ಜೀವನದ ಬಗ್ಗೆ ಪ್ರಬಂಧ | Essay on life in Kannada

ಜೀವನದ ಬಗ್ಗೆ ಪ್ರಬಂಧ Essay on life jeevanaPrabandha in Kannada

ಜೀವನದ ಬಗ್ಗೆ ಪ್ರಬಂಧ

Essay on life in Kannada
ಜೀವನದ ಬಗ್ಗೆ ಪ್ರಬಂಧ | Essay on life in Kannada

ಈ ಲೇಖನಿಯಲ್ಲಿ ಜೀವನದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಪೀಠಿಕೆ

ಜೀವನವು ಹಲವು ಮುಖಗಳನ್ನು ಹೊಂದಿದ ಕ್ರಿಯೆ. ಜೀವನವೆಂದರೆ ಜೈವಿಕ ಜಗತ್ತಿನ ವ್ಯಾಪಾರ, ಹುಟ್ಟು ಮತ್ತು ಸಾವು ಇವುಗಳ ನಡುವೆ ಜೀವಿಗಳ ಅಭಿವೃಧ್ಧಿ ಮತ್ತು ಬದುಕಿನ ಹೋರಾಟದ ಪ್ರಕ್ರಿಯೆ. ಜೀವನ ಸುಂದರ. ಇದಕೆ ಕಷ್ಟ ಸುಖ ಎರಡು ಅದರ ಭಾಗಗಳು. ಅವು ಒಂದರ ನಂತರ ಒಂದಾಗಿ ಬರುತ್ತೇವೆ. ಅದಕ್ಕೆ ಸಮಾಧಾನವೇ ಔಷಧಿ.

ವಿಷಯ ವಿವರಣೆ

ಇಂದಿನ ಜಗತ್ತಿನಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಮುಖ್ಯ ಗುರಿ ಯಶಸ್ವಿಯಾಗುವುದು. ಪ್ರತಿಯೊಬ್ಬ ವ್ಯಕ್ತಿಯು ತನಗೆ ಸಾಧ್ಯವಾದಷ್ಟು ಬೇಗ ಯಶಸ್ಸನ್ನು ಸಾದಿಸಲು ಬಯಸುತ್ತಾನೆ. ಆದರೆ ಯಶಸ್ಸಿನ ಮೆಟ್ಟಿಲುಗಳೆಂದರೆ ಜೀವನದ ಗುರಿಯನ್ನು ಆರಿಸಿಕೊಳ್ಳುವುದು ಮತ್ತು ನಂತರ ಸೂಕ್ತವಾದ ತಂತ್ರವನ್ನು ಆರಿಸಿಕೊಂಡು ಅದರ ಮೇಲೆ ಕೆಲಸ ಮಾಡಲು ಪ್ರಾರಂಭಿಸುವುದು. ಇಂದಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಜೀವನದ ಗುರಿಯನ್ನು ಆರಿಸಿಕೊಳ್ಳುವುದು ತುಂಬಾ ಕಷ್ಟವಾಗುತ್ತಿದೆ. ಹಾಗಾದರೆ ಈಗ ಒಂದು ಪ್ರಶ್ನೆ ಬರುತ್ತದೆ – ನನ್ನ ಜೀವನದ ಗುರಿ ಏನು? ನಾವು ನಮ್ಮ ಜೀವನವನ್ನು ವಿಭಿನ್ನ ದೃಷ್ಟಿಕೋನದಿಂದ ನೋಡಿದರೆ, ಈಗಲೂ ಸಹ, ನಮ್ಮ ಜೀವನದಲ್ಲಿ ಸಾಕಷ್ಟು ಗುರಿಗಳೊಂದಿಗೆ ಸಾಕಷ್ಟು ವೃತ್ತಿಗಳು ಅಸ್ತಿತ್ವದಲ್ಲಿವೆ ಎಂದು ನಾವು ಕಂಡುಕೊಳ್ಳುತ್ತೇವೆ.

ಜೀವನದಲ್ಲಿ ಗುರಿ ಹೊಂದಿರಬೇಕು

ಜೀವನದಲ್ಲಿ ಯಶಸ್ಸಿನ ಗುರಿ ಎಂಬುದು ದಾರಿ ತೋರುವ ಗುರುವಿನಂತೆ. ಸಾಧಿಸುವ ಛಲ ದೊರೆಯುವುದು ಜೀವನದ ಒಂದು ಪ್ರಮುಖ ಗುರಿಯಿಂದ. ಆದರೆ ಗುರಿ ಸಾಧನೆಗೆ ತೊಡಕುಗಳು ಇದ್ದೇ ಇರುತ್ತದೆ. ಗೆಲುವು ಎಂದಿಗೂ ಸುಲಭವಾಗಿ ದೊರೆಯುವುದಿಲ್ಲ. ಹಂತ ಹಂತದಲ್ಲಿ ಸೋಲಿನ ಸವಾಲನ್ನು ಸ್ವೀಕರಿಸಿದರೆ ಮಾತ್ರವೇ ಗೆಲುವಿನ ಸಿಹಿ ನಮಗೆ ಒಲಿಯುತ್ತದೆ. ನೀವು ಏನು ಸಾಧಿಸಬೇಕೋ ಅದಕ್ಕಾಗಿ ಸೂಕ್ತವಾದ ಯೋಜನೆಗಳನ್ನು ಮಾಡಿ ಅದಕ್ಕಾಗಿ ಪರಿಶ್ರಮವನ್ನು ಪಡಬೇಕಾಗುತ್ತದೆ. ಗುರಿ ಸಾಧನೆಯ ಛಲ ನಿಮ್ಮಲ್ಲಿದ್ದರೆ-ಯಶಸ್ಸು ಕಟ್ಟಿಟ್ಟ ಬುತ್ತಿ.

