ಬುದ್ಧನ ಜೀವನ ಚರಿತ್ರೆ ಕನ್ನಡ | Biography of Buddha in Kannada

ಬುದ್ಧನ ಜೀವನ ಚರಿತ್ರೆ ಕನ್ನಡ Buddha Jeevana Charitre Biography information in Kannada

ಬುದ್ಧನ ಜೀವನ ಚರಿತ್ರೆ ಕನ್ನಡ

Biography of Buddha in Kannada
ಬುದ್ಧನ ಜೀವನ ಚರಿತ್ರೆ ಕನ್ನಡ

ಗೌತಮ ಬುದ್ಧನ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಗೌತಮ ಬುದ್ಧ

ಬುದ್ಧ, ಸಿದ್ಧಾರ್ಥ ಗೌತಮ ಎಂಬ ಹೆಸರಿನೊಂದಿಗೆ ಜನಿಸಿದರು, ಒಬ್ಬ ಶಿಕ್ಷಕ, ತತ್ವಜ್ಞಾನಿ ಮತ್ತು ಆಧ್ಯಾತ್ಮಿಕ ನಾಯಕ, ಅವರನ್ನು ಬೌದ್ಧ ಧರ್ಮದ ಸ್ಥಾಪಕ ಎಂದು ಪರಿಗಣಿಸಲಾಗಿದೆ. ಅವರು ಆಧುನಿಕ-ದಿನದ ನೇಪಾಳ ಮತ್ತು ಭಾರತದ ಗಡಿಯ ಸುತ್ತಲಿನ ಪ್ರದೇಶದಲ್ಲಿ ವಾಸಿಸುತ್ತಿದ್ದರು ಮತ್ತು ಕಲಿಸಿದರು. ಬುದ್ಧ ಎಂಬ ಹೆಸರಿನ ಅರ್ಥ “ಎಚ್ಚರಗೊಂಡವನು” ಅಥವಾ “ಪ್ರಬುದ್ಧನಾದವನು“. ಬುದ್ಧನು ವಾಸ್ತವವಾಗಿ ಅಸ್ತಿತ್ವದಲ್ಲಿದ್ದನೆಂದು ವಿದ್ವಾಂಸರು ಒಪ್ಪಿಕೊಂಡರೂ, ಅವನ ಜೀವನದ ನಿರ್ದಿಷ್ಟ ದಿನಾಂಕಗಳು ಮತ್ತು ಘಟನೆಗಳು ಇನ್ನೂ ಚರ್ಚೆಯಾಗುತ್ತಿವೆ. ಅವರ ಜೀವನದ ಅತ್ಯಂತ ವ್ಯಾಪಕವಾಗಿ ತಿಳಿದಿರುವ ಕಥೆಯ ಪ್ರಕಾರ, ವರ್ಷಗಳ ಕಾಲ ವಿಭಿನ್ನ ಬೋಧನೆಗಳನ್ನು ಪ್ರಯೋಗಿಸಿದ ನಂತರ, ಮತ್ತು ಅವುಗಳಲ್ಲಿ ಯಾವುದನ್ನೂ ಸ್ವೀಕಾರಾರ್ಹವಲ್ಲವೆಂದು ಕಂಡುಕೊಂಡ ನಂತರ, ಸಿದ್ಧಾರ್ಥ ಗೌತಮ ಒಂದು ಮರದ ಕೆಳಗೆ ಆಳವಾದ ಧ್ಯಾನದಲ್ಲಿ ಅದೃಷ್ಟದ ರಾತ್ರಿಯನ್ನು ಕಳೆದರು. ಅವರ ಧ್ಯಾನದ ಸಮಯದಲ್ಲಿ, ಅವರು ಹುಡುಕುತ್ತಿದ್ದ ಎಲ್ಲಾ ಉತ್ತರಗಳು ಸ್ಪಷ್ಟವಾದವು ಮತ್ತು ಅವರು ಪೂರ್ಣ ಅರಿವನ್ನು ಸಾಧಿಸಿದರು, ಆ ಮೂಲಕ ಬುದ್ಧರಾದರು.

