ತಾಳಿದವನು ಬಾಳಿಯಾನು ಗಾದೆ ಮಾತು ವಿವರಣೆ | Talidava Baliyanu Proverb Explanation in Kannada

ತಾಳಿದವನು ಬಾಳಿಯಾನು ಗಾದೆ ಮಾತು ವಿವರಣೆ Talidava Baliyanu Proverb Explanation Talidavnu Baliyanu Gade Vivrne in Kannada

ತಾಳಿದವನು ಬಾಳಿಯಾನು ಗಾದೆ ಮಾತು ವಿವರಣೆ

ತಾಳಿದವನು ಬಾಳಿಯಾನು ಗಾದೆ ಮಾತು ವಿವರಣೆ

ತಾಳಿದವನು ಬಾಳಿಯಾನು ಗಾದೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ತಾಳಿದವನು ಬಾಳಿಯಾನು ಗಾದೆ

ತಾಳಿದವನು ಬಾಳಿಯಾನು ಎಂಬುವುದು ಒಂದು ಅರ್ಥಪೂರ್ಣವಾದ ಗಾದೆಮಾತು. ಜೀವನದಲ್ಲಿ ತಾಳ್ಮೆ ಎಂಬುವುದು ಬಹಳ ಮುಖ್ಯ. ಬೀಜ ಮೊಳಕೆಯೊಡೆದ ಕೂಡಲೇ ಅದು ಪಸಲು ಬಿಡಬೇಕು ಎಂದರೆ ಸಾಧ್ಯವಿಲ್ಲ. ಅದಕ್ಕೆ ಇಂತಿಷ್ಟು ಸಮಯ ಬೇಕಾಗುತ್ತದೆ. ಹಾಗೆಯೇ ಸಂಗೀತ, ನೃತ್ಯ, ಕರಾಟೆ, ಆಟೋಟ ತರಬೇತಿಗಳಿಗೆ ಸೇರಿದ ತಕ್ಷಣ ಬಹುಮಾನ, ಹಣ, ಹೆಸರು ಬರಬೇಕೆಂದರೆ ಅದು ಅಸಾಧ್ಯ. ಅದಕ್ಕೂ ಪ್ರಯತ್ನ ಹಾಗೂ ಸಮಯ ಬೇಕಾಗುತ್ತದೆ. ಅದಕ್ಕಿಂತ ಮುಖ್ಯವಾಗಿ ತಾಳ್ಮೆ ಅತ್ಯಗತ್ಯ. ತಾಳ್ಮೆಯೊಂದಿದ್ದರೆ ಸಾಧಿಸುವುದು ಅಸಾಧ್ಯವಲ್ಲ. ಜೀವನದಲ್ಲಿ ಅನೇಕ ಕಷ್ಟ-ನಷ್ಟಗಳು, ನೋವು ಸಂಕಟಗಳು, ದುಃಖ ದುಮ್ಮಾನಗಳು ಎದುರಾಗುತ್ತದೆ. ಇವೆಲ್ಲವನ್ನೂ ನಾವು ತಾಳ್ಮೆಯಿಂದ ಎದುರಿಸಿ ಜಯಿಸಬೇಕು. ಆದ್ದರಿಂದ ತಾಳ್ಮೆ ಪ್ರತಿಯೊಬ್ಬರಲ್ಲಿ ಇರಬೇಕಾದ ಅತ್ಯಮೂಲ್ಯವಾದ ಒಂದು ಗುಣವಾಗಿದೆ.

