ಶಿಕ್ಷಕರ ದಿನಾಚರಣೆಯ ಬಗ್ಗೆ ಪ್ರಬಂಧ | Essay On Teachers Day in Kannada

ಶಿಕ್ಷಕರ ದಿನಾಚರಣೆಯ ಬಗ್ಗೆ ಪ್ರಬಂಧ, Essay On Teachers Day in Kannada, teachers day essay in kannada, teachers day prabandha in kannada

ಶಿಕ್ಷಕರ ದಿನಾಚರಣೆಯ ಬಗ್ಗೆ ಪ್ರಬಂಧ

Essay On Teachers Day in Kannada
ಶಿಕ್ಷಕರ ದಿನಾಚರಣೆಯ ಬಗ್ಗೆ ಪ್ರಬಂಧ

ಈ ಲೇಖನಿಯಲ್ಲಿ ಶಿಕ್ಷಕರ ದಿನಾಚರಣೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಪಿಠೀಕೆ

ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಗುರು-ಶಿಕ್ಷಕರ ಸಂಪ್ರದಾಯ ನಡೆದುಕೊಂಡು ಬಂದಿದೆ. ನಮ್ಮ ಪೋಷಕರು ನಮ್ಮ ಮೊದಲ ಗುರುಗಳಾಗಿರುತ್ತಾರೆ. ಹಾಗೆ ಅಮ್ಮ ಮೊದಲ ಗುರು ಆಗಿರುತ್ತಾರೆ. ಏಕೆಂದರೆ ಅವರು ನಮಗೆ ಜಗತ್ತನ್ನು ತೋರಿಸಿದ್ದಾರೆ. ಅವರ ಸ್ಥಾನವನ್ನು ಯಾರೂ ತೆಗೆದುಕೊಳ್ಳಲು ಸಾಧ್ಯವಿಲ್ಲ. ನಾವು ನಮ್ಮ ಶಿಕ್ಷಕರಿಂದ ಸರಿಯಾದ ಜೀವನ ವಿಧಾನವನ್ನು ಪಡೆಯುತ್ತೇವೆ ಮತ್ತು ಅವರ ಮಾರ್ಗದರ್ಶನದಲ್ಲಿ ನಾವು ನಮ್ಮ ಯಶಸ್ಸನ್ನು ಸಾಧಿಸುತ್ತೇವೆ. ಹಿಂದೆ ಗುರು ಇರಬೇಕು, ಮುಂದೆ ಗುರಿ ಇರಬೇಕು. ಶಿಕ್ಷಕರಿಗೆ ಯಾವಾಗಲೂ ಗೌರವ ಮತ್ತು ಪ್ರೀತಿಯನ್ನು ನೀಡಬೇಕು ಏಕೆಂದರೆ ಶಿಕ್ಷಕರು ನಮ್ಮನ್ನು ಯಶಸ್ಸಿನ ಹಾದಿಯಲ್ಲಿ ನಮ್ಮನ್ನು ಕಳುಹಿಸಲು ಪ್ರಯತ್ನಿಸುತ್ತಿರುತ್ತಾರೆ.

ವಿಷಯ ವಿವರಣೆ

ಶಿಕ್ಷಕರಿಗೆ ಗೌರವ ಸಲ್ಲಿಸುವ ದಿನವಾಗಿದೆ. ಉದ್ಯೋಗ ಪಡೆಯಲು ಶಾಲೆ, ಕಾಲೇಜುಗಳು ಸೇರಿದಂತೆ ವಿವಿಧ ಸಂಸ್ಥೆಗಳಲ್ಲಿ ಶಿಕ್ಷಕರ ದಿನಾಚರಣೆಯಂದು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ವಿದ್ಯಾರ್ಥಿಗಳು ಗುರುಗಳನ್ನು ವಿವಿಧ ರೀತಿಯಲ್ಲಿ ಗೌರವಿಸಿದರೆ, ಶಿಕ್ಷಕರು ಗುರು-ಶಿಷ್ಯ ಸಂಪ್ರದಾಯವನ್ನು ಎತ್ತಿಹಿಡಿಯುವ ಪ್ರತಿಜ್ಞೆಯನ್ನು ತೆಗೆದುಕೊಳ್ಳುತ್ತಾರೆ.ಭಾರತವನ್ನು ಹೊರತುಪಡಿಸಿ, 21 ದೇಶಗಳಲ್ಲಿ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಗುರುಗಳನ್ನು ವಿವಿಧ ರೀತಿಯಲ್ಲಿ ಗೌರವಿಸಿದರೆ, ಶಿಕ್ಷಕರು ಗುರು-ಶಿಷ್ಯ ಪರಂಪರೆಯನ್ನು ಎತ್ತಿ ಹಿಡಿಯುವ ಪ್ರತಿಜ್ಞೆ ಮಾಡುತ್ತಾರೆ. ಶಾಲಾ ಕಾಲೇಜುಗಳಲ್ಲಿ ಶಿಕ್ಷಕರ ದಿನದಂದು ಹಬ್ಬದ ವಾತಾವರಣವಿರುತ್ತದೆ. ದಿನವಿಡೀ ವರ್ಣರಂಜಿತ ಕಾರ್ಯಕ್ರಮಗಳು ಮತ್ತು ಸನ್ಮಾನಗಳು ನಡೆಯುತ್ತವೆ. ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನ ಸೆಪ್ಟೆಂಬರ್‌ ೫ ರಂದು ಅವರನ್ನು ಸ್ಮರಿಸುವ ಮೂಲಕ ಈ ದಿನವನ್ನು ಆಚರಿಸಲಾಗುತ್ತದೆ. ಇವರು ಎಲ್ಲರೂ ಪ್ರೀತಿಸುವ ಶಿಕ್ಷಕರಾಗಿದ್ದರು.

ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಜೀವನ ಚರಿತ್ರೆ

ನಮ್ಮ ದೇಶದ ಮೊದಲ ಉಪರಾಷ್ಟ್ರಪತಿ ಮತ್ತು ಎರಡನೇ ರಾಷ್ಟ್ರಪತಿಯಾದ ಸರ್ವಪಲ್ಲಿ ರಾಧಾಕೃಷ್ಣನ್ ಅವರು 5 ಸೆಪ್ಟೆಂಬರ್ 1888 ರಂದು ಜನಿಸಿದರು ಮತ್ತು ಅವರ ನೆನಪಿಗಾಗಿ ಪ್ರತಿ ವರ್ಷ ಈ ದಿನವನ್ನು ಭಾರತದಲ್ಲಿ ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತದೆ. ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಸಹ ಶಿಕ್ಷಣತಜ್ಞರಾಗಿದ್ದರು, ಅವರು ಭಾರತದ ಶಿಕ್ಷಣ ಮಟ್ಟವನ್ನು ಸುಧಾರಿಸಲು ಅನೇಕ ಕೆಲಸಗಳನ್ನು ಮಾಡಿದರು. ರಾಧಾಕೃಷ್ಣನ್ ಅವರಿಗೆ 1954 ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಗೌರವ ಅಂದರೆ ಭಾರತ ರತ್ನ ನೀಡಲಾಯಿತು. ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಕೆಲವು ವಿದ್ಯಾರ್ಥಿಗಳು ಮತ್ತು ಸ್ನೇಹಿತರು ಒಮ್ಮೆ ಅವರ ಜನ್ಮದಿನವನ್ನು ಆಚರಿಸುವಂತೆ ಕೇಳಿಕೊಂಡರು ಎಂದು ಹೇಳಲಾಗುತ್ತದೆ, ಅದಕ್ಕೆ ರಾಧಾಕೃಷ್ಣನ್ ಅವರು ‘ನನ್ನ ಜನ್ಮದಿನವನ್ನು ಪ್ರತ್ಯೇಕವಾಗಿ ಆಚರಿಸುವ ಬದಲು ಶಿಕ್ಷಕರ ದಿನವಾಗಿ ಆಚರಿಸಿದರೆ ನನಗೆ ತುಂಬಾ ಹೆಮ್ಮೆಯಾಗುತ್ತದೆ. ಅಂದಿನಿಂದ ಭಾರತದಲ್ಲಿ ಶಿಕ್ಷಕರ ದಿನಾಚರಣೆ ಆರಂಭವಾಯಿತು.

