ಜಲಮಾಲಿನ್ಯದ ಬಗ್ಗೆ ಪ್ರಬಂಧ | Water Pollution Essay in Kannada

ಜಲಮಾಲಿನ್ಯದ ಬಗ್ಗೆ ಪ್ರಬಂಧ, Water Pollution jala malinya essay prabandha in kannada

ಜಲಮಾಲಿನ್ಯದ ಬಗ್ಗೆ ಪ್ರಬಂಧ

Water Pollution Essay in Kannada
ಜಲಮಾಲಿನ್ಯದ ಬಗ್ಗೆ ಪ್ರಬಂಧ | Water Pollution Essay in Kannada

ಈ ಲೇಖನಿಯಲ್ಲಿ ಜಲಮಾಲಿನ್ಯದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಪಿಠೀಕೆ

ಪ್ರಕತಿ ನಮಗೆ ನೀಡಿರುವ ಸಂಪನ್ಮೂಲಗಳಲ್ಲಿ ಅತ್ಯಮೂಲ್ಯವಾದುದು ನೀರು. ಇದು ವಿವಿಧ ಮೂಲಗಳಿಂದ ಮಾಲಿನ್ಯಕಾರಕಗಳು ಜಲಮೂಲಗಳಿಗೆ ಸೇರಿದಾಗ ಜಲಮಾಲಿನ್ಯವು ಆಗುತ್ತದೆ. ಅಂತಹ ಮಾಲಿನ್ಯಕಾರಕಗಳು ನದಿಗಳು, ತೊರೆಗಳು, ಕೊಳಗಳು, ಸರೋವರಗಳು ಮತ್ತು ಅಂತರ್ಜಲವನ್ನು ಕಲುಷಿತಗೊಳಿಸುತ್ತವೆ, ಮಾನವರು ಮತ್ತು ಇತರ ಜೀವಿಗಳ ಜೀವನ ಮತ್ತು ಆರೋಗ್ಯವನ್ನು ಅಪಾಯಕ್ಕೆ ತರುತ್ತವೆ. ಹಿಂದಿನ ಕಾಲದಲ್ಲಿ ಜನ ನೀರನ್ನು ದೇವರೆಂದು ಪೂಜಿಸುತ್ತಿದ್ದರು. ಏಕೆಂದರೆ ನೀರು ಇಲ್ಲ ಎಂದರೆ ಬದುಕಿಲ್ಲ. ಆದ್ದರಿಂದಲೇ ನೀರನ್ನು ಜೀವಜಲ ಎಂದು ಕರೆಯುತ್ತಾರೆ. ನೀರಿನ ಮಾಲಿನ್ಯವು ಇತ್ತೀಚಿನ ದಿನಗಳಲ್ಲಿ ಇದೊಂದು ದೊಡ್ಡ ಸಮಸ್ಯೆಯಾಗಿದೆ. ಪರಿಸರ ಮಾತ್ರವಲ್ಲದೆ ಇದು ಮಾನವನ ಜೀವನ ಮತ್ತು ಆರೋಗ್ಯವನ್ನು ಗಂಭೀರವಾಗಿ ಅಡ್ಡಿಪಡಿಸುತ್ತದೆ. ನೀರು ಪ್ರತಿಯೊಂದು ಜೀವಸಂಕುಲಕ್ಕೂ ಅತೀ ಮುಖ್ಯವಾದುದ್ದಾಗಿದೆ.