ನಿಮ್ಮ ಜೀವನದ ಗುರಿಯ ಬಗ್ಗೆ ಸದಾ ನಿಮ್ಮ ಲಕ್ಷ್ಯ ಇರಲಿ. ಈ ನಿಟ್ಟಿನಲ್ಲಿ ಸತತವಾಗಿ ಮುಂದುವರೆಯುವುದರ ಬಗ್ಗೆ ಯೋಚಿಸುವುದು ಋಣಾತ್ಮಕ ಚಿಂತನೆಯಿಂದ ಹೊರಬರಲು ಉತ್ತಮ ಮಾರ್ಗವಾಗಿದೆ. ಸಾಮಾನ್ಯವಾಗಿ ನಮಗೆ ಹಲವಾರು ಅಡೆತಡೆಗಳು ಎದುರಾಗುತ್ತವೆ. ಈ ಅಡೆತಡೆಗಳನ್ನು ಸಮರ್ಥವಾಗಿ ಎದುರಿಸಿ ಗುರಿಯತ್ತ ಮುಂದುವರೆಯಲು ಮನಸ್ಸನ್ನು ಕೇಂದ್ರೀಕರಿಸಿ. ಆಗುವುದೇ ಇಲ್ಲ ಎಂಬಂತಹ ಕೆಲಸಗಳೂ ನಮಗೇ ಅಚ್ಚರಿಯಾಗುವಂತೆ ಆಗುತ್ತಾ ಹೋಗಿ ಧನಾತ್ಮಕ ಚಿಂತನೆಯನ್ನು ಸಾಬೀತುಪಡಿಸುತ್ತವೆ.

ಈ ಯೋಜನೆಗಳನ್ನು ನೀವು ನಿಮ್ಮಷ್ಟಕ್ಕೆ ರೂಪಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ಜೀವನದಲ್ಲಿ ಲಕ್ಷ್ಯವಿಟ್ಟು ಮುಂದಡಿಯಿಟ್ಟಾಗ ಸೋಲೇ ಗೆಲುವಿನ ಸೋಪಾನ ಎಂಬುದು ನಮಗೆ ಅರಿವಾಗುತ್ತದೆ. ಹಾಗಿದ್ದರೆ ಇದಕ್ಕಾಗಿ ಮೊದಲು ನೀವು ಸೋಲನ್ನು ಸಿಹಿಯಾಗಿ ಸ್ವೀಕರಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಅದಕ್ಕೆಂದೇ ಇಂದಿನ ಲೇಖನದಲ್ಲಿ ನಾವು ಕೆಲವೊಂದು ಸಲಹೆಗಳನ್ನು ನೀಡುತ್ತಿದ್ದೇವೆ. ಆ ಸಲಹೆಗಳನ್ನು ನೀವು ಪಾಲಿಸಿದರೆ ಗೆಲುವಿನ ಸಿಹಿ ನಿಮ್ಮ ಮುಂದೆ ಇರುತ್ತದೆ.