ಬುದ್ಧನ ಆರಂಭಿಕ ಜೀವನ

ಗೌತಮ ಬುದ್ದನು (ಕ್ರಿ. ಪೂ ೫೫೭-೪೪೭) ಗೌತಮ ಬುದ್ಧನ ಹುಟ್ಟು ಸ್ಥಳ ಲುಂಬಿನಿ ಎಂಬ ಗ್ರಾಮ. ತಂದೆ ಶುದ್ಧೋಧನ ತಾಯಿ ಮಾಯದೇವಿ. ಮೊದಲ ಹೆಸರು ಸಿದ್ದಾರ್ಥ.ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡದನು. ಬುದ್ದನನ್ನು ಗೌತಮಿ ಎಂಬ ಸ್ತ್ರೀಯೊಬ್ಬಳು ಸಾಕುತ್ತಿದ್ದಳು. ಆದುದರಿಂದ ಸಿದ್ದಾರ್ಥನನ್ನು ʼಗೌತಮʼ ನೆಂದು ಕರೆಯಲ್ಪಡುತ್ತಾರೆ. ಶುದ್ದೋಧನ ಮಗ ಚಕ್ರವರ್ತಿಯಾಗಬೇಕು ಎಂಬ ಅಶಯದಿಂದ ಅವನಿಗೆ ದುಃಖದ ಸನ್ನಿವೇಶಗಳೇ ಕಾಣದಂತಹ ಕೃತಕ ವಾತಾವರಣವನ್ನು ಸೃಷ್ಟಿಸಿ, ಅವನನ್ನು ಬೆಳೆಸುತ್ತಾನೆ. ಯಶೋಧರೆ ಎಂಬ ಸುಂದರ ಕನ್ಯೆಯೊಂದಿಗೆ ಅವನ ವಿವಾಹವನ್ನು ಮಾಡುತ್ತಾರೆ. ಗೌತಮನಿಗೆ ʼರಾಹುಲʼ ಎಂಬ ಮಗನು ಹುಟ್ಟುತ್ತಾನೆ. ಮಗುವಿಗೆ ವರ್ಷ ತುಂಬುವುದರೊಳಗೆ ಸಿದ್ದಾರ್ಥನಿಗೆ ದುಃಖದ ʼದರ್ಶನʼವಾಗುತ್ತದೆ. ಇಡೀ ಜಗತ್ತು ಘೋರ ದುಃಖವನ್ನು ಕಂಡು ಬೆಚ್ಚಿಬಿದ್ದನು ಸಿದ್ದಾರ್ಥ, ಸೇವಕ ಚೆನ್ನನೊಡನೆ ಜಗವೆಲ್ಲಾ ಮಲಗಿರುವಾಗ ಬುದ್ದನಾಗಲೂ ಹೊರಟನು. ದುಃಖಕ್ಕೆ ಶಾಶ್ವತ ಪರಿಹಾರವನ್ನು ಕಂಡು ಹಿಡಿಯಲು ಪ್ರಯತ್ನಿಸುತ್ತಾನೆ.

ಬುದ್ಧನು ಕಂಡ ದೃಶ್ಯಗಳು

ಬುದ್ದನು ರಾಜ ಅರಮನೆಯಲ್ಲಿ ಸುಖದ ಜೀವನವನ್ನು ಕಂಡಿದ್ದನು. ತಾನು ಒಬ್ಬ ಮಹಾ ಯೋಗಿಯಾಗಬೇಕು, ಜ್ಞಾನಿಯಾಗಬೇಕೆಂಬ ತುಡಿತ ಇದ್ದುದರಿಂದ ಗೌತಮ ಬುದ್ದನು ಈ ವೈಭವದ ಮತ್ತು ವೈಭೋಗದ ಜೀವನದಿಂದ ಮುಕ್ತಿ ಪಡೆಯಲು ಹಾತೊರೆಯುತ್ತಾನೆ. ಅಲ್ಲದೇ ತಾನಿರುವ ಅರಮನೆಯ ಹೊರಗೆ ಏನಿದೆ ಎಂಬ ಕೌತುಕವೂ ಅವನಿಗಿತ್ತು. ಹೀಗಿರುವಾಗ ಒಂದು ದಿನ ತನ್ನ೨೯ ನೇ ವಯಸ್ಸಿನಲ್ಲಿ ವಾಯುವಿಹಾರಕ್ಕಾಗಿ ಅರಮನೆಯಿಂದ ಹೊರಟು. ಹೊರಗೆ ಬಂದು ಅಲ್ಲಿ ವಿಚಾರಗಳನ್ನು ನೋಡಿ ಜೀವನದಲ್ಲಿ ತನಗೆ ಅರಿವಿಲ್ಲದೇ ಮೊದಲ ಬಾರಿಗೆ ಜುಗುಪ್ಸೆಗೊಳ್ಳುತ್ತಾನೆ. ಅದೇನೆಂದರೆ ಓರ್ವ ಮುದುಕ, ರೋಗಿ, ಶವಯಾತ್ರೆ ಹಾಗೂ ಅಲೆದಾಡುವ ಓರ್ವ ತಪಸ್ವಿಯನ್ನು ಕಂಡು ದಿವ್ಯದರ್ಶನವಾಗುತ್ತದೆ. ಈ ನಾಲ್ಕು ವಿಚಾರಗಳನ್ನು ಕಂಡ ಕೊಡಲೇ ಗೌತಮ ಕುತೂಹಲಕ್ಕೆ ಒಳಗಾಗುತ್ತಾನೆ. ನಂತರ ಅರಮನೆಗೆ ಹಿಂತಿರುಗಿ ನಿಜ ತಿಳಿದುಕೊಳ್ಳಲು ಗುರುಗಳ ಹುಡುಕಾಟ ಮಾಡಲು ಬಹಳಷ್ಟು ಕಷ್ಟಪಡುತ್ತಾನೆ. ಆದರೆ ಅದು ಕೂಡ ಗೌತಮನಿಗೆ ಜೀವನದ ಬಗೆಗೆ ಸತ್ಯ ವಿಚಾರಗಳನ್ನು ತಿಳಿಸದೇ ಜೀವನದ ಸತ್ಯತೆಯನ್ನು ತಳಿಯುವುದಕ್ಕಾಗಿ ಬುದ್ದನು ತನ್ನ ಎಂಭತ್ತು ವರ್ಷದವರೆಗೆ ಪ್ರಪಂಚ ಪರ್ಯಟನೆ ಮಾಡುತ್ತಾನೆ. ಅಲ್ಲದೇ ಪರ್ಯಟನೆಯ ಜೊತೆಜೊತೆಗೆ ಸತ್ಯ ದರ್ಶನದ ಬಗೆಗೆ ಜನರಿಗೆ ಭೋಧನೆಗಳನ್ನು ನಿರಂತವಾಗಿ ಮಾಡುತ್ತಾನೆ. ಬಡವ ಹಾಗೂ ದುರ್ಬಲರ ಸೇವೆಯನ್ನು ಮಾಡುತ್ತಾನೆ. ವಿಮೋಚನ ಕೆಲಸ ಕಾರ್ಯಗಳನ್ನು ಮಾಡಬೇಕು. ಹಾಗೂ ಈ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ ಹಾಗಾಗಿ ನಾವು ಪರರಿಗೆ ಹಾಗೂ ಮಾನವೀಯತೆಗೆ ಬೆಲೆ ಕೊಡಬೇಕು ಎಂಬುವುದು ಗೌತಮ ಬುದ್ದನು ಭೋಧಿಸಿದ ಮುಖ್ಯ ತತ್ವಗಳು.