ತಾಳಿದವನು ಬಾಳಿಯಾನು ಗಾದೆಯ ವಿಸ್ತರಣೆ

ತಾಳಿದವನು ಬಾಳಿಯಾನು ಮನುಷ್ಯನ ಸಾಮಾನ್ಯ ಗುಣವೆಂದರೆ ಒಮ್ಮೆಲೇ ಎಲ್ಲವನ್ನೂ ಸಾಧಿಸಿಬಿಡಬೇಕೆಂಬುದು. ಹೇಗಾದರೂ ಮಾಡಿ ಆದಷ್ಟು ಬೇಗ ಎತ್ತರಕ್ಕೆ ಬೆಳೆಯಬೇಕು. ಸಮಾಜದಲ್ಲಿ ವಿಶೇಷ ಗೌರವ ಸಂಪಾದಿಸಬೇಕು ಎಂಬುದೇ ಆಗಿದೆ. ಆದರೆ ಇವುಗಳನ್ನು ಪಡೆಯಲು ಕೇವಲ ಮಾತಿನಿಂದ ಸಾಧ್ಯವಾಗದು. ಅದಕ್ಕೆ ಸಮಯ ಬರಬೇಕು. ಪ್ರಯತ್ನ ನಿರಂತರವಾಗಿ ಸಾಗಬೇಕು ಎಂಬುದು ಈ ಗಾದೆಯ ಸಾಮಾನ್ಯ ಅರ್ಥ. ಮನುಷ್ಯ ಸಮಾಜ ಜೀವಿ. ಸಮಾಜದಲ್ಲಿ ಅವನು ಎಲ್ಲರೊಡನೆ ಬೆರೆತು ಬಾಳಬೇಕಾಗುತ್ತದೆ .ಜೀವನದಲ್ಲಿ ತಾಳ್ಮೆಯು ಅತಿ ಮುಖ್ಯವಾದುದು. ದಾಸರ ನುಡಿಯಂತೆ ‘ತಾಳುವಿಕೆಗಿಂತ ತಪವಿಲ್ಲ’. ಸುಖ ಬಂದಾಗ ಹಿಗ್ಗದೇ, ದುಃಖ ಬಂದಾಗ ಕುಗ್ಗದೇ ಎರಡನ್ನು ಸಮಾನಭಾವದಿಂದ ಸ್ವೀಕರಿಸುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಇದಕ್ಕೆ ತಾಳ್ಮೆ ಬೇಕು. ತಾಳ್ಮೆಗೆಟ್ಟು ತೆಗೆದುಕೊಳ್ಳುವ ಆತುರದ ನಿರ್ಧಾರವು ಭವಿಷ್ಯಕ್ಕೇ ಮಾರಕವಾಗುತ್ತದೆ. ದಾಸರು ಹೇಳಿದ್ದಾರೆ. ಜೀವನದ ಕಷ್ಟಗಳನ್ನು ಎದುರಿಸಲಾಗದೇ ತಾಳ್ಮೆಗೆಟ್ಟು ದುಡುಕಿನಿಂದ ಹೇಡಿತನದ ನಿರ್ಧಾರಕ್ಕೆ ಬರಬಾರದು.ಜೀವನದಲ್ಲಿ ಅನೇಕ ಕಷ್ಟ-ನಷ್ಟಗಳು, ನೋವು ಸಂಕಟಗಳು, ದುಃಖಗಳನ್ನು ಎದುರಾಗುತ್ತದೆ. ಇವೆಲ್ಲವನ್ನೂ ನಾವು ತಾಳ್ಮೆಯಿಂದ ಎದುರಿಸಿ ಜಯಿಸಬೇಕು. ಆದ್ದರಿಂದ ತಾಳ್ಮೆ ಪ್ರತಿಯೊಬ್ಬರಲ್ಲಿ ಇರಬೇಕಾದ ಅತ್ಯಮೂಲ್ಯವಾದ ಒಂದು ಗುಣವಾಗಿದೆ.