ಜೀವನದಲ್ಲಿ ಆತ್ಮಸ್ಥೈರ್ಯವನ್ನು ಕಳೆದುಕೊಳ್ಳಬಾರದು

ಆತ್ಮಸ್ಥೈರ್ಯ ಕಳೆದುಕೊಳ್ಳಬೇಡಿ ಸಾಮಾನ್ಯವಾಗಿ ಮನೋಸ್ಥೈರ್ಯ ಕುಂದಲು ಆತ್ಮವಿಶ್ವಾಸದಲ್ಲಿ ಕೊರತೆ ಮುಖ್ಯ ಕಾರಣವಾಗಿದೆ. ಪೂರ್ವಾಗ್ರಹ ಪೀಡಿತರಾದ ನಾವು ಹಲವು ಕೀಳರಿಮೆಗಳನ್ನು ಮನದಾಳದಲ್ಲಿ ಪೋಷಿಸಿಕೊಂಡು ಬಂದಿದ್ದೇವೆ. ಅದರಲ್ಲೂ ಜೀವನದ ಯಶಸ್ಸಿನ ಗುರಿಯತ್ತ ಸಾಗುತ್ತಿರುವಾಗ ಕೆಲವೊಂದು ಕಠಿಣ ಸಂಗತಿಗಳು ಎದುರಾದಾಗ ಅದು ನಮ್ಮಿಂದ ಸಾಧ್ಯವಿಲ್ಲ ಎಂದು ಪ್ರಯತ್ನಿಸುವ ಮೊದಲೇ ಒಪ್ಪಿಕೊಂಡು ಸೋಲುವುದು ಆತ್ಮಸ್ಥೈರ್ಯ ಕುಂದಲು ಕಾರಣವಾಗುತ್ತದೆ, ಹಾಗಾಗಿ ಜೀವನದಲ್ಲಿ ಧನಾತ್ಮಕವಾಗಿ ಯೋಚಿಸಿ, ಯಶಸ್ಸಿನ ಗುರಿಯತ್ತ ಸಾಗುತ್ತಿರುವಾಗ ಆತ್ಮಸ್ಥೈರ್ಯವನ್ನು ಎಂದೂ ಕಳೆದುಕೊಳ್ಳಬೇಡಿ. ನೀವ೦ದುಕೊ೦ಡದ್ದನ್ನು ಸಾಧಿಸಲು ನಿಮ್ಮಿ೦ದ ಸಾಧ್ಯವಿಲ್ಲ ಎ೦ಬ ಮಾತನ್ನು ಹೇಳಲು ಯಾರಿಗೂ ಅವಕಾಶವನ್ನು ನೀಡಬೇಡಿರಿ. ನಿಮ್ಮ ಕುರಿತಾಗಿ ಹಾಗೂ ನಿಮ್ಮ ಕನಸುಗಳ ಕುರಿತಾಗಿ ಸ್ವತ: ನಿಮಗೇ ನೀವೇ ಪ್ರಾಮಾಣಿಕರಾಗಿರಬೇಕು. ಯಾರೋ ಒಬ್ಬರು ನಿಮಗಿ೦ತ ವಿಭಿನ್ನವಾಗಿ ಯೋಚಿಸುತ್ತಾರೆ೦ಬ ಒ೦ದೇ ಒ೦ದು ಕಾರಣಕ್ಕಾಗಿ ನೀವು ಹಿಡಿದಿರುವ ಕೆಲಸವನ್ನು ಅರ್ಧಕ್ಕೇ ಕೈಬಿಡುವುದು ಬೇಡ. ನಿಮ್ಮ ಶಕ್ತಿಯಲ್ಲಿ ನೀವೇ ನ೦ಬಿಕೆಯನ್ನಿರಿಸಿಕೊ೦ಡಿರುವುದು ಎಲ್ಲಕ್ಕಿ೦ತಲೂ ಮುಖ್ಯವಾಗಿರುತ್ತದೆ. ನೀವು ಬಯಸುವ ಮಹತ್ವಾಕಾ೦ಕ್ಷೆಗಳನ್ನು ಬೆ೦ಬತ್ತಿ ಮು೦ದೆ ಸಾಗಲು ನೀವು ಖ೦ಡಿತಾಗಿಯೂ ಸಮರ್ಥವಾಗಿದ್ದೀರಿ. ಖಂಡಿತವಾಗಿಯೂ ಇದರಿಂದ ಯಶಸ್ಸಿನ ತುತ್ತತುದಿಯನ್ನು ಏರುತ್ತೀರಿ.

ಉಪಸಂಹಾರ

ನಮ್ಮ ಗುರಿಯನ್ನು ಸಾಧಿಸಲು ಸ್ಥಿರತೆ ಮತ್ತು ಉತ್ತಮ ಶ್ರಮ ಅಗತ್ಯ. ಎಲ್ಲರೂ ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು. ಒಳ್ಳೆಯ ಮನೋಬಾವ ಮತ್ತು ಕೊನೆಯದಾಗಿ, ಸರಳತೆಯು ಯಶಸ್ಸಿನ ಹಾದಿಯಾಗಿದೆ,ನಮ್ಮ ಶ್ರಮದ ಪಾತ್ರವು ಬಹಳ ಮುಖ್ಯವಾಗಿದೆ.

FAQ

ಮನೋಸ್ಥೈರ್ಯ ಕುಂದಲು ಕಾರಣವನ್ನು ತಿಳಿಸಿ ?

ಆತ್ಮವಿಶ್ವಾಸದಲ್ಲಿ ಕೊರತೆ ಮುಖ್ಯ ಕಾರಣವಾಗಿದೆ.

ಜೀವನದಲ್ಲಿ ಗುರಿಯನ್ನು ಏಕೆ ಹೊಂದಬೇಕು ?

ಮಾನವನಾಗಿ ಹುಟ್ಟಿದ ಮೇಲೆ ಎನಾದರೂ ಸಾಧನೆಯನ್ನು ಮಾಡಬೇಕು. ಆಗ ಮಾತ್ರ ಮಾನವ ಜನ್ಮ ಸಾರ್ಥಕವಾಗುವುದು.

ಇತರೆ ವಿಷಯಗಳು :

ಸರ್ದಾರ್ ವಲ್ಲಭಭಾಯಿ ಪಟೇಲ್ ರವರ ಬಗ್ಗೆ ಪ್ರಬಂಧ

ಪ್ರಜಾಪ್ರಭುತ್ವದಲ್ಲಿ ಮತದಾರರ ಪಾತ್ರ

Leave a Comment