ವಾಯು ಮಾಲಿನ್ಯದ ಬಗ್ಗೆ ಪ್ರಬಂಧ | Essay On Air Pollution in Kannada

ವಾಯು ಮಾಲಿನ್ಯದ ಬಗ್ಗೆ ಪ್ರಬಂಧ, Essay On Air Pollution in Kannada, vayu malinya essay in kannada, vayu malinya bhagya prabandha kannada

ವಾಯು ಮಾಲಿನ್ಯದ ಬಗ್ಗೆ ಪ್ರಬಂಧ

Essay On Air Pollution in Kannada
ವಾಯು ಮಾಲಿನ್ಯದ ಬಗ್ಗೆ ಪ್ರಬಂಧ | Essay On Air Pollution in Kannada

ಈ ಲೇಖನಿಯಲ್ಲಿ ವಾಯು ಮಾಲಿನ್ಯದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ತಿಳಿಸಲಾಗಿದೆ.

ಪೀಠಿಕೆ

ಆರೋಗ್ಯಯುತವಾದ ಜೀವನವನ್ನು ನಡೆಸಬೇಕಾದರೆ ನಾವು ಉಸಿರಾಡುವ ಗಾಳಿಯು ಶುದ್ಧವಾಗಿರಬೇಕು. ಆದರೆ, ಹೆಚ್ಚುತ್ತಿರುವ ಕೈಗಾರಿಕೀಕರಣ ಮತ್ತು ಪರಿಸರದಲ್ಲಿ ವಿಷಕಾರಿ ಅನಿಲಗಳ ಸಾಂದ್ರತೆಯಿಂದಾಗಿ ಗಾಳಿಯು ದಿನದಿಂದ ದಿನಕ್ಕೆ ಹೆಚ್ಚು ಮಲಿನಕಾರಿಯಾಗುತ್ತಿದೆ. ಅಲ್ಲದೆ, ಈ ವಾಯು ಮಾಲಿನ್ಯದಿಂದ ಉಸಿರಾಟ ಮತ್ತು ಇತರ ಕಾಯಿಲೆಗಳಿಗೆ ಕಾರಣವಾಗುತ್ತವೆ. ವಾಯು ಇಲ್ಲದೆ ಪ್ರತಿಯೊಂದು ಜೀವಿಗೂ ಬದುಕಲು ಸಾಧ್ಯವಿಲ್ಲ.

ವಿಷಯ ವಿವರಣೆ

ಸ್ವಾಭಾವಿಕ ಪರಿಸರಕ್ಕೆ ಹಾನಿಯನ್ನು ಮಾಡುವ ರಾಸಾಯನಿಕ ಸೂಕ್ಷ್ಮಕಣಗಳು ವಾತಾವರಣಕ್ಕೆ ಸೇರಿಕೊಳ್ಳುವುದಕ್ಕೆ ವಾಯು ಮಾಲಿನ್ಯ ಎನ್ನುವರು. ವಾಯುಮಾಲಿನ್ಯವು ಪ್ರಪಂಚದಾದ್ಯಂತದ ಜನರ ಆತಂಕವಾಗಿದೆ. ಪೆಟ್ರೋಲಿಯಂ, ಕಲ್ಲಿದ್ದಲು ಮತ್ತು ನೈಸರ್ಗಿಕ ಅನಿಲದಂತಹ ಪಳೆಯುಳಿಕೆ ಇಂಧನಗಳನ್ನು ಸುಡುವುದರಿಂದ ವಾಯು ಮಾಲಿನ್ಯವು ಹೆಚ್ಚಾಗಿ ಉಂಟಾಗುತ್ತಿದೆ. ವಾಹನಗಳು ಬಿಡುಗಡೆ ಮಾಡುವ ಹೊಗೆಯು ವಿಷಕಾರಿ ಕಣಗಳಿಂದ ಕೂಡಿರುತ್ತದೆ. ಈ ಮಾಲಿನ್ಯವು ಆಸ್ತಮಾ, ತಲೆನೋವು ಮತ್ತು ಅಲರ್ಜಿಯ ಇತರ ಲಕ್ಷಣಗಳಂತಹ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ವಿಶ್ವ ಆರೋಗ್ಯ ಸಂಸ್ಥೆಯು ವಾಯು ಮಾಲಿನ್ಯವನ್ನು ಮಾನವನ ಆರೋಗ್ಯಕ್ಕೆ ಪರಿಸರ ಅಪಾಯ ಎಂದು ವರ್ಗೀಕರಿಸಿದೆ.