ವಿಷಯ ವಿವರಣೆ

ಸಾಮಾನ್ಯ ಅರ್ಥದಲ್ಲಿ ಹೇಳುವುದಾದರೆ ಮಾನವನ ಚಟುವಟಿಕೆಗಳಿಂದ ನೀರಿನ ಮೂಲಗಳು ಕಲುಷಿತಗೊಳ್ಳುವುದು ಜಲಮಾಲಿನ್ಯ. ಇಂದು ಜೀವಜಲ ಹಲವಾರು ಕಾರಣಗಳಿಂದಾಗಿ ವಿಷಯುಕ್ತವಾಗಿದೆ. ನೀರು ೭೫ % ಇದ್ದು, ಭೂಮಿ ೨೫% ರಷ್ಟು ಇರುವುದು. ಹಾಗೆ ನೀರಿನ ಮೂಲಗಳಾದ ಕೆರೆ, ಕಾಲುವೆ, ಬಾವಿಗಳು ಬತ್ತಿ ಹೋಗಿವೆ. ಕೆಲವು ಕೆರೆ ಕುಂಟೆಗಳು ಮಾಯವಾಗಿ ಕಟ್ಟಡಗಳಾಗಿ ಮಾರ್ಪಟ್ಟಿವೆ. ನೀರು ಇಲ್ಲದ ಜಗತ್ತನ್ನ ನಾವು ಊಹಿಸಲೂ ಸಾಧ್ಯವಿಲ್ಲ. ನೀರು ಪ್ರತಿಯೊಂದು ಜೀವ ಸಂಕುಲಕ್ಕೂ ಅಗತ್ಯ. ನೀರನ್ನ ಕುಡಿಯುವುದಕ್ಕೆ ನಮ್ಮ ದಿನನಿತ್ಯದ ಬಳಕೆಗೆ ನೀರು ಬೇಕು. ಒಬ್ಬರ ಜೀವ ಉಳಿಸುವಂತ ನೀರನ್ನ ನಾವು ಕಲುಷಿತ ಮಾಡುತ್ತಿದ್ದೇವೆ. ಒಮ್ಮೇ ಯೋಚಿಸಿ, ನೀರನ್ನ ಮಿತವಾಗಿ, ಅಗತ್ಯಕ್ಕೆ ಬೇಕಾಗುವಷ್ಟು ಮಾತ್ರ ಬಳಸಿ. ನೀರಿನ ಮಹತ್ವವನ್ನು ತಿಳಿದುಕೊಳ್ಳಿ ನೀರನ್ನ ಮಲಿನಗೊಳಿಸಬಾರದು.

ಜಲ ಮಾಲಿನ್ಯಕ್ಕೆ ಕಾರಣಗಳು

  • ಹಲವಾರು ಕಾರ್ಖಾನೆಗಳು ವಿಷಯುಕ್ತವಾದ ರಾಸಾಯನಿಕಗಳನ್ನು ನದಿಗಳಿಗೆ ಮತ್ತು ತೊರೆಗಳಿಗೆ ಬಿಡುವುದರಿಂದ ಜಲಮಾಲಿನ್ಯ ಉಂಟಾಗುತ್ತದೆ.
  • ನಗರಗಳಲ್ಲಿನ ಚರಂಡಿ ನೀರನ್ನು ಕೆರೆ, ನದಿ, ಸಮುದ್ರಗಳಿಗೆ ಸೇರಿಸುವುದರಿಂದ ಜಲ ಮಾಲಿನ್ಯವು ಉಂಟಾಗುತ್ತದೆ.
  • ನೀರಿನಲ್ಲಿ ಜನರು ಕರಗದ ವಸ್ತಗಳನ್ನು ಹಾಕುವುದರಿಂದ ಜಲ ಮಾಲಿನ್ಯವು ಉಂಟಾಗುತ್ತದೆ.
  • ಮೀನುಗಾರರು ದಿನನಿತ್ಯ ಪ್ಲಾಸ್ಟಿಕ್‌ ನೆಟ್ಗಳನ್ನು ಬಳಸುವುದರಿಂದ ಜಲಮಾಲಿನ್ಯವು ಉಂಟಾಗುತ್ತದೆ.
  • ಗಣೇಶ ಹಬ್ಬದಲ್ಲಿ ಗಣೇಶ ಮೂರ್ತಿಯನ್ನು ನೀರಿನಲ್ಲಿ ಮುಳುಗಿಸುವುದರಿಂದ ಜಲ ಮಾಲಿನ್ಯವು ಉಂಟಾಗುತ್ತಿದೆ.
  • ಕೈಗಾರಿಕೆಗಳಿಲ್ಲಿ ಉಪಯೋಗಿಸಿದ ನೀರು ಬಿಸಿಯಾಗಿರುತ್ತದೆ ಆದ್ದರಿಂದ ಜಲಚರ ಜೀವಿಗಳು ಸಾವನ್ನಪ್ಪುತ್ತಾವೆ. ಇದರಿಂದ ನೀರು ಕಲುಷಿತಗೊಳ್ಳುತ್ತದೆ.
  • ಸಂಸ್ಕರಿಸದ ಅಥವಾ ಶುದ್ದಿಕರಿಸದ ಕಸವನ್ನು ನೀರಿಗೆ ಸೇರಿಸುವುದರಿಂದ ಜಲಮಾಲಿನ್ಯವಾಗುತ್ತದೆ.
  • ಸಮುದ್ರದಲ್ಲಿ ಹಡಗು ಮತ್ತು ಅನಿಲ ದುರಂತಗಳಿಂದಾಗಿ ನೀರಿನಲ್ಲಿ ಪೆಟ್ರೋಲ್‌ ಉತ್ಪನ್ನಗಳು ನೀರಿಗೆ ಸೇರಿ ಮಲಿನವಾಗುತ್ತದೆ.

