ಕನಕದಾಸರ ಜೀವನ ಚರಿತ್ರೆ | Kanakadasa Biography in Kannada

ಕನಕದಾಸರ ಜೀವನ ಚರಿತ್ರೆ Kanakadasa Biography jeevana charitre information in Kannada

ಕನಕದಾಸರ ಜೀವನ ಚರಿತ್ರೆ

Kanakadasa Biography in Kannada
ಕನಕದಾಸರ ಜೀವನ ಚರಿತ್ರೆ

ಈ ಲೇಖನಿಯಲ್ಲಿ ಕನಕದಾಸರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಕನಕದಾಸರು

ಕನ್ನಡಭಾಷೆಯ ಪ್ರಸಿದ್ಧ ಕೀರ್ತನಾಕಾರರು, ಪ್ರಸಿದ್ದವಾದ ಸಾಹಿತಿಯೂ ಕೂಡ ಆಗಿದ್ದರು. ಪುರಂದರದಾಸರೊ೦ದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕೊಡುಗೆಯನ್ನ ನೀಡಿದವರು. ಕನಕದಾಸರು ಮತ್ತು ಪುರಂದರದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆಗಳಿದ್ದಂತೆ. ಕನಕದಾಸರು 5 ಶತಮಾನಗಳ ಹಿಂದೆ ಕರ್ನಾಟಕದ ಪುಣ್ಯಭೂಮಿಯಲ್ಲಿ ಬದುಕಿದ್ದ ಕವಿ. ಇವರು ನಮ್ಮ ಈ ನೆಲಕ್ಕೆ ಸೇರಿದವರು ಎಂದು ಹೆಮ್ಮೆಯಿಂದ ಹೇಳಬಹುದು. ಇವರು ತತ್ವಜ್ಞಾನಿ, ಸಂಗೀತಗಾರ, ಸಂಯೋಜಕ, ಸಮಾಜ ಸುಧಾರಕ ಮತ್ತು ಸಂತರಾಗಿದ್ದರು. ಅವರು 1509 ಮತ್ತು 1609 ನಡುವೆ 98 ವರ್ಷಗಳ ಕಾಲ ಬದುಕಿದ್ದರು. ಅವರು ಉಪಭಾಷೆಗಳ ರೂಪದಲ್ಲಿ ಅಂದರೆ ಪ್ರಾದೇಶಿಕ ಮಾತಿನ ಮಾದರಿ ಅಥವಾ ವಿವಿಧ ಭಾಷೆಯಲ್ಲಿ ಕೀರ್ತನೆಗಳು ಮತ್ತು ವ್ಯಾಭೋಗ ಸಂಯೋಜನೆಗಳಿಗೆ ಹೆಸರುವಾಸಿಯಾಗಿದ್ದಾರೆ . ಅವರು ತಂಬೂರಿ ಮತ್ತು ತಾಳ ಹಿಡಿದು ಬೀದಿಗಳಲ್ಲಿ ಹಾಡುತ್ತಿದ್ದರು. ಮತ್ತು ತಮ್ಮ ಸುಮಧುರ ಸಂಗೀತದ ಮೂಲಕ ಕಣ್ಣು ತೆರೆಯುವ ತಾತ್ವಿಕ ಪರಿಕಲ್ಪನೆಗಳನ್ನು ತಿಳಿಸುತ್ತಿದ್ದರು. ಕರ್ನಾಟಕ ಸರ್ಕಾರವು 2008 ರಿಂದ ಕನಕದಾಸ ಜಯಂತಿಯನ್ನು ಆಚರಿಸುತ್ತಿದೆ.

