ಗ್ರಹಣದ ಬಗ್ಗೆ ಮಾಹಿತಿ 2022 chandra grahan information timings Chandra Grahan Mahiti Kannada
ಗ್ರಹಣದ ಬಗ್ಗೆ ಮಾಹಿತಿ

ಚಂದ್ರ ಗ್ರಹಣದ ಬಗ್ಗೆಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.
ಚಂದ್ರ ಗ್ರಹಣದ ಬಗ್ಗೆ ಸಂಕ್ಷಿಪ್ತವಾದ ಮಾಹಿತಿ
ಭಾರತದ ಜನರು ಈ ವರ್ಷದ ಕೊನೆಯ ಪೂರ್ಣ ಚಂದ್ರಗ್ರಹಣವಾಗಿದೆ. ಈ ಪೂರ್ಣ ಚಂದ್ರಗ್ರಹಣವು ಪೂರ್ವ ಭಾಗಗಳಲ್ಲಿ ಗೋಚರಿಸುತ್ತದೆ. ಆದರೆ ಭಾರತದ ಇತರ ಭಾಗಗಳಲ್ಲಿ ಭಾಗಶಃ ಗ್ರಹಣವು ಗೋಚರಿಸುತ್ತದೆ.
ಚಂದ್ರ ಗ್ರಹಣ ಎಂದರೆ :
ಸೂರ್ಯ, ಭೂಮಿ, ಚಂದ್ರ ಸರಳ ರೇಖೆಯಲ್ಲಿ ಬಂದಾಗ ಅಥವಾ ಸೂರ್ಯ ಮತ್ತು ಚಂದ್ರನ ಮಧ್ಯ ಭೂಮಿ ಬಂದಾಗ ಚಂದ್ರಗ್ರಹಣ ಸಂಭವಿಸುತ್ತದೆ.
ಚಂದ್ರ ಗ್ರಹಣವು ಯಾವ ದಿನದಂದು ಸಂಭವಿಸುತ್ತದೆ :
ಚಂದ್ರ ಗ್ರಹಣವು ಯಾವ ದಿನದಂದು ಸಂಭವಿಸುತ್ತದೆ ಹುಣ್ಣಿಮೆಯ ದಿನದಂದು ಸಂಭವಿಸುತ್ತದೆ.
ಚಂದ್ರ ಗ್ರಹಣದ ಪ್ರಕಾರಗಳು :
- ಪೂರ್ಣ ಚಂದ್ರ ಗ್ರಹಣ :
ಸೂರ್ಯನ ಬೆಳಕು ಭೂಮಿಯ ಮಧ್ಯದಲ್ಲಿ ಬರುವುದರಿಂದ ಚಂದ್ರ ಸಂಪೂರ್ಣವಾಗಿ ಕಾಣಿಸಿಕೊಳ್ಳಲು ವಿಫಲವಾಗುತ್ತದೆ. ಅದಕ್ಕೆ ಪೂರ್ಣ ಚಂದ್ರ ಗ್ರಹಣ ಎನ್ನುವರು. ಇದರ ಗರಿಷ್ಟ ಅವಧಿ ೧ ಗಂಟೆ ೪೦ ನಿಮಿಷವಾಗಿದೆ.
- ಪಾರ್ಶ್ವ ಚಂದ್ರ ಗ್ರಹಣ :
ಸೂರ್ಯನ ಬೆಳಕು ಭೂಮಿಯು ಮಧ್ಯದಲ್ಲಿ ಬರುವುದರಿಂದ ಚಂದ್ರನ ಅರ್ಧಭಾಗಕ್ಕೆ ಮಾತ್ರ ಕಾಣಿಸಿಕೊಂಡು ಇನ್ನು ಅರ್ಧಭಾಗಕ್ಕೆ ಕಾಣಿಸಿಕೊಳ್ಳಲು ವಿಫಲವಾಗುತ್ತದೆ. ಅದಕ್ಕೆ ಪಾರ್ಶ್ವ ಚಂದ್ರ ಗ್ರಹಣ ಎನ್ನುವರು.