ತಾಳ್ಮೆಯಿಂದಿದ್ದರೆ ನಂಬಿಕೆಯು ನೆಲೆಸುತ್ತದೆ. ಪ್ರೀತಿ, ಭರವಸೆ, ನಂಬಿಕೆಗಿರುವ ಆಗಾಧ ಶಕ್ತಿಯನ್ನು ಲೋಕವೇ ಮನ್ನಿಸಿ, ಗೌರವಿಸಿ, ನಮಿಸುತ್ತದೆ. ತಾಳ್ಮೆಯೆಂದರೆ ಕೇವಲ ಒಂದು ಶಕ್ತಿ ಮಾತ್ರವಲ್ಲ, ಅದೊಂದು ಬಗೆಯ ಜ್ಞಾನವೂ ಹೌದು. ಎಲ್ಲಾ ಸಮಸ್ಯೆಗಳಿಗೂ ಒಂದಲ್ಲಾ ಒಂದು ಪರಿಹಾರವಿದ್ದೇ ಇದೆ ಎಂಬ ಸತ್ಯವನ್ನು ಅರ್ಥಮಾಡಿಕೊಂಡು ಒಪ್ಪಿಕೊಳ್ಳಲೇ ಬೇಕು. ತಾಳ್ಮೆಯು ಇದನ್ನು ಪ್ರತಿಪಾದಿಸುತ್ತದೆ. ಕೆಸರು ತುಂಬಿ ರಾಡಿಯಾಗಿರುವ ಕೊಳದಲ್ಲಿನ ನೀರನ್ನು ಹಾಗೇ ಬಿಟ್ಟರೆ ನಿಧಾನವಾಗಿ ಮಣ್ಣೆಲ್ಲಾ ತಳಭಾಗವನ್ನು ಸೇರಿ ನೀರು ತಿಳಿಯಾಗುತ್ತದೆ. ಹರಿಯಲು ಬಿಟ್ಟರೆ ಪರಿಶುದ್ಧವೂ ಆದೀತು. ಹಾಗೆಯೇ ಬದುಕಿನಲ್ಲೂ ಕೆಲವೊಂದು ಕಷ್ಟಗಳು ನಮ್ಮಲ್ಲಿ ಆತಂಕ, ತಳಮಳ ಕಳವಳಗಳನ್ನುಂಟು ಮಾಡುತ್ತವೆ, ನಾವು ಸಂಕಷ್ಟಗಳಿಗೆ ನಲುಗದೆ ತಾಳ್ಮೆಯಿಂದ ಕಾದದ್ದೇ ಆದರೆ ಮುಂದೊಂದು ದಿನ ಆ ಕಷ್ಟಗಳೇ ಕಾಣದಂತೆ ಕಮರಿಹೋಗುತ್ತವೆ. ತಾಳ್ಮೆಯ ಕೊರತೆಯಿಂದ ತಲೆದೋರುವ ತಾಪತ್ರಯಗಳು ಊಹಿಸಲಸಾಧ್ಯ. ತಾಳ್ಮೆಯ ಅನುಪಸ್ಥಿತಿಯಿಂದ ಸುಮಧುರ ಸಂಬಂಧಗಳು ಹಾಳಾಗುತ್ತವೆ. ಗೆಲುವನ್ನು ಪಡೆವ ಜಾಗದಲ್ಲಿ ನಾವು ಸೋಲನ್ನು ಕಂಡದ್ದೇ ಆದರೆ ತಾಳ್ಮೆಯನ್ನು ಮರೆತದ್ದೇ ಅದಕ್ಕೆ ಕಾರಣವಾಗಿರಬಹುದು. ಶೃತಿಬದ್ಧ ಹಾಡುಗಾರಿಕೆ ಹಾಗೂ ನೃತ್ಯಕ್ಕೆ ತಾಳವೆಷ್ಟು ಮುಖ್ಯವೋ ಬಾಳಿಗೆ ತಾಳ್ಮೆ ಆಷ್ಟೇ ಮುಖ್ಯ. ಅದಕ್ಕೇ ಹೇಳುವುದು ಬದುಕಿನಲ್ಲಿ ತಾಳ್ಮೆಬೇಕು. ತಾಳದವನು ಬಳಲಿಯಾನು. ನಾವು ಬಹಳಷ್ಟು ಕೆಲಸಗಳನ್ನು ಆತುರಾತುರವಾಗಿ ಮಾಡಿಬಿಡುತ್ತೇವೆ. ಸರಿಯಾದ ಫಲ ಸಿಗದೇ ಇದ್ದಾಗ ಇನ್ನಾರನ್ನೋ ದೂರುತ್ತೇವೆ. ಮಾಡುವ ಕೆಲಸ ಸಣ್ಣದೇ ಇರಲಿ, ದೊಡ್ಡದೇ ಆಗಿರಲಿ, ಸಹನೆಯಿಂದ ವಿವೇಚನೆಯೊಂದಿಗೆ ಮಾಡಿದರೆ ಅದರ ಫಲ ನಿಜಕ್ಕೂ ಅತ್ಯುತ್ತಮವಾಗಿರುತ್ತದೆ. ತಾಳ್ಮೆಗೆ ಕಾಯುವ ಗುಣ ಬೇಕು. ‘ಆತುರಗಾರನಿಗೆ ಬುದ್ಧಿಮಟ್ಟ’ ಜೀವನದಲ್ಲಿ ಸುಖ, ಶಾಂತಿ, ಸಮೃದ್ಧಿಯನ್ನು ಪಡೆಯಬೇಕೆಂದರೆ ಕಾಯಬೇಕು. ಕಾಯುವಂಥ ಸಹನೆ ಬೇಕು. ತಾಳ್ಮೆಯಿಂದ ತಪಸ್ಸು ಮಾಡಿದಾಗ ಸಿಗುವ ಫಲ ತುಂಬ ರುಚಿಯಾಗಿರುತ್ತದೆ, ಮಹತ್ವದ್ದಾಗಿರುತ್ತದೆ ಎಂಬಮಾತು ಸಾರ್ವಕಾಲಿಕ ಸತ್ಯ. ಆ ಗುಣ ಇಲ್ಲದವರು ತಮ್ಮದೇ ಭ್ರಮಾಲೋಕದಲ್ಲಿ ಮುಳುಗಿ ಹೋಗುತ್ತಾರೆ. ನಾವು ಎಷ್ಟೇ ಒಳ್ಳೆಯ ಗುಣಗಳನ್ನು ಹೊಂದಿದ್ದರೂ ತಾಳ್ಮೆಯೊಂದಿಲ್ಲದಿದ್ದರೆ ಆ ಒಳ್ಳೆಯ ಗುಣಗಳಿಗೆ ಬೆಲೆ ಸಿಗುವುದು ದುಸ್ತರ. ಹಿರಿಯರು ಹೇಳುವಂತೆ ಎಲ್ಲವೂ ವಿಫಲವಾದಾಗ ತಾಳ್ಮೆ ಸಫಲವಾಗುತ್ತದೆ.

ಇತರೆ ವಿಷಯಗಳು :

ಅತಿ ಆಸೆ ಗತಿಗೇಡು ಗಾದೆಯ ಪ್ರಬಂಧ

ಇಂಟರ್ನೆಟ್ ಕ್ರಾಂತಿ ಪ್ರಬಂಧ

Leave a Comment