ಮಹಾಪರಿತ್ಯಾಗ

ನಾಲ್ಕು ವಿಚಾರಗಳನ್ನು ಕಂಡ ನಂತರ ಬುದ್ಧನಿಗೆ ಜೀವನದ ಸತ್ಯತೆಯನ್ನು ತಿಳಿದುಕೊಳ್ಳುವ ಕುತೂಹಲ ಆತನ ಮನಸ್ಸನ್ನು ಬೆಂಬಿಡದೆ ಕಾಡಲಾರಂಭಿಸುತ್ತದೆ. ಹೀಗಾಗಿ ಜೀವನದ ಬಗೆಗೆ ಸಾಕ್ಷಾತ್ಕಾರ ಮಾಡಲು ತಾನು ಸನ್ಯಾಸಿಯಾಗುವ ವಿಚಾರವನ್ನು ತನ್ನ ತಂದೆ ಶುದ್ಧೋದನ ಹಾಗೂ ಮಡದಿ ಯಶೋಧರೆಗೆ ತಿಳಿಸಿ ಮನ‌ ಒಲಿಸಲು ಪ್ರಯತ್ನಿಸುತ್ತಾನೆ.ಅಲ್ಲದೇ ಆತನ ಮಗ ರಾಹುಲನು ಕೂಡ ತನ್ನ ಏಳನೇಯ ವಯಸ್ಸಿಗೆ ಸನ್ಯಾಸಿಯಾಗಲು ತಂದೆಯೊಂದಿಗೆ ತೆರಳುತ್ತಾನೆ.

ಬುದ್ಧನ ಜೀವನಕ್ಕೆ ಸಂಬಂಧಿಸಿದ ಘಟನೆಗಳು ಮತ್ತು ಸಂಕೇತಗಳು

  • ಜನನ – ಕಮಲ
  • ಮನೆ ತೊರೆದಿದ್ದು – ಕುದುರೆ ಅಥವಾ ಕಂಥಕ
  • ತಪಸ್ಸು ಆಚರಿಸಿದ್ದು – ಭೋಧಿವೃಕ್ಷ ಅಥವಾ ಅರಳಿ ಮರ
  • ಪ್ರಥಮ ಉಪದೇಶ – ಧರ್ಮಚಕ್ರ
  • ಮರಣ – ಸ್ತೂಪಗಳು