ಜಲ ಮಾಲಿನ್ಯದಿಂದಾಗುವ ದುಷ್ಪರಿಣಾಮಗಳು

  • ಆರೋಗ್ಯ ಸಮಸ್ಯಗಳು ಉಂಟಾಗುತ್ತವೆ. ಮಾನವರಲ್ಲಿ, ಯಾವುದೇ ರೀತಿಯಲ್ಲಿ ಕಲುಷಿತ ನೀರನ್ನು ಕುಡಿಯುವುದುದರಿಂದ ನಮ್ಮ ಆರೋಗ್ಯದ ಮೇಲೆ ಅನೇಕ ಹಾನಿಕಾರಕ ಪರಿಣಾಮಗಳನ್ನು ಬೀರುತ್ತದೆ. ಇದು ಟೈಫಾಯಿಡ್, ಕಾಲರಾ, ಹೆಪಟೈಟಿಸ್ ಮತ್ತು ಇತರ ಹಲವಾರು ರೋಗಗಳಿಗೆ ಕಾರಣವಾಗುತ್ತದೆ.
  • ನೀರಿನಲ್ಲಿ ರಾಸಾಯನಿಕಗಳ ಶೇಖರಣೆ ಮತ್ತು ದ್ರಾವಣ, ಪಾಚಿಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
  • ಪಾಚಿಗಳು ಅಥವಾ ಸರೋವರದ ಮೇಲೆ ಪದರವನ್ನು ರೂಪಿಸುತ್ತವೆ. ಬ್ಯಾಕ್ಟೀರಿಯಾಗಳು ಈ ಪಾಚಿಯನ್ನು ತಿನ್ನುತ್ತವೆ ಮತ್ತು ಈ ಘಟನೆಯು ನೀರಿನ ದೇಹದಲ್ಲಿ ಆಮ್ಲಜನಕದ ಪ್ರಮಾಣವನ್ನು ಕಡಿಮೆ ಮಾಡುತ್ತದೆ.
  • ಜಲಚರಗಳು ನಾಶವಾಗುತ್ತವೆ.