ಬಾಲ್ಯ ಜೀವನ

ಶ್ರೀ ಕನಕದಾಸರು (೧೫೦೯-೧೬೦೯) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಪ್ರಮುಖವಾದ ವ್ಯಕ್ತಿ. ಭಕ್ತಿಪಂಥದ ಮುಖ್ಯ ಹರಿದಾಸರಲ್ಲಿಇವರು ಒಬ್ಬರು. ಇವರ ಊರು ಕಾಗಿನೆಲೆಯ ಬಾಡಾ ಎಂಬ ಗ್ರಾಮ. ಪ್ರಸ್ತುತ ಹಾವೇರಿ ಜಿಲ್ಲೆಯಲ್ಲಿದೆ. ಇವರ ತಾಯಿ -ಬಚ್ಚಮ, ತಂದೆ – ಬೀರಪ್ಪ. ಕನಕದಾಸರು ಕುರುಬ ವಂಶಕ್ಕೆ ಸೇರಿದವರು. ಕಾಗಿನೆಲೆಯ ಆದಿಕೇಶವನ ಭಕ್ತರಾದ ಕನಕದಾಸರು ಜಾತಿಪದ್ಧತಿಯ ತಾರತಮ್ಯಗಳನ್ನು ಅಲ್ಲಗಳೆದರು. ಕನಕದಾಸರು ಶ್ರೀ ವ್ಯಾಸರಾಯರ ಮೆಚ್ಚಿನ ಶಿಷ್ಯರು. ಇವರ ಅಂಕಿತ ನಾಮ- ಕಾಗಿನೆಲೆ ಆದಿಕೇಶವ. ವ್ಯಾಸರಾಯದಿಂದ ಮಧ್ವ ತತ್ವಶಾಸ್ತ್ರವನ್ನು ಕಲಿತು, ಅದನ್ನು ಒಪ್ಪಿಕೊಂಡರು.

ಶ್ರೀ ಕೃಷ್ಣನ ಭಕ್ತ ಕನಕದಾಸರು

ಕನಕದಾಸರು ಉಡುಪಿ ಶ್ರೀ ಕೃಷ್ಣನ ಭಕ್ತರು. ಅನೇಕರ ನಂಬಿಕೆಯಂತೆ ಉಡುಪಿಯ ದೇವಸ್ಥಾನದಲ್ಲಿ ಅವರಿಗೆ ಪ್ರವೇಶ ದೊರೆಯದೆ ಹೋದಾಗ ದೇವಸ್ಥಾನದ ಹಿಂದೆ ನಿಂತು ಹಾಡ ತೊಡಗಿದರಂತೆ ,”ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ” ಎಂದಾಗ ಆಗ ಹಿಂಭಾಗದ ಗೋಡೆ ಒಡೆದು ಕೃಷ್ಣನ ವಿಗ್ರಹ ಹಿಮ್ಮುಖವಾಗಿ ತಿರುಗಿತಂತೆ. ಈಗಲೂ ಉಡುಪಿ ಕೃಷ್ಣನ ದೇವಸ್ಥಾನದ ಹಿಂದುಗಡೆಯ ಗೋಡೆಯಲ್ಲಿರುವ ಬಿರುಕಿನಲ್ಲಿ ಶ್ರೀಕೃಷ್ಣನ ಕಾಣಬಹುದು. ಇಲ್ಲಿ ಒಂದು ಕಿಟಕಿಯನ್ನು ನಿರ್ಮಿಸಿ ಅದನ್ನು ಕನಕನ ಕಿಂಡಿ ಎಂದು ಕರೆಯಲಾಗಿದೆ. ಕನಕದಾಸರು ದಂಡನಾಯಕರಾಗಿದ್ದು ಯುದ್ದವೂಂದರಲ್ಲಿ ಸೋತ ಅವರಿಗೆ ಉಪರತಿ/ವೈರಾಗ್ಯ ಉಂಟಾಗಿ ಹರಿ ಭಕ್ತರಾದರಂತೆ. ಕನಕದಾಸರ ಕೀರ್ತನೆಗಳು ಕಾಗಿನೆಲೆಯ ಆದಿಕೇಶವನಿಗೆ ಅರ್ಪಿತವಾಗಿರುವುದನ್ನು ಗಮನಿಸಬಹುದು.