ಪ್ರಪಂಚ ಪರ್ಯಟನೆ ಮತ್ತು ಭೋಧನೆಗಳು

ಜೀವನದ ಸತ್ಯತೆಯನ್ನು ತಿಳಿಯುವುದಕ್ಕಾಗಿ ಬುದ್ಧನು ತನ್ನ ಎಂಭತ್ತು ವರ್ಷದವರೆಗೆ ಪ್ರಪಂಚ ಪರ್ಯಟನೆ ಮಾಡುತ್ತಾನೆ. ಅಲ್ಲದೇ ಪರ್ಯಟನೆಯ ಜೊತೆಜೊತೆಗೆ ಸತ್ಯ ದರ್ಶನದ ಬಗೆಗೆ ಜನರಿಗೆ ಭೋಧನೆಗಳನ್ನು ನಿರಂತರವಾಗಿ ಮಾಡುತ್ತಾನೆ ಹಾಗೂ ಬಡವ ಹಾಗೂ ದುರ್ಬಲರ ಸೇವೆಯನ್ನು ಮಾಡುತ್ತಾನೆ.ವಿಮೋಚನೆಗಾಗಿ ಕೆಲಸ ಕಾರ್ಯಗಳನ್ನು ಮಾಡಬೇಕು ಹಾಗೂ ಈ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ ಹಾಗಾಗಿ ನಾವು ಪರರಿಗೆ ಹಾಗೂ ಮಾನವೀಯತೆಗೆ ಬೆಲೆ ಕೊಡಬೇಕು ಎಂಬುವುದು ಗೌತಮ ಬುದ್ಧನು ಭೋಧಿಸಿದ ಮುಖ್ಯ ತತ್ವಗಳು. ಬುದ್ಧನು ಇಹ ಲೋಕವನ್ನು ತ್ಯಜಿಸುವಾಗ ಎಂಭತ್ತು ವರುಷಗಳಾಗಿದ್ದರೂ ಕೂಡ ಯಾವುದೇ ದಣಿವಿಲ್ಲದೇ ಸತ್ಯ ದರ್ಶನಕ್ಕಾಗಿ ನಿರಂತವಾದ ಪ್ರಪಂಚ ಪರ್ಯಟನೆ ಮಾಡುತ್ತಾನೆ. ಅಲ್ಲದೇ ಕೊನೆಗೆ ತನ್ನ ಅನುಯಾಯಿಗಳಿಗೆ ಈ ಜಗತ್ತಿನಲ್ಲಿ ಯಾವುದೂ ಶಾಶ್ವತ ಅಲ್ಲ. ಹಾಗಾಗಿ ನಿಮ್ಮ ವಿಮೋಚನೆಗಾಗಿ‌ ಮಾತ್ರ ಕೆಲಸ ಮಾಡಿ ಎಂಬ ಕೊನೆಯ ನುಡಿಗಳನ್ನು ನೀಡಿ ಲೋಕದಲ್ಲಿ ಅಜರಾಮರನಾಗುತ್ತಾನೆ.

ಬುದ್ಧನ ಮರಣ

ಗೌತಮ ಬುದ್ಧ ಉತ್ತರದ ಗಂಗಾನದಿಯ ತೀರದವರೆಗೂ ಸಂಚರಿಸಿ ಬೌದ್ಧ ಧರ್ಮವನ್ನು ಪ್ರಚಾರ ಮಾಡಿ ಕ್ರಿ. ಶಕ ೪೮೭ ರಲ್ಲಿ ಉತ್ತರ ಪ್ರದೇಶದ ಗೋರಖಪುರ ಜಿಲ್ಲೆಯ ಕುಶಿನಗರದಲ್ಲಿ ಮರಣವನ್ನು ಹೊಂದಿದರು.

FAQ

ಗೌತಮ ಬುದ್ಧನ ಮೊದಲ ಹೆಸರೇನು ?

ಸಿದ್ದಾರ್ಥ

ಗೌತಮ ಬುದ್ಧನು ಮಹಾ ಪರಿನಿರ್ವಾಣವನ್ನು ಹೊಂದಿದ್ದು ಎಲ್ಲಿ ?

ಕುಶಿನಗರ


ಗೌತಮ ಬುದ್ಧನು ಎಲ್ಲಿ ಜನಿಸಿನು ?

ನೇಪಾಳದ ಲುಂಬಿನಿಯಲ್ಲಿ ಜನಿಸಿದನು.

ಗೌತಮ ಬುದ್ಧನ ಸಾಕು ತಾಯಿಯ ಹೆಸರೇನು ?

ಪ್ರಜಾಪತಿ ಗೌತಮಿ

ಇತರೆ ವಿಷಯಗಳು :

ಸುಭಾಷ್ ಚಂದ್ರ ಬೋಸ್ ಅವರ ಬಗ್ಗೆ ಪ್ರಬಂಧ

ರಾಷ್ಟ್ರೀಯ ಏಕತಾ ದಿನಾಚರಣೆ ಬಗ್ಗೆ ಭಾಷಣ

Leave a Comment