ವಾಯು ಮಾಲ್ಯಿನ್ಯಕ್ಕೆ ಕಾರಣಗಳು

 • ಜ್ವಾಲಮುಖಿಯ ಸ್ಪೋಟದಿಂದ ಬರುವ ಹೊಗೆ ಗಾಳಿಯಲ್ಲಿ ಸೇರಿ ಮಾಲಿನ್ಯವಾಗುತ್ತದೆ.
 • ಕಾರ್ಖಾನೆಗಳಿಂದ ಹೊರ ಸೂಸುವ ತ್ಯಾಜ್ಯ ಹೊಗೆಯಿಂದ ವಾಯು ಮಾಲಿನ್ಯವಾಗುತ್ತದೆ.
 • ಮನೆ ಸುತ್ತ ಮುತ್ತಲಿನ ಕಸವನ್ನು ಸುಡುವುದರಿಂದ ಮಾಲಿನ್ಯವಾಗುತ್ತದೆ.
 • ಕೊಳೆತ ಸಸ್ಯದಿಂದ ಬಿಡುಗಡೆಯಾಗುವ ಅನಿಲದಿಂದ ಮಾಲಿನ್ಯವಾಗುತ್ತದೆ.
 • ದೊಡ್ಡ ನಗರಗಳು ವಾಯು ಮಾಲಿನ್ಯವಾಗಿವೆ.
 • ಅರಣ್ಯ ನಾಶದಿಂದ ವಾಯು ಮಾಲಿನ್ಯವನ್ನು ಉಂಟು ಮಾಡುತ್ತದೆ.
 • ವಾಹನಗಳಿಂದ ಬಿಡುಗಡೆಯಾಗುವ ಕಾರ್ಬನ್‌ ಡೈ ಆಕ್ಸೈಡ್‌ ಗಾಳಿಯಲ್ಲಿ ಸೇರಿ ವಾಯು ಮಾಲಿನ್ಯವಾಗುತ್ತದೆ.
 • ಕಾರ್ಬನ್‌ ಡೈ ಆಕ್ಸೈಡ್‌ ಹೆಚ್ಚಳದಿಂದ ಹಸಿರು ಮನೆ ಪರಿಣಾಮ ಉಂಟಾಗುತ್ದೆ.
 • ಗಾಳಿಯಲ್ಲಿರುವ ಹಾನಿಕಾರಕ ವಸ್ತುಗಳು ವಾಯು ಮಾಲಿನ್ಯಕ್ಕೆ ಕಾರಣವಾಗುತದೆ.

ವಾಯು ಮಾಲ್ಯಿನ್ಯದಿಂದ ಉಂಟಾಗುವ ಪರಿಣಾಮಗಳು

 • ವಾಯು ಮಾಲಿನ್ಯದ ಹೆಚ್ಚಳದಿಂದ ಜನರಲ್ಲಿ ಅಸ್ತಮಾ, ಉಸಿರಾಟಕ್ಕೆ ಸಂಬಂದಿಸಿದ ತೊಂದರೆಗಳು, ಬ್ರಾಂಕೈಟಿಸ್‌, ಕ್ಯಾನ್ಸರ್‌ ಇನ್ನು ಮುಂತಾದ ರೋಗಗಳು ಬರುವ ಸಾಧ್ಯತೆಗಳಿವೆ.
 • ಭೂಮಿಯ ವಾತವರಣದ ಸರಾಸರಿ ಉಷ್ಣತೆಯು ನಿಧಾನವಾಗಿ ಏರಿಕೆಯಾಗುತ್ತದೆ. ಇದರಿಂದ ಜಾಗತಿಕ ತಾಪಮಾನದ ಏರಿಕೆಯಾಗಿ ವಾಯು ಮಾಲಿನ್ಯವು ಹೆಚ್ಚಾಗುತ್ತದೆ.
 • ವಾತಾವರಣದಲ್ಲಿ ಬದಲಾವಣೆಗಳು.
 • ಹೃದಯಕ್ಕೆ ಸಂಬಂದಿಸಿದ ತೊಂದರೆಗಳು ಉಂಟಾಗುತ್ತವೆ.
 • ಚರ್ಮರೋಗಗಳು ಬರುತ್ತವೆ.
 • ಕಲುಷಿತ ಗಾಳಿಯಿಂದ ಜೀವಿತಾವಧಿಯು ಕಡಿಮೆಯಾಗುತ್ತದೆ.
 • ವಾಯು ಮಾಲಿನ್ಯದಿಂದ ಓಜೋನ್‌ ಪದರವು ತೆಳುವಾಗುತ್ದೆ. ಮತ್ತು ಕ್ಷೀಣಿಸುತ್ತದೆ.
 • ಕಣ್ಣಿನ ಸಮಸ್ಯಗಳು ಕೂಡ ಕಂಡುಬರುತ್ತವೆ.