2022 ರ ಚಂದ್ರ ಗ್ರಹಣದ ಬಗ್ಗೆ ಮಾಹಿತಿ
ವರ್ಷದ ಕೊನೆಯ ಚಂದ್ರಗ್ರಹಣವು ನವೆಂಬರ್ 8 ರಂದು ಮಂಗಳವಾರ ಸಂಭವಿಸಲಿದೆ. ಚಂದ್ರಗ್ರಹಣದ ಸಮಯದಲ್ಲಿ ಸೂತಕ ಅವಧಿಯು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಈ ಸಮಯದಲ್ಲಿ ಮಲಗುವುದು, ತಿನ್ನುವುದು ಮತ್ತು ಇತರ ಚಟುವಟಿಕೆಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ. ಭೂಮಿ, ಚಂದ್ರ ಮತ್ತು ಸೂರ್ಯನ ನಡುವಿನ ಈ ಕಣ್ಣಾಮುಚ್ಚಾಲೆಯು ಖಗೋಳ ವಿಜ್ಞಾನದಲ್ಲಿ ಆಸಕ್ತಿ ಹೊಂದಿರುವವರಿಗೆ ಯಾವಾಗಲೂ ಅಧ್ಯಯನದ ವಿಷಯವಾಗಿದೆ. ವರ್ಷದ ಕೊನೆಯ ಚಂದ್ರಗ್ರಹಣವಾದ ಇದರ ಸಮಯ, ಮಹತ್ವ ಮತ್ತು ಈ ಸಮಯದ ಪೂಜೆ ವಿಧಿ – ವಿಧಾನಗಳ ಕುರಿತು ನೋಡೋಣ.
ಚಂದ್ರ ಗ್ರಹಣ ಸಂಭವಿಸುವ ಸಮಯ
ಗ್ರಹಣ ಸ್ಪರ್ಶ – ಮಧ್ಯಾಹ್ನ 2.39
ಖಗ್ರಾಸಾರಂಭ – ಮಧ್ಯಾಹ್ನ 3.46
ಗ್ರಹಣ ಮಧ್ಯ – ಸಾಯಂಕಾಲ 4.29
ಖಗ್ರಾಸಾಂತ್ಯ – ಸಂಜೆ 5.12
ಗ್ರಹಣ ಮೋಕ್ಷ – ಸಂಜೆ 6.19
ಗ್ರಹಣದ ಸಂಧರ್ಭದಲ್ಲಿ ವಹಿಸಬೇಕಾದ ಎಚ್ಚರಿಕೆಗಳು
- ಗ್ರಹಣದ ಸಮಯದಲ್ಲಿ ಪ್ರಯಾಣವನ್ನು ನಿಷೇಧಿಸಲಾಗಿದೆ ಎಂದು ಪರಿಗಣಿಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಚಂದ್ರಗ್ರಹಣದ ಸಮಯದಲ್ಲಿ ಯಾವುದೇ ರೀತಿಯ ಪ್ರಯಾಣವನ್ನು ಮಾಡುವುದನ್ನು ತಪ್ಪಿಸಿ. ಹಾಗೂ ಇಂದು ೧ ಗಂಟೆಯ ಒಳಗೆ ನೀರನ್ನು ಕುಡಿಯಬಹುದು, ನಂತರ ೬. ೩೦ ರ ನಂತರ ನೀರನ್ನು ಕುಡಿಯುವುದು ಸೂಕ್ತ.
- ಚಂದ್ರಗ್ರಹಣದ ಸೂತಕ ಕಾಲದಲ್ಲಿ ಸಾಧ್ಯವಾದಷ್ಟು ಮನೆಯೊಳಗೆ ಇರಿ. ಅದರಲ್ಲೂ ಗರ್ಭಿಣಿಯರು ಗ್ರಹಣದ ಸಮಯದಲ್ಲಿ ಮನೆಯಿಂದ ಹೊರಗೆ ಹೋಗಬಾರದು.
- ಚಂದ್ರಗ್ರಹಣವನ್ನು ಬರಿಗಣ್ಣಿನಿಂದ ನೋಡಬಾರದು. ಅದಾಗ್ಯೂ, ಗ್ರಹಣವನ್ನು ನೋಡುವ ಉಪಕರಣಗಳ ವಿಶೇಷ ಕಾಳಜಿಯೊಂದಿಗೆ ಗ್ರಹಣವನ್ನು ನೋಡಬಹುದು.