ಕನಕದಾಸರ ವಚನಗಳು

  • “ಜಪವ ಮಾಡಿದರೇನು,

ತಪವ ಮಾಡಿದರೇನು,

ವಿಪರೀತ ಕಪಟಗುಣವುಳ್ಳವರು”

  • “ಯಾವಾಗ ನಿಮ್ಮಲ್ಲಿರುವ ʼನಾನುʼ

ಎಂಬ ಅಹಂ ನಿಮ್ಮನ್ನು ಬಿಟ್ಟು ಹೋಗುತ್ತದೆಯೋ

ಅವತ್ತು ನೀವು ಮೋಕ್ಷಕ್ಕೆ ಅರ್ಹರಾಗುತ್ತೀರಿ” ಇನ್ನು ಮುಂತಾದ ವಚನಗಳಿವೆ.

ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆಗಳು

ಕನಕದಾಸರು ಸಾಹಿತ್ಯದ ವಿವಿಧ ಪ್ರಕಾರಗಳಾದ ಕೀರ್ತನೆಗಳು, ಸುಳಾದಿಗಳು, ಉಗಾಭೋಗಗಳು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿರುವುದಲ್ಲದೆ, ಸಂಗೀತ ಪ್ರಪಂಚಕ್ಕೆ ತನ್ನದೇ ಆದಂತಹ ಕೊಡುಗೆಯನ್ನು ನೀಡಿದ್ದಾರೆ. ಸುಮಾರು 316 ಕೀರ್ತನೆಗಳು ಹಾಗೂ ಇನ್ನಿತರ ಸಾಹಿತ್ಯ ಮಾತ್ರ ಲಭ್ಯವಾಗಿರುವುದನ್ನು ಕಾಣಬಹುದಾಗಿದೆ. ಇವರ ಮುಖ್ಯ ಕಾವ್ಯಕೃತಿಗಳು

  • ಮೋಹನತರಂಗಿಣಿ
  • ನಳಚರಿತ್ರೆ
  • ರಾಮಧಾನ್ಯ ಚರಿತ
  • ಹರಿಭಕ್ತಿಸಾರ ಇನ್ನು ಮುಂತಾದವುಗಳಿಗೆ ತಮ್ಮ ಕೊಡುಗೆಯನ್ನ ನೀಡಿದ್ದಾರೆ.

ಕನಕದಾಸರು ಮರಣ

ಕನಕದಾಸರು ೧೬೦೯ ರಂದು ನಿಧನರಾದರು.

FAQ

ಕನಕದಾಸರು ಎಷ್ಟನೇ ಶತಮಾನದಲ್ಲಿದ್ದವರು ?

೧೫ \ ೧೬ ನೇ

ಕನಕದಾಸರ ಕೃತಿಗಳನ್ನು ತಿಳಿಸಿ ?

ಮೋಹನ ತರಂಗಿಣಿ, ನಳಚರಿತೆ, ಹರಿಭಕ್ತಿಸಾರ, ರಾಮಧ್ಯಾನ ಚರಿತೆ ಇನ್ನು ಮುಂತಾದವುಗಳು.

ಕನಕದಾಸರ ಜಯಂತಿಯನ್ನು ಯಾವ ವರ್ಷದಿಂದ ಆಚರಿಸಲಾಯಿತು ?

೨೦೦೮ ರಿಂದ ಆಚರಿಸಲಾಯಿತು.

ಕನಕದಾಸರು ಎಷ್ಟರಲ್ಲಿ ಮರಣ ಹೊಂದಿದರು ?

ಕನಕದಾಸರು ೧೬೦೯ ರಂದು ಮರಣ ಹೊಂದಿದರು.

ಇತರೆ ಪ್ರಬಂಧಗಳು:

ಕಿತ್ತೂರು ರಾಣಿ ಚೆನ್ನಮ್ಮ ಬಗ್ಗೆ ಪ್ರಬಂಧ

ಗ್ರಂಥಾಲಯದ ಮಹತ್ವ ಪ್ರಬಂಧ

Leave a Comment