ಜಲ ಮಾಲಿನ್ಯವನ್ನು ತಡೆಗಟ್ಟುವ ಕ್ರಮಗಳು

  • ನೀರಿನಲ್ಲಿ ಕಸ ಹಾಕುವುದನ್ನು ಕಡಿಮೆ ಮಾಡುವ ಮೂಲಕದಿಂದ ಜಲಮಾಲಿನ್ಯವನ್ನು ತಡೆಗಟ್ಟಬಹುದು.
  • ಸರಿಯಾದ ತ್ಯಾಜ್ಯ ವಿಲೇವಾರಿ ವಿಧಾನಗಳನ್ನು ಅಳವಡಿಸಿಕೊಳ್ಳುವುದು.
  • ಕೈಗಾರಿಕಾ ತ್ಯಾಜ್ಯವನ್ನು ನಿಯಂತ್ರಿಸಲು ಅಥವಾ ಅದನ್ನು ಮರುಬಳಕೆ ಮಾಡಲು ಕಟ್ಟುನಿಟ್ಟಾದ ನಿಯಂತ್ರಣ ಕಾರ್ಯವಿಧಾನ ಇರಬೇಕು.
  • ಯಾವುದೇ ರೂಪದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಮುಖ್ಯವಾಗಿ ಜಲಮೂಲಗಳು, ಸಾಗರಗಳು ಮತ್ತು ಇತರ ಪ್ರವಾಸಿ ತಾಣಗಳ ಬಳಿ ನಿಷೇಧಿಸಬೇಕು.
  • ಕಾರ್ಖಾನೆಗಳಿಂದ ಬರುವ ಕಲ್ಮಶಗಳನ್ನು ಶುದ್ದಿಕರಿಸುವುದು.
  • ಜನರಲ್ಲಿ ನೀರಿನ ಮಹತ್ವದ ಬಗ್ಗೆ ಜಾಗೃತಿಗಳನ್ನು ಮೂಡಿಸುವುದು.
  • ವಿಶ್ವ ಜಲದಿನವನ್ನು ಆಚರಿಸುವುದರ ಮೂಲಕ ನೀರಿಗೆ ಸಂಬಂದಿಸಿದ ಹಲವಾರು ಕಾರ್ಯಕ್ರಮಗಳನ್ನು ಮಾಡುವುದರಿಂದ ನೀರಿ ಪ್ರಾಮುಖ್ಯತೆಯನ್ನು ಜನರಲ್ಲಿ ತಿಳಿಸುವುದು.
    • ಇದಕ್ಕೆ ಸಂಬಂದಿಸಿದಂತೆ ಕೆಲವೊಂದು ಕಾನೂನು ಕ್ರಮಗಳನ್ನುಜಾರಿಗೆ ತರುವುದು ಮತ್ತು ಇವುಗಳನ್ನು ಕಟ್ಟುನಿಟ್ಟಾಗಿ ಎಲ್ಲರೂ ಪಾಲಿಸುವಂತೆ ಸೂಚಿಸುವುದು.

ಉಪಸಂಹಾರ

“ನೀರನ್ನು ಉಳಿಸಿ ಜೀವವನ್ನು ರಕ್ಷಿಸಿ” ಹಾಗೆ ಜೀವನಕ್ಕೆ ಅತೀ ಮುಖ್ಯವಾಗಿ ಬೇಕಾಗಿರುವುದು ನೀರು. ನೀರಿಲ್ಲದಿದ್ದರೆ ಜೀವನವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ನೀರು ನಮ್ಮ ಜೀವಕ್ಕೆ, ಜೀವನಕ್ಕೆ ನೀರು ಬೇಕೇ ಬೇಕು. ನೀರಿನ ಬಳಕೆ ಮಿತವಾಗಿರಲಿ, ನೀರಿನ ಮಲಿನ ಕಡಿಮೆಯಾಗಲಿ.

FAQ

ವಿಶ್ವ ಜಲ ದಿನವನ್ನು ಯಾವ ದಿನಾಂಕದಂದು ಆಚರಿಸಲಾಗುತ್ತದೆ ?

ಮಾರ್ಚ ೨೨ ರಂದು ವಿಶ್ವ ಜಲ ದಿನವನ್ನು ಆಚರಿಸಲಾಗುತ್ತದೆ.

ಜಲ ಮಾಲಿನ್ಯವನ್ನು ತಡೆಗಟ್ಟುವ ಒಂದು ಕ್ರಮನ್ನು ತಿಳಿಸಿ ?

ನೀರಿನಲ್ಲಿ ಕಸ ಹಾಕುವುದನ್ನು ಕಡಿಮೆ ಮಾಡುವ ಮೂಲಕದಿಂದ ಜಲಮಾಲಿನ್ಯವನ್ನು ತಡೆಗಟ್ಟಬಹುದು.

ಇತರೆ ಪ್ರಬಂಧಗಳು:

ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಬಂಧ

ಪರಿಸರ ಸಂರಕ್ಷಣೆ ಪ್ರಬಂಧ

Leave a Comment