ಶಿಕ್ಷಕರ ದಿನಾಚರಣೆಯ ಮಹತ್ವ

  • ಪ್ರತಿ ವರ್ಷ ಸೆಪ್ಟೆಂಬರ್‌ ೫ ರಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಎಕೆಂದರೆ ಒಂದು ಮಗುವಿನ ಸರ್ವತೋಮುಖ ಅಭಿವೃದ್ದಿಯನ್ನು ರೂಪಿಸಲು ಶಿಕ್ಷಕರಿಂದ ಮಾತ್ರ ಸಾಧ್ಯ. ಇಂತಹ ಮಹತ್ತರವಾದ ಕಾರ್ಯವನ್ನು ನಿರ್ವಹಿಸುತ್ತಾರೆ. ಆದ್ದರಿಂದ ಶಿಕ್ಷಕರ ದಿನಾಚರಣೆಯನ್ನು ಆಚರಿಸಬೇಕು.
  • ಶಿಕ್ಷಕರ ಬಗ್ಗೆ ಮಕ್ಕಳಲ್ಲಿ ಗೌರವವನ್ನು, ಪ್ರೀತಿಯನ್ನು ಬೆಳೆಸುವುದಕ್ಕೆ ಅತಿ ಮುಖ್ಯವಾದ ಪಾತ್ರವನ್ನು ಹೊಂದಿದೆ.
  • ವಿದ್ಯಾರ್ಥಿ ಮತ್ತು ಶಿಕ್ಷಕರ ಕಠಿಣ ಪರಿಶ್ರಮಕ್ಕೆ ಧನ್ಯವಾದಗಳನ್ನು ಹೇಳುವುದಕ್ಕೆ ಇರುವ ದಿನವಾಗಿದೆ.
  • ಪ್ರತಿಯೊಬ್ಬರ ಜೀವನದಲ್ಲಿ ಗುರುವಿಗೆ ಹೆಚ್ಚಿನ ಮಹತ್ವವಿದೆ. ಸಮಾಜದಲ್ಲಿ ಅವರಿಗೂ ವಿಶೇಷ ಸ್ಥಾನವಿದೆ.
  • ಸರ್ವಪಲ್ಲಿ ರಾಧಾಕೃಷ್ಣನ್ ರವರು ಶಿಕ್ಷಣದಲ್ಲಿ ಅಪಾರವಾದ ನಂಬಿಕೆಯನ್ನು ಇಟ್ಟವರು. ಅವರು ಮಹಾನ್ ತತ್ವಜ್ಞಾನಿ ಮತ್ತು ಶಿಕ್ಷಕರಾಗಿದ್ದರು. ಅವರಿಗೆ ಬೋಧನೆಯಲ್ಲಿ ಅಪಾರವಾದ ಪ್ರೀತಿ ಇತ್ತು. ಆದರ್ಶ ಶಿಕ್ಷಕನ ಎಲ್ಲಾ ಗುಣಗಳನ್ನು ಹೊಂದಿದ್ದರು. ಈ ದಿನದಂದು, ದೇಶಾದ್ಯಂತ ಭಾರತ ಸರ್ಕಾರದಿಂದ ಉತ್ತಮ ಶಿಕ್ಷಕರಿಗೆ ಪ್ರಶಸ್ತಿಗಳನ್ನು ನೀಡಲಾಗುತ್ತದೆ.
  • ಇವರಂತೆಯೇ ಕೆಲವೊಂದು ಆದರ್ಶ ವಿಚಾರಧಾರೆಗಳನ್ನು ಯುವ ಜನತೆಯು ಬೆಳೆಸಿಕೊಳ್ಳುವುದಕ್ಕೆ ಈ ದಿನದಂದು ಹಲವಾರು ಪ್ರೇರಕವಾಗುವಂತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.

ಉಪಸಂಹಾರ

ಒಂದು ಮಗುವನ್ನ ಉತ್ತಮ ಸ್ಥಾನಕ್ಕೆ ತೆಗೆದುಕೊಂಡು ಹೋಗಲು ಹಾಗೆ ಆ ಮಗುವಿನ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರು ಬೇಕು. ಶಿಕ್ಷಕರ ಮಾರ್ಗದರ್ಶನವಿಲ್ಲದೆ ಒಳ್ಳೆಯ ಗುರಿಯ ಕಡೆ ತಲುಪಲು ಸಾಧ್ಯವಿಲ್ಲ. ಗುರು ಹಿಂದಿರಬೇಕು, ಗುರಿ ಮುಂದಿರಬೇಕು ಆಗ ಮಾತ್ರ ಉತ್ತಮವಾದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಾಧ್ಯ. ಪರೋಕ್ಷವಾಗಿ, ಪ್ರತ್ಯಕ್ಷವಾಗಿ ನಮಗೆ ಜೀವನದ, ಹಾಗು ಜ್ಞಾನದ ಬಗ್ಗೆ ಅರಿವನ್ನು ಮೂಡಿಸಿದ ಎಲ್ಲಾ ಶೇಷ್ಠ ಗುರುಗಳಿಗೆ ಧನ್ಯವಾದಗಳನ್ನು ಅರ್ಪಿಸುವುದಾಗಿದೆ.

FAQ

ಶಿಕ್ಷಕರ ದಿನಾಚರಣೆಯನ್ನು ಯಾವ ದಿನಾಂಕದಂದು ಆಚರಿಸುತ್ತಾರೆ ?

ಸೆಪ್ಟೆಂಬರ್‌ ೫ ರಂದು ಆಚರಿಸುತ್ತಾರೆ.

ಶಿಕ್ಷಕರ ದಿನಾಚರಣೆಯನ್ನು ಯಾರ ಜನ್ಮದಿನದಂದು ಆಚರಿಸುತ್ತಾರೆ ?

ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನದಂದು ಆಚರಿಸುತ್ತಾರೆ.

ಇತರೆ ಪ್ರಬಂಧಗಳು:

ಬಾಲ ಕಾರ್ಮಿಕರ ಬಗ್ಗೆ ಪ್ರಬಂಧ

ರಾಷ್ಟ್ರೀಯ ಹಬ್ಬಗಳ ಬಗ್ಗೆ ಪ್ರಬಂಧ

Leave a Comment