- ಗ್ರಹಣದ ಮೊದಲು ಮತ್ತು ಗ್ರಹಣ ಮುಗಿದ ನಂತರ ಖಂಡಿತವಾಗಿಯೂ ಸ್ನಾನ ಮಾಡಬೇಕು. ಇದು ಗ್ರಹಣದ ಋಣಾತ್ಮಕ ಪರಿಣಾಮವನ್ನು ಬೀರುವುದಿಲ್ಲ ಎನ್ನುವ ನಂಬಿಕೆಯಿದೆ.
- ಗ್ರಹಣದ ಸೂತಕ ಕಾಲದಲ್ಲಿ ಏನನ್ನೂ ತಿನ್ನುವುದು ಅಥವಾ ಕುಡಿಯುವುದನ್ನು ತಪ್ಪಿಸಬೇಕು. ಮನೆಯಲ್ಲಿ ಹಾಲು ಉಳಿದಿದ್ದರೆ ಕುಶ ಅಥವಾ ತುಳಸಿ ಎಲೆಗಳನ್ನು ಅದರಲ್ಲಿ ಹಾಕಿಡಬೇಕು.
- ಗ್ರಹಣ ಕಾಲದಲ್ಲಿ ದೇವರನ್ನು ಮುಟ್ಟಬಾರದು. ಅಂತಹ ಪರಿಸ್ಥಿತಿಯಲ್ಲಿ, ಮನೆಯಲ್ಲಿ ಪೂಜಾ ಕೋಣೆಯಿದ್ದರೆ, ಅದನ್ನು ಗ್ರಹಣದ ಮೊದಲು ಶುದ್ಧವಾದ ಬಟ್ಟೆಯಿಂದ ಮುಚ್ಚಬೇಕು. ದೇವಾಲಯಗಳಲ್ಲಿಯೂ ಈ ಸಮಯದಲ್ಲಿ ಬಾಗಿಲನ್ನು ಮುಚ್ಚಲಾಗುತ್ತದೆ.
- ಮನೆಯಲ್ಲಿ ತಯಾರಿಸಿದ ಆಹಾರವನ್ನು ಗ್ರಹಣಕ್ಕೆ ಮೊದಲು ಬಿಟ್ಟರೆ, ಗ್ರಹಣದ ಕೊನೆಯಲ್ಲಿ ಅದನ್ನು ತಿನ್ನಬಾರದು. ಗ್ರಹಣ ಮುಗಿದ ನಂತರ ಹೊಸ ಆಹಾರವನ್ನು ಬೇಯಿಸಬೇಕು.
FAQ
ಚಂದ್ರ ಗ್ರಹಣ ಎಂದರೇನು ?
ಸೂರ್ಯ, ಭೂಮಿ, ಚಂದ್ರ ಸರಳ ರೇಖೆಯಲ್ಲಿ ಬಂದಾಗ ಅಥವಾ ಸೂರ್ಯ ಮತ್ತು ಚಂದ್ರನ ಮಧ್ಯ ಭೂಮಿ ಬಂದಾಗ ಚಂದ್ರಗ್ರಹಣ ಸಂಭವಿಸುತ್ತದೆ.
ಗ್ರಹಣದ ಸಂಧರ್ಭದಲ್ಲಿ ವಹಿಸಬೇಕಾದ ಎಚ್ಚರಿಕೆಗಳನ್ನು ತಿಳಿಸಿ ?
ಚಂದ್ರಗ್ರಹಣದ ಸೂತಕ ಕಾಲದಲ್ಲಿ ಸಾಧ್ಯವಾದಷ್ಟು ಮನೆಯೊಳಗೆ ಇರಿ. ಅದರಲ್ಲೂ ಗರ್ಭಿಣಿಯರು ಗ್ರಹಣದ ಸಮಯದಲ್ಲಿ ಮನೆಯಿಂದ ಹೊರಗೆ ಹೋಗಬಾರದು,ಚಂದ್ರಗ್ರಹಣವನ್ನು ಬರಿಗಣ್ಣಿನಿಂದ ನೋಡಬಾರದು. ಅದಾಗ್ಯೂ, ಗ್ರಹಣವನ್ನು ನೋಡುವ ಉಪಕರಣಗಳ ವಿಶೇಷ ಕಾಳಜಿಯೊಂದಿಗೆ ಗ್ರಹಣವನ್ನು ನೋಡಬಹುದು ಇನ್ನು ಮುಂತಾದವುಗಳು
ಇತರೆ ವಿಷಯಗಳು :