚರಿಸಿʼ ಎಂದು ನೆಹರು ಹೇಳಿದ್ದರು. ಅಂದಿನಿಂದ ನವೆಂಬರ್‌ ೧೪ ರಂದು ಮಕ್ಕಳ ದಿನವನ್ನಾಗಿ ಆಚರಿಸುವುದಾಗಿದೆ.

ವಿಷಯ ವಿವರಣೆ

ಪ್ರತಿ ವರ್ಷ ನವೆಂಬರ್‌ ೧೪ ರಂದು ಮಕ್ಕಳ ಹಕ್ಕುಗಳು ಮತ್ತು ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಲು ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತದೆ. ನವೆಂಬರ್ 14 ವಿಶೇಷವಾಗಿ ಮಕ್ಕಳಿಗಾಗಿ ಮೀಸಲಾದ ದಿನವಾಗಿದೆ. ಬಾಲ್ ದಿವಾಸ್ ಎಂದೂ ಕರೆಯಲ್ಪಡುವ ಮಕ್ಕಳ ದಿನವನ್ನು ನಮ್ಮ ದೇಶದಲ್ಲಿ ಪ್ರತಿ ವರ್ಷ ನವೆಂಬರ್ 14 ರಂದು ಆಚರಿಸಲಾಗುತ್ತದೆ. ಈ ದಿನವು ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಜನ್ಮದಿನವನ್ನು ಸಹ ನೆನಪಿಸುತ್ತದೆ. ಈ ದಿದಂದು ಮಕ್ಕಳಿಗೆ ಶಾಲಾ ಕಾಲೇಜುಗಳಲ್ಲಿ ಸಿಹಿಯನ್ನ ನೀಡಿ ಅನೇಕ ಸಾಂಸೃತಿಕ ಚಟುವಟಿಕೆಗಳನ್ನು ಆಯೋಜಿಸುವುದು ಅಂದರೆ ನಾಟಕ, ನೃತ್ಯ, ಸಂಗೀತ, ಭಾಷಣ ಸ್ಪರ್ಧೆ ಇನ್ನು ಮುಂತಾದ ಕಾರ್ಯ ಕ್ರಮಗಳನ್ನು ಆಯೋಜಿಸುವುದರಿಂದ ಮಕ್ಕಳಲ್ಲಿ ಒಳ್ಳೆಯ ಕ್ರೀಯಾಶೀಲತೆಯನ್ನ ಬೆಳೆಸಿದಂತಾಗುತ್ತದೆ.

ಭಾರತದಲ್ಲಿ ಮಕ್ಕಳ ದಿನವನ್ನು 1959 ರಿಂದ ಆಚರಿಸಲಾಗುತ್ತಿದೆ, ಆದರೆ ನಂತರ ಮಕ್ಕಳ ದಿನವನ್ನು ನವೆಂಬರ್ 20 ರಂದು ಮಾತ್ರ ಆಚರಿಸಲಾಗುತ್ತಿತ್ತು. ಆದರೆ ಜವಾಹರಲಾಲ್ ನೆಹರು ಅವರು ಮೇ 27, 1964 ರಂದು ನಿಧನರಾದ ನಂತರ ಅವರ ನೆನಪಿಗಾಗಿ ಅವರ ಜನ್ಮದಿನದಂದು ಅಂದರೆ ನವೆಂಬರ್ 14 ರಂದು ಭಾರತದಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.

ಮಕ್ಕಳ ದಿನಾಚರಣೆ ವಿಶೇಷ ದಿನವಾಗಿದ್ದು, ಮಕ್ಕಳ ಹಕ್ಕುಗಳು, ಆರೈಕೆ ಮತ್ತು ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಲು ಭಾರತದಾದ್ಯಂತ ಆಚರಿಸಲಾಗುತ್ತದೆ. ಇದನ್ನು ಪ್ರತಿವರ್ಷ ನವೆಂಬರ್ 14 ರಂದು ಭಾರತದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರಿಗೆ ಗೌರವವಾಗಿ ಆಚರಿಸಲಾಗುತ್ತದೆ, ಮಕ್ಕಳಲ್ಲಿ ಶಿಕ್ಷಣವನ್ನು ಪೂರೈಸಬೇಕೆಂದು ಸಲಹೆ ನೀಡಿದರು. ಇಂದು, ಭಾರತದಾದ್ಯಂತ ಮಕ್ಕಳಿಗಾಗಿ ಅನೇಕ ಶೈಕ್ಷಣಿಕ ಮತ್ತು ಪ್ರೇರಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.

ಮಕ್ಕಳ ಮತ್ತು ನೆಹರೂರವರ ಭಾಂಧವ್ಯ

ಭಾರತದ ಮೊದಲ ಪ್ರಧಾನ ಮಂತ್ರಿ ಇವರು ಮಕ್ಕಳನ್ನ ತುಂಬಾ ಇಷ್ಟ ಪಡುತ್ತಿದ್ದರು. ಮಕ್ಕಳನ್ನು ಪ್ರೀತಿಯಿಂದ ಕಾಣುತಿದ್ದರು. ಮಕ್ಕಳುʼ ಮೊಗ್ಗುಗಳಿದ್ದಂತೆ ʼಎಂದು ಹೇಳುತ್ತಿದ್ದರು. ಹಾಗೆ ಮಕ್ಕಳು ಕೂಡ ಇವರನ್ನು ತುಂಬಾ ಇಷ್ಟ ಪಡುತ್ತಿದ್ದರು. ಮಕ್ಕಳು ಇವರನ್ನು ಪ್ರೀತಿಯಿಂದ ಚಾಚಾ ಎಂದು ಕರೆಯುತ್ತದ್ದರು. ಮಕ್ಕಳ ದಿನಾಚರಣೆ ಎಂದರೆ ಮಕ್ಕಳಿಗೆ ಸಂತಸದ ದಿನವಾಗಿರಬೇಕು.