ವಾಯು ಮಾಲ್ಯಿನ್ಯಕ್ಕೆ ಪರಿಹಾರಗಳು

 • ಗಿಡದಿಂದ ಉದುರಿದ ಎಲೆಗಳನ್ನು ಸುಡುವುದರ ಬದಲಾಗಿ ಗೊಬ್ಬರದ ಗುಂಡಿಗೆ ಹಾಕುವುದು.
 • ಅರಣ್ಯ ನಾಶವನ್ನು ತಡೆಯುವುದು ಮತ್ತು ಗಿಡಗಳನ್ನು ಹೆಚ್ಚಾಗಿ ನೆಡುವುದು.
 • ಡೀಸೆಲ್‌ ಮತ್ತು ಪೆಟ್ರೋಲ್‌ ಚಾಲಿತ ವಾಹನಗಳ ಬದಲಿಯಾಗಿ CNG ಮತ್ತು ಸೀಸರಹಿತ ಪೆಟ್ರೋಲ್‌ ಬಳಸುವುದು.
 • ಪ್ರಯಾಣ ಮಾಡುವಾಗ ಸಾರ್ವಜನಿಕ ವಾಹನಗಳನ್ನು ಹೆಚ್ಚಾಗಿ ಬಳಸುವದು.
 • ಒಂದು ಮನೆಗೆ ಮೂರು ನಾಲ್ಕು ವಾಹನಗಳ ಬದಲಿಯಾಗಿ ಒಂದು ಮನೆಗೆ ಒಂದೇ ವಾಹನವನ್ನು ಇಟ್ಟುಕೊಳ್ಳುವುದು.
 • ಪ್ಲಾಸ್ಟಿಕ್‌ ಬಳಕೆ ಕಡಿಮೆ ಮಾಡುವುದು.
 • ತುಂಬಾ ಹತ್ತಿರವಿರು ಸ್ಥಳಕ್ಕೆ ಹೋಗುವಾಗ ವಾಹನ ಬಳಕೆ ಮಾಡದೆ ನಡೆದುಕೊಂಡು ಹೋಗುವುದು.
 • ಮರು ಬಳಕೆಯಾಗುವ ವಸ್ತುಗಳನ್ನು ಬಳಸುವುದು.
 • ಹಾಗೆ ಕಲವು ಕಾನೂನು ಕ್ರಮಗಳನ್ನು ಜಾರಿಗೆ ತರುವುದು.

ಉಪಸಂಹಾರ

ನಮ್ಮ ಮುಂಬರುವ ಪೀಳಿಗೆಗೆ ಆರೋಗ್ಯವಂತ ವಾತಾವರಣವನ್ನು ಕೊಡುಗೆಯಾಗಿ ನೀಡಬೇಕು. ಅದಕ್ಕಾಗಿ ಯಾವುದೇ ಮಾಲಿನ್ಯ ವಾಗದಂತೆ ಎಚ್ಚರಿಕೆಯಿಂದ ಇರುವುದು. ಇದನ್ನು ನಿಯಂತ್ರಿಸುವುವುದು ಅಗತ್ಯವಾಗಿದೆ. ಇಲ್ಲದಿದ್ದರೆ ಭೂಮಿಯ ಮೇಲಿನ ಜೀವಿಗಳ ಕುರುಹುಗಳು ನಶಿಸಿದಂತಾಗುತ್ದೆ. ವಾಯು ಮಾಲಿನ್ಯದ ಬಗ್ಗೆ ಜನರಿಗೆ ತಿಳಿಸಿ ಜಾಗೃತಿಯನ್ನು ಮೂಡಿಸುವುದು. ಇದರ ಬಗ್ಗೆ ಕೆಲವು ಕ್ರಮಗಳನ್ನು ಕೈಗೊಂಡು ನಾವು ವಾಯು ಮಾಲಿನ್ಯವನ್ನು ನಿಯಂತ್ರಿಸಬಹುದು.

FAQ

ವಾಯು ಮಾಲ್ಯಿನ್ಯಕ್ಕೆ ಒಂದು ಪರಿಹಾರ ಕ್ರಮವನ್ನು ತಿಳಿಸಿ ?

ಡೀಸೆಲ್‌ ಮತ್ತು ಪೆಟ್ರೋಲ್‌ ಚಾಲಿತ ವಾಹನಗಳ ಬದಲಿಯಾಗಿ CNG ಮತ್ತು ಸೀಸರಹಿತ ಪೆಟ್ರೋಲ್‌ ಬಳಸುವುದು.

ವಾಯು ಮಾಲ್ಯಿನ್ಯಕ್ಕೆ ಒಂದು ಕಾರಣವನ್ನು ತಿಳಿಸಿ ?

ಗಾಳಿಯಲ್ಲಿರುವ ಹಾನಿಕಾರಕ ವಸ್ತುಗಳು ವಾಯು ಮಾಲಿನ್ಯಕ್ಕೆ ಕಾರಣವಾಗುತದೆ.

ಇತರೆ ಪ್ರಬಂಧಗಳು:

ಪರಿಸರ ಸಂರಕ್ಷಣೆ ಪ್ರಬಂಧ

ಬಾಲ ಕಾರ್ಮಿಕರ ಬಗ್ಗೆ ಪ್ರಬಂಧ

Leave your vote

Leave a Comment

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