ರಶ್ಮಿಕಾ ಮಂದಣ್ಣನ ಯಾಕ್‌ ಬ್ಯಾನ್‌ ಮಾಡ್ಬೇಕು? ಪಾಪ ಅಂದರು ಭಾವನ ಯಾಕೆ ಗೊತ್ತಾ? ಕೋಪಗೊಂಡ ಡಾಲಿ ಧನಂಜಯ್

ಸ್ಕೂಲ್‌ ಮಾಸ್ಟರ್ ನ ಮಗ, ಇಂಜಿನಿಯರ್‌, ನಾಟಕಗಾರ, ನಾಯಕ ನಟ, ಖಳನಾಯಕ ಕೂಡ, ಕನ್ನಡ ಚಿತ್ರರಂಗದಲ್ಲಿ ರಾಟೆಯನ್ನು ತಿರುಗಿಸಿದ ಡಾಲಿ ಧನಂಜಯ್.‌ ಅವರು ಸಿನಿಮಾ ಮಾಡುವಾಗ ಜನರಿಂದ ಅವಮಾನವನ್ನು ಅನುಭವಿಸಿದ್ದಾರೆ. 23 ಆಗಸ್ಟ್‌ 1986 ರಲ್ಲಿ ಹಾಸನಜಿಲ್ಲೆಯ, ಅರಸಿಕೆರೆ ತಾಲೂಕಿನ ಕಾಳೆನ ಹಳ್ಳಿಯಲ್ಲಿ ಜನಿಸಿದ ನಮ್ಮ ನಾಯಕ ನಟ.

ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ವೈಯಕ್ತಿಕ ಪರಿಶ್ರಮದಿಂದ ತನ್ನದೇ ಆದ ಪ್ರತಿಭೆಯಿಂದ ಮೇಲೆ ಬಂದವರು ಡಾಲಿ ಧನಂಜಯ್. ಧನಂಜಯ್ ಅವರು ನಾಯಕನಾಗಿ ಕನ್ನಡಿಗರ ಮನೆ ಗೆದ್ದರು. ಇದೀಗ ನಿರ್ದೇಶಕರಾಗಿ, ನಿರ್ಮಾಪಕನಾಗಿ ಕೂಡ ಡಾಲಿ ಧನಂಜಯ್ ಕನ್ನಡದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಹಾಗಾಗಿ ಅವರ ಬಹುತೇಕ ಎಲ್ಲಾ ಸಿನಿಮಾಗಳು ಕಾಣುತ್ತಿವೆ. ಜೊತೆಗೆ ಸಿನಿಮಾಕ್ಕೆ ಸಂಬಂಧಪಟ್ಟ ಹಾಗೆ ಪ್ರಚಾರಕ್ಕಾಗಿ ಸಂದರ್ಶನಗಳಲ್ಲಿ ಕೂಡ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಡಾಲಿ ಧನಂಜಯ್.

ಡಾಲಿ ಧನಂಜಯ್ ಅವರು ಇತ್ತೀಚಿಗೆ ಸಿನಿಮಾ ಪ್ರಮೋಷನ್ ಸಂದರ್ಭದಲ್ಲಿ ಮೀಡಿಯಾದವರು ಕೇಳಿದ ಪ್ರಶ್ನೆ ಒಂದಕ್ಕೆ ಉತ್ತರ ನೀಡಿದ್ದಾರೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ರಶ್ಮಿಕಾ ಮಂದಣ್ಣ ಅವರನ್ನು ಕನ್ನಡದಿಂದ ಬ್ಯಾನ್ ಮಾಡುತ್ತಾರೆ. ಈ ವಿಷಯದ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಸಂದರ್ಶನಕಾರರು ಡಾಲಿ ಧನಂಜಯ್ ಅವರಿಗೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಡಾಲಿ ಧನಂಜಯ್ ಇಂತಹ ಪ್ರಶ್ನೆಗಳನ್ನೆಲ್ಲ ಯಾಕೆ ಸುಮ್ಮನೆ ಕೇಳ್ತೀರಾ? ಇಷ್ಟಕ್ಕೂ ಅವರನ್ನ ಯಾಕೆ ಬ್ಯಾನ್ ಮಾಡಬೇಕು?

ಡಾಲಿ ಧನಂಜಯ್ ಹೇಳಿದರು ಆಕೆ ಒಬ್ಬ ನಟಿ, ಅವರಿಗೆ ಬೇಕಾದ ಹಾಗೇ ಅವರು ಬದುಕುತ್ತಿದ್ದಾರೆ. ಬ್ಯಾನ್‌ ಮಾಡೋಕೆ ಏನು ಕಾರಣ ಎಂದರು. ಇಂತ ಪ್ರಶ್ನೆಯನ್ನು ಕೇಳುವಾಗ ನೀವು ಕೂಡ ಯೋಚನೆ ಮಾಡಬೇಕು. ಇದಕ್ಕೆ ಅವರ ಪಕ್ಕದಲ್ಲೇ ಕುಳಿತ್ತಿದ್ದ ಭಾವನ ಖಡಕ್‌ಯಾಗಿ ಉತ್ತರ ನೀಡಿದರು. ಪಾಪ ಅವಳು, ನಾವು ಕಲಾವಿದರು ನಮ್ಮ ವೈಯಕ್ತಿಕ ಜೀವನಕ್ಕೂ ಸಿನಿಮಾಕ್ಕೂ ಸಂಬಂಧ ಇಲ್ಲ. ನಾವು ಹೆಮ್ಮೆ ಪಡಬೇಕು ಕನ್ನಡದ ಒಬ್ಬ ಹುಡುಗಿ ಬೇರೆ ಭಾಷೆಯಲ್ಲಿ ಇಷ್ಟು ಚೆನ್ನಾಗಿ ಹೆಸರು ಮಾಡಿದ್ದಾಳೆ, ಒಬ್ಬ ಕಲಾವಿದ ನಟ ಆಗಿರಲಿ ಅಥವಾ ನಟಿ ಆಗಿರಲಿ ಬೇರೆ ಭಾಷೆಗೆ ಹೋದರು ಯಾರು ರೆಡ್ ಕಾರ್ಪೆಟ್ ಹಾಕಿ ಕರೆಯುವುದಿಲ್ಲ. ಅಲ್ಲಿ ನಾವು ನಮ್ಮನ್ನ ಪ್ರೂಫ್ ಮಾಡಿಕೊಂಡರೆ ಮಾತ್ರ ನಮ್ಮ ಹತ್ತಿರ ಬರುತ್ತಾರೆ. ಆಕೆಯ ಪ್ರತಿಭೆ ಸಾಧನೆಗೆ ಕಾರಣ ಎಂದರು.

ಇತರೆ ವಿಷಯಗಳು:

ಬೆಂಗಳೂರು ಏರ್ಪೋರ್ಟ್​ನಲ್ಲಿ ಸ್ಯಾಂಡಲ್​ವುಡ್ ಪ್ರಣಯ ಪಕ್ಷಿಗಳು ಕ್ಯಾಮರಾ ಕಣ್ಣಿಗೆ ಸಿಕ್ಕಿ ಬಿದ್ದಿದ್ದಾರೆ 

ಅಭಿಷೇಕ್‌ ಅಂಬರೀಶ್‌ ಮದ್ವೆ ಬಗ್ಗೆ ಅವರ ತಾಯಿ ಸುಮಲತಾ ದೊಡ್ಡ Shock ಕೊಟ್ಟಿದ್ದಾರೆ

Leave a Comment