ಮಕ್ಕಳ ದಿನಾಚರಣೆಯ ಆಚರಣೆಗಳು

  • ಕೆಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವದರ ಮೂಲಕ ಮಕ್ಕಳನ್ನು ಸಂತೋಷ ಪಡಿಸುವುದು. ಈ ದಿದಂದು ಮಕ್ಕಳಿಗೆ ಶಾಲಾ ಕಾಲೇಜುಗಳಲ್ಲಿ ಸಿಹಿಯನ್ನ ನೀಡಿ ಅನೇಕ ಸಾಂಸೃತಿಕ ಚಟುವಟಿಕೆಗಳನ್ನು ಆಯೋಜಿಸುವುದು ಅಂದರೆ ನಾಟಕ, ನೃತ್ಯ, ಸಂಗೀತ, ಭಾಷಣ ಸ್ಪರ್ಧೆ ಇನ್ನು ಮುಂತಾದ ಕಾರ್ಯ ಕ್ರಮಗಳನ್ನು ಆಯೋಜಿಸುವುದರಿಂದ ಮಕ್ಕಳಲ್ಲಿ ಒಳ್ಳೆಯ ಕ್ರೀಯಾಶೀಲತೆಯನ್ನ ಬೆಳೆಸಿದಂತಾಗುತ್ತದೆ.
  • ಕ್ರೀಡೆ ಗಳನ್ನು ಆಯೋಜಿಸಿ ಬಹುಮಾನವನ್ನು ನೀಡುವುದ, ಇದರಿಂದ ಮಕ್ಕಳಿಗೆ ಉತ್ತೇಜನವನ್ನು ನೀಡಿದಂತಾಗುತ್ತದೆ.
  • ಮಕ್ಕಳಿಗೆ ಸಂಬಂದಿಸಿದಂತೆ ಹಲವಾರು ಹೊಸ ಹೊಸ ಯೋಜನೆಗಳನ್ನು ತರುವುದು.
  • ಮಕ್ಕಳ ಹಕ್ಕು ಗಳು ಮತ್ತು ಶಿಕ್ಷಣದ ಬಗ್ಗೆ ಜಾಗೃತಿಯನ್ನು ಮೂಡಿಸಲು ಮಕ್ಕಳ ದಿನಾಚರಣೆ ಯನ್ನು ಆಚರಿಸಲಾಗುತ್ತದೆ.

ಉಪಸಂಹಾರ

ಮಕ್ಕಳಲ್ಲಿ ಸಹೋದರತೆಯ ಮನೋಭಾವವನ್ನು ಬೆಳೆಸುವುದಕ್ಕೆ ಸಹಕಾರಿಯಾಗಿದೆ. ಮಕ್ಕಳ ದಿನಾಚರಣೆಯನ್ನು ಆಚರಿಸಿ, ಮಕ್ಕಳಿಗೆ ಪ್ರೇರಕವಾಗುವಂತ ಕೆಲವು ವಿಷಯಗಳನ್ನು ಕುರಿತು ಮಾತಾಡುವುದರಿಂದ ಮಕ್ಕಳು ಮಹಾನ್‌ ವ್ಯಕ್ತಿ ಗಳಾಗುವಲ್ಲಿ ಸಹಕಾರಿಯಾಗುತ್ತದೆ ಮಕ್ಕಳಿಗಾಗಿ ಒಂದು ದಿನವನ್ನು ಮಾಡಿದ್ದು ಒಂದು ರೀತಿಯ ಸಂತೋಷದ ವಿಷಯವಾಗಿದೆ.

FAQ

ಮಕ್ಕಳ ದಿನಾಚರಣೆಯನ್ನು ಯಾರ ಜನ್ಮದಿನದ ನೆನಪಿಗಾಗಿ ಆಚರಿಸಲಾಗುತ್ತದೆ ?

ಜವಾಹರ್‌ ಲಾಲ್‌ ನೆಹರೂ ರವರ ಜನ್ಮ ದಿನದ ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ .

ಮಕ್ಕಳ ದಿನಾಚರಣೆಯನ್ನು ಯಾವಾಗ ಆಚರಿಸಲಾಗುತ್ರತದೆ ?

ನವೆಂಬರ್‌ ೧೪ ರಂದು

ಇತರೆ ಪ್ರಬಂಧಗಳು:

ಗಾಂಧಿ ಜಯಂತಿಯ ಬಗ್ಗೆ ಪ್ರಬಂಧ

ರಾಷ್ಟ್ರೀಯ ಏಕತಾ ದಿನಾಚರಣೆ ಬಗ್ಗೆ ಭಾಷಣ

Leave a Comment